Constitution preamble: ಶಾಲಾ-ಕಾಲೇಜುಗಳಲ್ಲಿ ನಾಡಗೀತೆ, ರಾಷ್ಟ್ರಗೀತೆ ನಂತ್ರ ‘ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಘೋಷಣೆ
Karnataka education news schools mandated to read constitution preamble with prayers Karnataka chief minister Siddaramaiah declared
Constitution preamble : ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ( Karnataka Cabinet Meeting )”ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ”ಗೊಳಿಸಲಾಗಿದೆ ಎಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಅಲ್ಲದೇ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಪಠ್ಯಪುಸ್ತಕಗಳನ್ನು ಬದಲಾಯಿಸಿದೆ, ಸೇರಿಸಿದ ಪಾಠಗಳ ಬಗ್ಗೆ ಚರ್ಚೆ ನಡಸಲಾಯಿತು. ಸಂಪುಟ ಕೆಲವು ನಿರ್ಧಾರ ತೆಗೆದುಕೊಂಡಿದೆ ತಿಳಿಯಬಹುದಾಗಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೆಪಿಎಸ್ ಸಿ ಸದಸ್ಯರ ನೇಮಕಕ್ಕೆ ಸಂಪುಟ ನಿರ್ಧಾರ ಕೈಗೊಳ್ಳಲಾಗಿದೆ.ವೃಷಭಾವತಿ ವ್ಯಾಲಿ ಯೋಜನೆ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ. ಸುಮಾರು 1081 ಕೋಟಿ ವೆಚ್ಚಕ್ಕೆ ಅನುಮತಿ ನೀಡಲಾಗಿದೆ. ಸಂವಿಧಾನ ಪ್ರಿಯಾಂಬಲ್ (Constitution preamble)ಶಾಲಾ ಕಾಲೇಜಿಗಳಲ್ಲಿ ಓದುವುದಕ್ಕೆ ಅವಕಾಶ ನೀಡಲಾಗಿದೆ. ನಾಡಗೀತೆ, ರಾಷ್ಟ್ರಗೀತೆ ನಂತರ ಓದುವುದು ಕಡ್ಡಾಯಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ
ಇದನ್ನೂ ಓದಿ: ಜೊತೆ ಸೇರಿದ 1954 ನೇ ಇಸವಿಯ 10 ನೇ ಕ್ಲಾಸಿನ ಕ್ಲಾಸ್ ಮೇಟ್ಸ್: ಏನ್ ಉತ್ಸಾಹ, ಏನ್ ಮಸ್ತಿ ? ವಿಡಿಯೋ ಸಕತ್ ವೈರಲ್ !