Men Health: ಪುರುಷರು ಲೈಂಗಿಕ ಆರೋಗ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡೋದು ಬೆಸ್ಟ್!
Health news Relationship problems and solutions Important things men should do to maintain good health
Men Health: ಫಲವತ್ತತೆ ವಿಷಯದಲ್ಲಿ ಪುರುಷರಿಗೆ ತಮ್ಮ ದೇಹದಲ್ಲಿಯೇ ಜನನಾಂಗದ ಕಾರ್ಯ ವ್ಯವಸ್ಥೆಗೆ ಬೇಕಾದ ವಿವಿಧ ಬಗೆಯ ಪೋಷಕಾಂಶಗಳ ಕೊರತೆಯಿಂದಾಗಿ ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸಾಮಾನ್ಯವಾಗಿ ಪುರುಷರಿಗೆ ರೋಗ ನಿರೋಧಕ ಶಕ್ತಿ ಮತ್ತು ಉತ್ತಮವಾದ ದೇಹ ಇದ್ದರಷ್ಟೇ ಸಾಕಾಗುವುದಿಲ್ಲ. ಹೌದು, ಫಲವತ್ತತೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಇರದಂತೆ ನೋಡಿಕೊಳ್ಳುವುದು ಸಹ ಮುಖ್ಯ ಅಂಶವಾಗಿದೆ. ಆದ್ದರಿಂದ ಡಾ. ಶಕಿರ್ ತಬ್ರೇಜ್ ಪ್ರಕಾರ, ಆರೋಗ್ಯಯುತ ಸಂತಾನೋತ್ಪತ್ತಿಗಾಗಿ (Men Health) ಮಾಡಬೇಕಾದ ಮತ್ತು ಮಾಡಬಾರದ ಕೆಲವಷ್ಟು ಸಂಗತಿಗಳು ಇಲ್ಲಿವೆ.
ಮುಖ್ಯವಾಗಿ ಪುರುಷರನ್ನು ದೀರ್ಘಕಾಲದ ಒತ್ತಡ ಅಥವಾ ಆತಂಕವು ಫರ್ಟಿಲಿಟಿ ಉತ್ಪಾದನೆಯನ್ನು ದುರ್ಬಲವಾಗಿಸುತ್ತದೆ ಮತ್ತು ಲೈಂಗಿಕ ತೃಪ್ತಿಯ ಪ್ರಜ್ಞೆಯನ್ನು ಕಡಿಮೆ ಮಾಡುತ್ತದೆ. ಒತ್ತಡವು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಟೆಸ್ಟೋಸ್ಟೆರಾನ್ ಮಟ್ಟದ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಖಿನ್ನತೆ ಮತ್ತು ಆತಂಕದಂತಹ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ಪಡೆದರೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳನ್ನು ಉಂಟು ಮಾಡಬಹುದು.
ಕನಿಷ್ಠ 45 ನಿಮಿಷಗಳ ಕಾಲ ವ್ಯಾಯಾಮ ಅಳವಡಿಸಿಕೊಳ್ಳುವುದು ಅಂದರೆ ಸೈಕ್ಲಿಂಗ್ ನಿಂದ ಹಿಡಿದು ಈಜುವವರೆಗೆ ಯಾವುದೇ ವ್ಯಾಯಾಮ ನಿಮ್ಮನ್ನು ಆರಾಮದಾಯಕವಾಗಿಸುತ್ತದೆ. ಮತ್ತು ಮುಖ್ಯವಾಗಿ ಸ್ಥಿರವಾಗಿರುವ ಯಾವುದಾದರೂ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಆರಾಮದಾಯಕ ಭಾವನೆ ನೀಡುವ ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.
ಇನ್ನು ಜನನಾಂಗ ಸರಿಯಾಗಿ ನಿಮಿರದಿರುವುದು ಅಥವಾ ಅಕಾಲಿಕ ಸ್ಖಲನದಂತಹ ಸಮಸ್ಯೆಗಳು ಅನೇಕ ದಂಪತಿಗಳ ವೈಯಕ್ತಿಕ ಜೀವನದಲ್ಲಿ ವಿನಾಶವನ್ನು ಉಂಟುಮಾಡಬಹುದು. ಇದಕ್ಕೆ ಹೆಚ್ಚಾಗಿ ಔಷಧಿಗಳ ಅಗತ್ಯವಿರುವುದಿಲ್ಲ ಮತ್ತು ಉತ್ತಮ ಸಮಾಲೋಚನೆ ಸಾಕಾಗುತ್ತದೆ. ಹರ್ಪಿಸ್, ಸಿಫಿಲಿಸ್, ಕ್ಲಮೈಡಿಯ, ಗೊನೊರಿಯಾ ಮತ್ತು ಇನ್ನೂ ಅನೇಕ ಸೋಂಕುಗಳಿಂದ ದೂರವಿರಲು ಸುರಕ್ಷಿತ ಲೈಂಗಿಕತೆಯನ್ನು ಯಾವಾಗಲೂ ಅಭ್ಯಾಸ ಮಾಡುವುದು ಕಡ್ಡಾಯವಾಗಿದೆ.
ಪುರುಷರ ಫಲವತ್ತತೆಗೆ ಸಂಸ್ಕರಿಸಿದ ಮತ್ತು ಜಂಕ್ ಫುಡ್ ಹಾರ್ಮೋನುಗಳು ಅಡ್ಡಿಪಡಿಸುತ್ತದೆ. ದೀರ್ಘಾವಧಿಯಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇರಿದಂತೆ ಆರೋಗ್ಯ ಹಾನಿಗೊಳಿಸುತ್ತದೆ ಎಂದು ಸಾಬೀತಾಗಿದ್ದು, ಮೊಟ್ಟೆ, ಹಣ್ಣುಗಳು, ವಾಲ್ನಟ್ಸ್, ಹೆಚ್ಚಿನ ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಪ್ರೋಟೀನ್, ಆಂಟಿ ಆಕ್ಸಿಡೆಂಟ್ ಗಳು, ವಿಟಮಿನ್ ಇ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ವೀರ್ಯದ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಿಸಬಹುದು.
ಇನ್ನು ಧೂಮಪಾನವು ಮತ್ತೊಂದು ‘ಒತ್ತಡದ ಬಸ್ಟರ್’ ಆಗಿದ್ದು ಅದು ಪ್ರತಿಯಾಗಿ ವೀರ್ಯಾಣು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಧೂಮಪಾನವನ್ನು ಮತ್ತು ಹೆಚ್ಚಿನ ಆಲ್ಕೋಹಾಲ್ ನ್ನು ತ್ಯಜಿಸಿ. ಅದಲ್ಲದೆ ಹೆಚ್ಚಾಗಿ ಲ್ಯಾಪ್ ಟಾಪ್ಗಳನ್ನು ತೊಡೆಯ ಮೇಲಿಟ್ಟುಕೊಳ್ಳಬೇಡಿ ಎಂದು ಈ ಮೂಲಕ ಸಲಹೆ ನೀಡಲಾಗಿದೆ.
ಇದನ್ನೂ ಓದಿ: ನೀವು ಪ್ರತಿದಿನ ಸೋರೆಕಾಯಿ ರಸ ಕುಡಿಯುತ್ತೀರಾ? ಪ್ರಯೋಜನಗಳು, ಸಮಸ್ಯೆಗಳನ್ನು ತಿಳಿಯಿರಿ