Indira canteen: ರಾಜ್ಯದ ಇಂದಿರಾ ಕ್ಯಾಂಟೀನ್ ಗಳಲ್ಲಿ ಭರ್ಜರಿ ಬಾಡೂಟ!! ಇನ್ನು ಕಡಿಮೆ ದರದಲ್ಲಿ ಸವಿಯಬಹುದು ಮಟನ್, ಚಿಕನ್ ಐಟಮ್!! ನಾಳೆಯಿಂದಲೇ ಜಾರಿ ?!
Karnataka news Lowest price Meat in Indira canteen again in the state will CM Siddaramaiah give good news to meat lovers
Indira canteen: ಸಿದ್ದರಾಮಯ್ಯ(Siddaramaiah) ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯ ದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್(Indira canteen) ಭಾರೀ ಸದ್ಧು ಮಾಡುತ್ತಿದೆ. ಸಿಎಂ(CM) ಖುರ್ಚಿ ಏರಿದೆ ಬಳಿಕ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಿದ ಸಿದ್ದು ಇದೀಗ ಈ ಕ್ಯಾಂಟೀನ್ ಗಳಲ್ಲಿ ಬಾಡೂಟ ಹಾಕಿಸೋ ಬಗ್ಗೆ ಚಿಂತನೆ ನಡೆಸಿದ್ದಾರೆ.ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ಹಣದಲ್ಲಿ ಊಟ ದೊರೆಯುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್
ಹೌದು, ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆದ ವೇಳೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅದರ ಭಾಗವಾಗಿಯೇ, ಬಡ, ಶ್ರಮಿಕ ವರ್ಗದವರಿಗೆ ಆಸರೆ ಆಗಿ ರಾಜ್ಯಾದ್ಯಂತ ತಲೆ ಎತ್ತಿದ್ದೆ ಇಂದಿರಾ ಕ್ಯಾಂಟೀನ್. ಆದರೆ ಬಿಜೆಪಿ ಸರ್ಕಾರದ(BJP Government) ಅವಧಿಯಲ್ಲಿ ಕ್ಯಾಂಟೀನ್ ಗಳು ಅನುದಾನವಿಲ್ಲದೆ ಸೊರಗಿ ಹೋಗಿದ್ದವು. ಆದರೀಗ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆದ ಬೆನ್ನಲ್ಲೇ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಗಳು ಮತ್ತೆ ಸದ್ದು ಮಾಡುತ್ತಿದೆ. ಅಲ್ಲದೆ ಇನ್ನೊಂದೆಡೆ, ಇಂದಿರಾ ಕ್ಯಾಂಟೀನ್ ಫುಡ್ ಮೆನು ಬದಲಾವಣೆಗೆ ಸಾರ್ವಜನಿಕರು ಒತ್ತಾಯಿಸಿದ್ದು, ಕಡಿಮೆ ಬೆಲೆಗೆ ಮೊಟ್ಟೆ(Egg) ಮತ್ತು ನಾನ್ ವೆಜ್(Nonveg) ನೀಡಲು ಮನವಿ ಮಾಡಿದ್ದಾರೆ.
ಅಂದಹಾಗೆ ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ಹಣದಲ್ಲಿ ಊಟ ದೊರೆಯುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್ ಇದೀಗ ಬೆಂಗಳೂರಲ್ಲಿ(Benglore) ವಾರ್ಡ್(Ward)ಗೊಂದರಂತೆ ತಲೆ ಎತ್ತಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬೆನ್ನಲ್ಲೇ ಈ ಮಧ್ಯೆ, ಇಂದಿರಾ ಕ್ಯಾಂಟೀನ್‌ನ ಮೆನು ಬದಲಾವಣೆಗೆ ಒತ್ತಾಯವೂ ಕೇಳಿಬಂದಿದ್ದು ಅಪೌಷ್ಟಿಕತೆ ಹೋಗಲಾಡಿಸಲು ವಾರಕ್ಕೊಮ್ಮೆ ಕಡಿಮೆ ಬೆಲೆಯಲ್ಲಿ ಮೊಟ್ಟೆಯನ್ನೂ ವಿತರಿಸುವಂತೆ ಮನವಿ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ವಾರಕ್ಕೊಮ್ಮೆಯಾದರೂ ಕಡಿಮೆ ಬೆಲೆಯಲ್ಲಿ ಮೊಟ್ಟೆ ನೀಡುವಂತೆ, ಇನ್ನೊಂದೆಡೆ ಮೊಟ್ಟೆ ಜೊತೆ ಮಾಂಸಹಾರ ನೀಡುವಂತೆ ಮನವಿಯೂ, ವಾರಕ್ಕೊಮ್ಮೆ ಚಿಕನ್ ಇಲ್ಲವೇ ಮಟನ್ ಕಡಿಮೆ ಬೆಲೆಗೆ ಕೊಡುವಂತೆ ಸಾಮಾಜಿಕ ಕಾರ್ಯಕರ್ತ ಅಮರೇಶ್(Social worker Amaresh)ಎಂಬುವವರು ಮನವಿ ಮಾಡಿದ್ದಾರೆ.
ಏನೇ ಆಗಲಿ ಸಿದ್ದರಾಮಯ್ಯ ಆರಂಭಿಸಿದ, ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ಹಣದಲ್ಲಿ ಊಟ ದೊರೆಯುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್ ಎಷ್ಟೋ ಸಾವಿರಾರು ಬಡ ಬಗ್ಗರಿಗೆ ಅನ್ನಪೂರ್ಣೆಯಾಗಿದೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ ಜನರಿಗೆ ಕಡಿಮೆ ಬೆಲೆಗೆ ಊಟ ನೀಡಿ ದಿನದ ಮೂರು ಹೊತ್ತೂ ಹೊಟ್ಟೆ ತುಂಬಿಸುತ್ತಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಇಂದಿರಾ ಕ್ಯಾಂಟೀನ್ ಅನುದಾನವಿಲ್ಲದೆ ಸೊರಗಿ ಹೋಗಿತ್ತೆಂಬುದು ವಿಷಾದನೀಯ. ಆದರೀಗ ಸಿದ್ದು ಕಾಲದಲ್ಲಿ ಮತ್ತೆ ಮರುಜನ್ಮ ಪಡೆದು, ಕಾರ್ಯಾರಂಭ ಮಾಡಿದೆ ಎಂಬುದು ಸಂತಸ.
ಇದನ್ನೂ ಓದಿ: Mangalore: ‘ಎದ್ದು, ಬಿದ್ದು ರಾತ್ರಿಯಿಡೀ ಹೋರಾಡಿ, ಗೆದ್ದು ಬಾ ಗೆಳೆಯ’ ಸ್ನೇಹಿತನ ಶೋಭನಕ್ಕೆ ಬ್ಯಾನರ್ ಮೂಲಕ ವಿಶ್!