Annamalai: ‘ಮಿಸ್ಟರ್ ಸ್ಟಾಲಿನ್ ದಮ್ ಇದ್ರೆ ಒಬ್ಬ ಬಿಜೆಪಿಗಗನ್ನು ಮುಟ್ಟಿನೋಡಿ ಸಾಕು’!! ತಮಿಳುನಾಡು ಸಿಎಂಗೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸವಾಲು!!

karanataka news BJP President Annamalai Challenges Tamil Nadu CM

Annamalai: ಬಿಜೆಪಿ(BJP)ವಿರುದ್ಧ ಕಠೋರ ಮಾತುಗಳನ್ನಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್​ಗೆ(Tamilnadu CM MK Stalin) ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ(Annamalai) ಅವರು ನಿಮಗೆ ತಾಕತ್ತನ್ನೋದು ಇದ್ರೆ ನಮ್ಮನ್ನು ಮುಟ್ಟಿ ನೋಡಿ ಎನ್ನುವ ಮೂಲಕ ಖಡಕ್ ಎಚ್ಚರಿಕೆಯೊಂದಿಗೆ ಸವಾಲೆಸೆದಿದ್ದಾರೆ.

ಕೆಲದಿನಗಳ ಹಿಂದೆ ಡಿಎಂಕೆ(DMK) ಪಕ್ಷವು ಪ್ರತಿಯಾಗಿ ನೀಡುವ ಯಾವುದೇ ರೀತಿಯ ಪ್ರತೀಕಾರವನ್ನು ಬಿಜೆಪಿಗೆ(BJP) ನಿಭಾಯಿಸಲು ತುಂಬಾ ಕಷ್ಟವಾಗಬಹುದು ಎಂದು ಸ್ಟಾಲಿನ್ ಟ್ವೀಟ್​ ಮೂಲಕ ಎಚ್ಚರಿಕೆ ನೀಡಿ, ಸೇಡು ತೀರಿಸಿಕೊಳ್ಳಲು ಕೇಂದ್ರದ ಏಜೆನ್ಸಿಗಳನ್ನು ನಿಯೋಜಿಸುವ ಬದಲು ಮುಖಾಮುಖಿ ಬರುವಂತೆ ಸವಾಲು ಹಾಕಿದ್ದರು. ಇದು ಬೆದರಿಕೆಯಲ್ಲ ಬದಲಿಗೆ ಇದು ಎಚ್ಚರಿಕೆ ಎಂದು ಕೂಡ ಹೇಳಿದ್ದರು. ಅಲ್ಲದೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶವು ಅಘೋಷಿತ ತುರ್ತು ಪರಿಸ್ಥಿತಿಯನ್ನು(Emergency) ಅನುಭವಿಸುತ್ತಿದೆ ಎಂದು ಸ್ಟಾಲಿನ್​ ಕಿಡಿಕಾರಿದ್ದರು. ಇದಕ್ಕೆಲ್ಲ ಸೇರಿ ಅಣ್ಣಾಮಲೈ ಅವರು ಒಂದೇ ಮಾತಿನಲ್ಲಿ ತಿರುಗೇಟು ನೀಡಿದ್ದಾರೆ.

ಹೌದು, ಇಂದು ಶಿವಗಂಗಾದಲ್ಲಿ(Shivaganga) ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ಬೆದರಿಕೆ ಹೇಳಿಕೆಗಳನ್ನು ನೀಡುವ ಮೂಲಕ ಸಿಎಂ ಸ್ಟಾಲಿನ್​ ಅವರು ಎಲ್ಲ ಮಿತಿಗಳನ್ನು ಮೀರಿದ್ದಾರೆ. ನಿಮ್ಮ ಬೆದರಿಕೆಗಳಿಗೆ ನಾವು ಭಯಬೀತರಾಗುತ್ತೇವೆ ಅಂತ ನೀವು ಅಂದುಕೊಂಡಿದ್ದೀರಾ? ನಿಮಗೆ ತಾಕತ್ತಿದ್ದರೆ ನಮ್ಮಲ್ಲಿ ಯಾರಾದರೂ ಒಬ್ಬರನ್ನು ಮುಟ್ಟುವ ಪ್ರಯತ್ನ ಮಾಡಿ. ನೀವು ಏನು ಕೊಡುತ್ತೀರೋ ಅದನ್ನು ಮರಳಿ ಪಡೆಯುತ್ತೀರಿ ಎಂದು ಅಣ್ಣಾಮಲೈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅಲ್ಲದೆ “ಸಹೋದರಿ ಕನ್ನಿಮೋಳಿ(Kannimoli) ಅವರನ್ನು ಬಂಧಿಸಿದ್ದಾಗಲೂ ಸ್ಟಾಲಿನ್​ ಅವರ ಮುಖದಲ್ಲಿ ಇಷ್ಟೊಂದು ಕೋಪ ಕಂಡಿರಲಿಲ್ಲ. ಆದರೀಗ ಅದೆಲ್ಲವೂ ಎದ್ದುತೋರುತ್ತಿದೆ. ಇಡಿ(ED)ಯಿಂದ ಬಂಧನವಾಗಿರುವ ನಿಮ್ಮ ಸರ್ಕಾರದ ಸಚಿವ ಸೆಂಥಿಲ್​ ಬಾಲಾಜಿ(Senthil balaji) ಡಿಎಂಕೆ ಪಕ್ಷದ ಖಜಾನೆ ಎಂದು ಜನರೇ ಹೇಳುತ್ತಿದ್ದಾರೆ. ಅವರನ್ನು ಇಡಿ ಅಧಿಕಾರಿಗಳು ಮೊನ್ನೆ ಮೊನ್ನೆಯಷ್ಟೇ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. ಇದರಿಂದ ಸ್ಟಾಲಿನ್​ ಬಿಜೆಪಿ ವಿರುದ್ಧ ಆಕ್ರೋಶಭರಿತರಾಗಿದ್ದಾರೆ” ಎಂದು ಕಿಡಿಕಾರಿದ್ದಾರೆ.

 

ಇದನ್ನು ಓದಿ: IAS Officers Transfer: ರಾಜ್ಯ ಸರಕಾರದಿಂದ 10 ಐಎಎಸ್ ಅಧಿಕಾರಿಗಳ ವರ್ಗಾವಣೆ! ದ.ಕ ಡಿಸಿ, ಜಿ.ಪಂ. ಸಿಇಓ ಎಲ್ಲಿಗೆ ವರ್ಗಾವಣೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್! 

Leave A Reply

Your email address will not be published.