Colombia Plane Crash: ಅಮೆಜಾನ್ ದಟ್ಟ​ಡವಿಯಲ್ಲಿ ವಿಮಾನ ಪತನ ದುರಂತ: ಪವಾಡವೆಂಬಂತೆ ಬದುಕಿದ 4 ಮಕ್ಕಳನ್ನು ನೋಡಿಕೊಳ್ಳೋ ವಿಚಾರದಲ್ಲಿ ಫ್ಯಾಮಿಲಿ ಫೈಟ್!!

Plane crash in Amazon International news colombia plane crash in Amazon forest relatives fight for custody of rescude kids

Colombia plane crash : ಕೊಲಂಬಿಯಾದಿಂದ (Colombia) ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳ ಜತೆಗೆ ಸಣ್ಣ ವಿಮಾನದಲ್ಲಿ ಅಮೆಜಾನ್ ಕಾಡಿಗೆ(Amezone forest) ಜಾಲಿ ರೈಡ್​ಗೆಂದು(Kolly ride) ಹೋಗಿದ್ದು, ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತಕ್ಕೀಡಾಗಿತ್ತು (Colombia plane crash), ವಿಮಾನವನ್ನು ಅರಸುತ್ತಾ ಬಂದ ರಕ್ಷಣಾ ಸಿಬ್ಬಂದಿಗೆ ತಾಯಿಯ ಶವದೊಂದಿಗೆ ಅದೃಷ್ಟವಶಾತ್ 4 ಮಕ್ಕಳು ಜೀವಂತವಾಗಿ ಸಿಕ್ಕಿ ಸಾಕಷ್ಟು ಸುದ್ಧಿಯಾಗಿತ್ತು. ಆದರೀಗ ಈ ಮಕ್ಕಳ ಮುಂದೆ ನೋಡಿಕೊಳ್ಳುವ ವಿಚಾರದಲ್ಲಿ ಸಂಬಂಧಿಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.

ಹೌದು, ಎರಡು ವಾರಗಳ ಹಿಂದೆ ಕೊಲಂಬಿಯಾದ ಅಮೆಜಾನ್(Amazon) ದಟ್ಟ ಕಾಡಿನಲ್ಲಿ ವಿಮಾನ ಪತನ ಸಂಭವಿಸಿತ್ತು, ಹೇಗೂ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ಪವಾಡವೆಂಬಂತೆ 11 ತಿಂಗಳ ಮಗು ಸೇರಿದಂತೆ 4 ಮಕ್ಕಳು ಜೀವ ಉಳಿಸಿಕೊಂಡಿದ್ದರು. ನಂತರ ರಕ್ಷಣಾ ಸಿಬ್ಬಂದಿಯ ಶೋಧದಿಂದ ಅವರನ್ನು ಕರೆತರಲಾಗಿತ್ತು. ಸದ್ಯ ಈ ನಾಲ್ವರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮಕ್ಕಳನ್ನು ಸುಪರ್ದಿಗೆ ಪಡೆಯುವ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ.

ಸದ್ಯದ ಮಟ್ಟಿಗೆ ಮಕ್ಕಳು ಚೇತರಿಸಿಕೊಳ್ಳುವ ಉತ್ಸಾಹದಲ್ಲಿ ಇದ್ದಾರೆ ಎಂದು ಸೋಮವಾರ (ಜೂನ್ 12) ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಕೊಲಂಬಿಯಾದ ಕುಟುಂಬ ಕಲ್ಯಾಣ ಸಂಸ್ಥೆಯಾದ ಆಡ್ರಿಯಾನಾ ವೆಲಾಸ್ಕ್ವೆಜ್(Adriana Velasquez) ಮಕ್ಕಳ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಮಕ್ಕಳು ಬಣ್ಣ ಮತ್ತು ಚಿತ್ರಕಲೆಗಳನ್ನು ಬಿಡಿಸುತ್ತಾರೆ. ಜನರೊಂದಿಗೆ ಮಾತನಾಡು ಇಷ್ಟಪಡುತ್ತಿದ್ದಾರೆ. ವಿಮಾನ ಅಪಘಾತದಲ್ಲಿ ನಾಪತ್ತೆಯಾಗಿದ್ದ ನಾಯಿಯ ಚಿತ್ರವನ್ನು ಕೂಡ ಚಿತ್ರಿಸುತ್ತಿದ್ದಾರೆ ಎಂದು ಹೇಳಿದೆ.

ಈ ನಾಲ್ವರು ಮಕ್ಕಳು ತಾಯಿಯನ್ನು ಕಳೆದುಕೊಂಡಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು ಇನ್ನೂ ಹಲವು ದಿನಗಳ ವರೆಗೆ ಆಸ್ಪತ್ರೆಯಲ್ಲೇ ಉಳಿಯುವ ನಿರೀಕ್ಷೆ ಇದ್ದು, ಮಕ್ಕಳ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳಬೇಕೆಂದು ನಿರ್ಧರಿಸಲು ಕುಟುಂಬ ಸದಸ್ಯರನ್ನು ಸಂದರ್ಶನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಚಿಕಿತ್ಸೆ ಪಡೆದ ನಂತರ ಮುಂದಿನ ದಿನಗಳಲ್ಲಿ ಯಾರ ಜೊತೆಯಲ್ಲಿ ಇರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ಮಕ್ಕಳನ್ನು ಸುಪರ್ದಿಗೆ ಪಡೆಯುವ ವಿಚಾರದಲ್ಲಿ ಇವರ ಸಂಬಂಧಿಕರು ಪೈಪೋಟಿ ನಡೆಸುತ್ತಿದ್ದಾರೆ. ನಾಲ್ವರು ಮಕ್ಕಳ ಪೈಕಿ ಇಬ್ಬರ ಮಕ್ಕಳಿಗೆ ತಂದೆಯಾಗಿರುವ ವ್ಯಕ್ತಿ ಕೌಟುಂಬಿಕ ಹಿಂಸಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಕಿರಿಯ ಮಕ್ಕಳಿಗಾಗಿ ತಂದೆ ಪೈಪೋಟಿ ನಡೆಸುತ್ತಿದ್ದು, ಮಕ್ಕಳು ಅಜ್ಜಿಯ (ಮೃತ ಮಹಿಳೆಯ ತಾಯಿ) ಬಳಿ ಇರಲು ಬಯಸುತ್ತಿದ್ದಾರೆ.ಮಕ್ಕಳಿಗಾಗಿ ಕೇಸ್‌ವರ್ಕರ್‌(Caseworker) ನಿಯೋಜಿಸಲು ವಿನಂತಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕೊಲಂಬಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಮಿಲಿ ವೆಲ್‌ಫೇರ್‌ನ ಮುಖ್ಯಸ್ಥರಾಗಿರುವ ಕ್ಯಾಸೆರೆಸ್ ಈ ಬಗ್ಗೆ ಮಾತನಾಡಿ, ನಾವು ಪರಿಸ್ಥಿತಿಯ ಬಗ್ಗೆ ಮಾತನಾಡಲು, ತನಿಖೆ ಮಾಡಿಸಲು ಮುಂದಾಗಿದ್ದೇವೆ. ಯಾಕೆಂದರೆ ಮಕ್ಕಳ ತಾಯಿ ಕೌಟುಂಬಿಕ ದೌರ್ಜನ್ಯ ಅನುಭವಿಸಿರಬಹುದು ಎಂದು ಹೇಳಿದ್ದಾರೆ.

ಅಂದಹಾಗೆ ಎರಡು ವಾರಗಳ ಹಿಂದೆ ಕೊಲಂಬಿಯಾದ ಅಮೆಜಾನ್(Amazon) ದಟ್ಟ ಕಾಡಿನಲ್ಲಿ ವಿಮಾನ ಪತನ ಸಂಭವಿಸಿತ್ತು, ಹೇಗೂ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ಪವಾಡವೆಂಬಂತೆ 11 ತಿಂಗಳ ಮಗು ಸೇರಿದಂತೆ 4 ಮಕ್ಕಳು ಜೀವ ಉಳಿಸಿಕೊಂಡಿದ್ದಾರೆ. ಅಪಘಾತದಲ್ಲೇನೋ ಜೀವ ಉಳಿಯಿತು ಆದರೆ ಅಪಘಾತವಾಗಿ 2 ವಾರಗಳ ವರೆಗೆ ಆ ದಟ್ಟ ಅರಣ್ಯದಲ್ಲಿ ಪ್ರಾಣಿಗಳಿಂದಲೂ ತಮ್ಮ ಜೀವ ಕಾಪಾಡಿಕೊಂಡಿದ್ದಾರೆ.

ಮಿಲಿಟರಿ(Military) ಸತತ ಹುಡುಕಾಟ ನಡೆಸುತ್ತಿತ್ತು, ಎರಡು ವಾರಗಳ ಬಳಿಕ ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಮೇ 1 ರಂದು ವಿಮಾನ ಅಪಘಾತಕ್ಕೀಡಾಗಿತ್ತು, 100ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು. 11 ತಿಂಗಳ ಮಗು, 13 ವರ್ಷ, 9 ಹಾಗೂ 4 ವರ್ಷದ ಮಕ್ಕಳಿದ್ದರು. ಅಪಘಾತದ ನಂತರ ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನ ಮೂಲಕ ಅಲೆದಾಡುತ್ತಿದ್ದರು.

ಅಲ್ಲಿರುವ ಕೋಲುಗಳನ್ನು ಬಳಸಿ ಮನೆಯ ರೀತಿ ನಿರ್ಮಿಸಿಕೊಂಡಿದ್ದರು ಅದನ್ನು ಕಂಡ ಬಳಿಕ ಯಾರೋ ಬದುಕುಳಿದಿದ್ದಾರೆ ಎನ್ನುವ ನಂಬಿಕೆ ಬಂದಿತ್ತು. ಮಗುವಿನ ಹಾಲಿನ ಬಾಟಲಿ, ಅರ್ಧ ತಿಂದಿದ್ದ ಹಣ್ಣಿನ ತುಂಡು ಪತ್ತೆಯಾಗಿತ್ತು, ಪೈಲಟ್​ ಹಾಗೂ ಇಬ್ಬರು ವಯಸ್ಕರ ಶವವನ್ನು ಸೈನಿಕರು ಪತ್ತೆ ಮಾಡಿದ್ದರು.

ಇದನ್ನೂ ಓದಿ: Karnataka congress: ಕರ್ನಾಟಕ ಸರ್ಕಾರದ ಸಭೆಗಳನ್ನು ನಡೆಸುತ್ತಿರೋ ಸುರ್ಜೇವಾಲ! ಬಿಜೆಪಿ- ಜೆಡಿಎಸ್ ನಿಂದ ಸರ್ಕಾರಕ್ಕೆ ಛೀಮಾರಿ- ಫೋಟೋ ಶೇರ್ ಮಾಡಿದ ಜಮೀರ್ ಗೆ ಹೈಕಮಾಂಡ್ ಕ್ಲಾಸ್!!

Leave A Reply

Your email address will not be published.