Gujarat: ಒಂದು ರೂಪಾಯಿಯನ್ನೂ ಪಡೆಯದೆ 138 ಜೋಡಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಹೆಂಡತಿಯಿಂದಲೇ ಡಿವೋರ್ಸ್!!

Latest national news Lawyer who stopped divorces gets diversed by wife in Gujarat

Gujarat: ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ ರಾಜಿ ಸಂಧಾನದ ಮೂಲಕವೇ 138 ಜೋಡಿಗಳ ವಿಚ್ಛೇದನವನ್ನು ತಡೆದು ಅವರನ್ನು ಒಂದುಗೂಡಿಸಿದ್ದ ವಕೀಲನಿಗೇ ಪತ್ನಿ ವಿಚ್ಛೇದನ(Divorce) ನೀಡಿದ್ದಾಳೆ.

ಹೌದು, ಸುಮಾರು 16 ವರ್ಷಗಳಿಗಿಂತ ಹೆಚ್ಚು ವೃತ್ತಿಪರ ಅನುಭವ ಹೊಂದಿರುವ ಗುಜರಾತಿ(Gujarat)ನ ವಕೀಲರೊಬ್ಬರು ತಮ್ಮ ವೃತ್ತಿಜೀವನದಲ್ಲಿ 130ಕ್ಕೂ ಅಧಿಕ ಪ್ರಕರಣಗಳಲ್ಲಿ ವಿಚ್ಛೇದನಗಳಾಗುವುದನ್ನು ತಡೆದಿದ್ದಾರೆ. ಇವರು ವಿಚ್ಛೇದನ ಕೋರಿ ತನ್ನ ಬಳಿ ಬರುವ ದಂಪತಿಗಳನ್ನು ಕೂರಿಸಿ ಕೌನ್ಸೆಲಿಂಗ್(Counseling) ಮಾಡಿ ಬೇರೆಯಾಗದಂತೆ ಮನವರಿಕೆ ಮಾಡಿಸಿ ನ್ಯಾಯಾಲಯದ ಬದಲು ಮನೆಗೆ ಕಳುಹಿಸುತ್ತಾರೆ. ಆದರೆ ದುರದೃಷ್ಟವಶಾತ್ ಕೊನೆಗೆ ಇವರಿಗೆ ಪತ್ನಿಯೇ ವಿಚ್ಛೇದನ ನೀಡಿದ್ದಾರೆ.

ಅಂದಹಾಗೆ ಗುಜರಾತ್‌ನ ಅಹಮಬಾದಾಬ್ ಹೈಕೋರ್ಟ್‌ನಲ್ಲಿ(Ahamadabad high court) ಕೆಲಸ ಮಾಡುತ್ತಿರುವ ವಕೀಲರ ಹೆಸರನ್ನು ಬಹಿರಂಗಪಡಿಸಿಲ್ಲ. ತಮ್ಮ 16 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು, ಸಾಂಸಾರಿಕ ಜೀವನ ಸಾಕೆನಿಸಿ ದೂರವಾಗಲು ವಿಚ್ಛೇದನಕ್ಕಾಗಿ ಬಂದಿದ್ದ 138 ಜೋಡಿಗಳ ಬೇರ್ಪಡುವಿಕೆಯನ್ನು ತಡೆದಿದ್ದಾರೆ. ಆ ಜೋಡಿಗಳು ಈಗ ಸಂತಸದಿಂದ ಜತೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೀಗ ಅವರ ಹೆಂಡತಿಯೇ ವಿಚ್ಛೇದನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಚ್ಛೇದನ ಪಡೆಯಲು ನ್ಯಾಯವಾದಿಯ(Layer) ಪತ್ನಿ ನೀಡಿರುವ ಕಾರಣವೂ ಅವರ ಈ ಸಮಾಜ ಸೇವೆ(Social work). ತನ್ನ ಬಳಿ ಬಂದವರನ್ನು ವಿಚ್ಛೇದನಕ್ಕೆ ಬಿಡದ ಕಾರಣ ಪ್ರಕರಣಗಳು ಕಡಿಮೆಯಾದವು. ಬಂದವರಿಗೆ ಕೌನ್ಸೆಲಿಂಗ್ ನೀಡಿದರೂ ಯಾವುದೇ ಶುಲ್ಕ ವಸೂಲಿ ಮಾಡದ ಕಾರಣ ಆರ್ಥಿಕ ಸಂಕಷ್ಟ ಶುರುವಾಗಿದೆ. ಇದರಿಂದ ಕುಟುಂಬದಲ್ಲಿ ಜಗಳ ಶುರುವಾಗಿದೆ. ಕೊನೆಗೆ ಬೇಸತ್ತ ವಕೀಲರ ಪತ್ನಿ ಪತಿಯಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ದಂಪತಿಗೆ ಒಬ್ಬ ಮಗಳಿದ್ದಾಳೆ. ಮನಸ್ತಾಪದ ಕಾರಣ ಗಂಡ- ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳು ಕೂಡ ವಕೀಲಿಕೆ ಅಭ್ಯಾಸ ಮಾಡುತ್ತಿದ್ದಾಳೆ. ತಾಯಿಯ ಜತೆಗೆ ವಾಸಿಸುತ್ತಿರುವ ಆಕೆ, ಡಿವೋರ್ಸ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅಮ್ಮನೊಟ್ಟಿಗೆ ಇರುವುದಾಗಿ ಹೇಳಿದ್ದಾಳೆ. ಅಪ್ಪ- ಅಮ್ಮನ ವಿಚ್ಛೇದನ ಅಧಿಕೃತಗೊಂಡ ನಂತರ ಅಪ್ಪನ ಜತೆ ನೆಲೆಸುವುದಾಗಿ ಆಕೆ ತಿಳಿಸಿದ್ದಾಳೆ.

ಪುಕ್ಕಟೆ ಸೇವೆಗೆ ಕಾರಣವೇನು?
ತಮ್ಮ ಬಹಳ ಆತ್ಮೀಯ ಸಂಬಂಧಿಕರೊಬ್ಬರು ವಿಚ್ಛೇದನ ಪಡೆದು ನೋವು ಅನುಭವಿಸಿದ್ದರು. ಇದನ್ನು ಕಣ್ಣಾರೆ ಕಂಡ ತಾವು, ತಮ್ಮ ಬಳಿ ಯಾರೇ ವಿಚ್ಛೇದನಕ್ಕೆ ಬಂದರೂ ಒಂದು ರೂಪಾಯಿ ಕೂಡ ಪಡೆಯದೆ ಅವರಿಗೆ ಕೌನ್ಸೆಲಿಂಗ್ ಮಾಡಿ ರಾಜಿ ಮಾಡಿಸುತ್ತಿರುವುದಾಗಿ ವಕೀಲ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಗಂಡ ಮತ್ತು ಹೆಂಡತಿ ಜತೆಯಾಗಿ ವಾಸಿಸುವಂತೆ ವಿಚ್ಛೇದನದ ವಿರುದ್ಧ ಅಭಿಯಾನ ಕೂಡ ನಡೆಸಿದ್ದಾರೆ.

ಇದನ್ನೂ ಓದಿ: 1 ರೂ. ಬಿರಿಯಾನಿಗೆ ಮುಗಿಬಿದ್ದ ಜನ, ಬಿರಿಯಾನಿ ಹೊಡೆದು ವಾಪಸ್ಸಾಗುವಾಗ ಸರ್ಕಾರಕ್ಕೆ ಕಕ್ಕಿದ್ರು 250 ರೂ.

Leave A Reply

Your email address will not be published.