Dharmastala Sowjanya murder case: ಕೊನೆಗೂ ದೊರೆಯಲಿಲ್ಲ ನ್ಯಾಯ !! ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಕೊಲೆ ಕೇಸಿನಲ್ಲಿ ಸಂತೋಷ್ ರಾವ್ ನಿರ್ದೋಷಿ !!CBI ವಿಶೇಷ ಕೋರ್ಟ್ ಆದೇಶ

Dharmastala Sowjanya murder case

Dharmastala Sowjanya murdere case: ಸುಮಾರು 10ವರುಷಗಳ ರಾಷ್ಟ್ರ ಮಟ್ಟದಲ್ಲಿ ಬಹಳ ಸುದ್ದಿಮಾಡಿ ಇಡೀ ದೇಶವೇ ದಕ್ಷಿಣ ಕನ್ನಡ ಜಿಲ್ಲೆಯ(Dakshina kannada) ಕುಗ್ರಾಮದತ್ತ ತಿರುಗಿನೋಡುವಂತೆ ಮಾಡಿದ್ದ ಉಜಿರೆ ಎಸ್ ಡಿ ಎಂ ಕಾಲೇಜು(Ujire SDM collage) ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ(Sowjanya rape case) ಹಾಗೂ ಕೊಲೆ ಪ್ರಕರಣದ ತೀರ್ಪು ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಹೊರಬಿದ್ದಿದ್ದು, ಕೊನೆಗೂ ಸೌಜನ್ಯಳ ಸಾವಿಗೆ ನ್ಯಾಯ ದೊರಕದಂತಾಗಿದೆ.

 

ಹೌದು, ಸೌಜನ್ಯ ಅತ್ಯಾಚಾರ ಮತ್ತು ಕೊಲೆ (Dharmastala Sowjanya murdere case) ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್‌ ರಾವ್‌ನನ್ನು (Santosh Rao) ಕೋರ್ಟ್‌ ದೋಷಮುಕ್ತಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ (CBI Special Court) ನ್ಯಾಯಾಧೀಶ ಸಂತೋಷ್.ಸಿ.ಬಿ. ಇಂದು ತೀರ್ಪು ಪ್ರಕಟಿಸಿ, ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.

ಅಂದಹಾಗೆ ಆರೋಪಿ ಪರ ವಕೀಲ ಮೋಹಿತ್ ಕುಮಾರ್ ವಾದ ಮಂಡಿಸಿದ್ದು, ಆತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ರೇಪ್ ಮಾಡಿರುವ ಬಗ್ಗೆ ವೈದ್ಯಕೀಯ ವರದಿ ಇರಲಿಲ್ಲ. ಎರಡು ದಿನ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಸೌಜನ್ಯ ಮೃತಪಟ್ಟ ದಿನ ಭಾರೀ ಮಳೆ ಇತ್ತು. ಅಂದು 500 ಜನ ಹುಡುಕಾಟ ನಡೆಸಿದ್ದರು. ಆದರೆ ಅಂದು ಶವ ಪತ್ತೆಯಾಗಿರಲಿಲ್ಲ. ನದಿ ದಾಟಿ ಹೋಗಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ ಪೊಲೀಸರು ಎರಡು ದಿನದ ಬಳಿಕ ಸಂತೋಷ್‌ ರಾವ್‌ನನ್ನು ಬಂಧಿಸಿದ್ದರು. ಅಲ್ಲಿದ್ದ ಪ್ರಕೃತಿ ಚಿಕಿತ್ಸಾಲಯದ ಸಿಸಿಟಿವಿ ಸಂಗ್ರಹಿಸಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ರಾತ್ರೋರಾತ್ರಿ ಕೆಟ್ಟ ಬೆಳಕಿನಲ್ಲಿ ಮಾಡಲಾಗಿದೆ. ಸಂತೋಷ್‌ ರಾವ್‌ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಹೇಮಂತ್‌ ವಾದಿಸಿದ್ದರು. ಇದೆಲ್ಲವನ್ನೂ ಪರಿಶೀಲಿಸಿದ ನ್ಯಾಯಾಲಯ ಸರಿಯಾದ ಸಿಕ್ಷಾಧಾರಗಳಿಲ್ಲದೆ ಅರೋಪಿ ಸಂತೋಷ್ ನನ್ನು ಖುಲಾಸೆಗೊಳಿಸಿದೆ.

ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅವರು 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದರು. ಮರು ದಿನ ರಾತ್ರಿ ಧರ್ಮಸ್ಥಳದ ಮಣ್ಣಸಂಕ ಬಳಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿ, ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.

ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ(Karkala) ತಾಲ್ಲೂಕಿನ ಕುಕ್ಕುಂದೂರು(Kukkundur) ಗ್ರಾಮದ ನಿವಾಸಿ ಸಂತೋಷ್ ರಾವ್‌(Santosh raou) ಅವರನ್ನು ಅರೋಪಿಯೆಂದು ಶಂಕಿಸಿ ಬಂದಿಸಲಾಗಿತ್ತು. ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ ಈತನನ್ನು ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.

ನಂತರ ಪ್ರಕರಣವನ್ನು ಸಿಐಡಿಗೆ(CID) ವಹಿಸಲಾಗಿತ್ತು. ಆದರೆ ಸಂತೋಷ್ ರಾವ್ ಸುಮಾರು ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದ. ನಂತರದಲ್ಲಿ ಸುಮಾರು ಒಂದು ವರುಷಗಳ ಬಳಿಕ ಸ್ಥಳೀಯರಿಂದ ತೀವ್ರ ಸ್ವರೂಪ ಪಡೆದುಕೊಂಡ ಈ ಪ್ರಕರಣ CBI ಮೆಟ್ಟಿಲೇರಿತ್ತು.

ಈ ನಡುವೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ಕಿರಿಯ ಸಹೋದರ ಹರ್ಷೇಂದ್ರ ಕುಮಾರ್(Harshendra kumar) ಅವರ ಪುತ್ರ ನಿಶ್ಚಲ್ ಜೈನ್(Nishal jain) ಸೇರಿದಂತೆ ಧರ್ಮಸ್ಥಳದ ನಾಲ್ವರು ಯುವಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಜನರು ಮತ್ತು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದರು. ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ವಿರುದ್ಧ ಆರೋಪಿಗಳಾಗಿದ್ದರು.

ಸಿಬಿಐ ಕೆಲ್ಲ-ಜೈನ್ ಮೂವರನ್ನು ವಿಚಾರಣೆ ನಡೆಸಿತ್ತು. ಹರ್ಷೇಂದ್ರ ಕುಮಾರ್ ಅವರು ಸಿಬಿಐ ಮುಂದೆ ಹಾಜರಾಗಿ, ಅತ್ಯಾಚಾರ ಮತ್ತು ಕೊಲೆ ನಡೆದಾಗ ಅವರು ದೇಶದಲ್ಲಿ ಇರಲಿಲ್ಲ ಎಂದು ತೋರಿಸಲು ಅಮೆರಿಕದಲ್ಲಿ ತನ್ನ ಮಗನ (ನಿಶ್ಚಲ್ ಜೈನ್) ಪಾಸ್‌ಪೋರ್ಟ್, ವೀಸಾ ಮತ್ತು ಬ್ಯಾಂಕ್ ವಹಿವಾಟು ಸೇರಿದಂತೆ ದಾಖಲೆಗಳನ್ನು ಹಾಜರುಪಡಿಸಿದ್ದರು. ಹೀಗಾಗಿ ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರಗಳಲ್ಲಿ ಅರ್ಹತೆ ಕಂಡು ನಿಶ್ಚಲ್‌ಗೆ ಕ್ಲೀನ್ ಚಿಟ್ ನೀಡಿದ್ದರು.

 

ಇದನ್ನು ಓದಿ: Snake Viral Video: ತಲೆ ಬೇರ್ಪಟ್ಟರೂ ತನ್ನದೇ ದೇಹದ ಮೇಲೆ ದಾಳಿ ನಡೆಸಿದ ಹಾವು ; ತಾನೇ ಕಚ್ಚಿ ತಾನೇ ಸತ್ತ ಹಾವಿನ ಭಯಾನಕ ವಿಡಿಯೋ ವೈರಲ್ !

Leave A Reply

Your email address will not be published.