ಉಡುಪಿಗೆ KSRTC ಬಸ್ಸು ಸಾಧ್ಯತೆ – ಸಚಿವೆ | ನಳಿನ್’ಗೆ ಪ್ರೈವೇಟ್’ನಲ್ಲೂ ಫ್ರೀ ಟಿಕೆಟ್ ಬೇಕಂತೆ !
Udupi:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣೆಗೂ ಮುನ್ನ ಹೇಳಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಜಿಲ್ಲಾ ಉಸ್ತುವಾರಿ ಪಟ್ಟವನ್ನು ಹಂಚಿದ ಬಳಿಕ ಆಯಾ ಜಿಲ್ಲೆಗಳ ಸ್ಥಿತಿಗತಿಗಳ ಬಗ್ಗೆ ಸಚಿವರುಗಳು ಗಮನಹರಿಸಿದ್ದಾರೆ.ಅಂತೆಯೇ ಉಡುಪಿ(Udupi) ಜಿಲ್ಲಾ ಉಸ್ತುವಾರಿ ಸಚಿವೆಯಾದ ಲಕ್ಷ್ಮಿ ನಿಂಬಾಳ್ಕರ್ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸಂಖ್ಯೆಯನ್ನು ಹೆಚ್ಚುಗೊಳಿಸುವ ಬಗ್ಗೆ ಹೇಳಿದೆ ನೀಡಿದ್ದು ಖಾಸಗಿ ಬಸ್ಸುಗಳ ಓಡಾಟ, ಮಾಲೀಕರ ಧ್ವನಿ ಎತ್ತುವಂತೆ ಮಾಡಿದೆ.
ಈ ಮಧ್ಯೆ ಖಾಸಗಿ ಬಸ್’ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆ ಮೂಲಕ ನಳಿನ್ ಕುಮಾರ್ ಕಟೀಲ್ ಅವರು ತಾನೊಬ್ಬ ದೊಡ್ದ ಕಾಮಿಡಿ ಪೀಸ್ ಎನ್ನುವುದನ್ನು ಪದೇ ಪದೇ ಪ್ರೂವ್ ಮಾಡಲು ಹೊರಟಿದ್ದಾರೆ ಎನ್ನುವುದು ರುಜುವಾಗುತ್ತಿರುವಂತೆ ಭಾಸವಾಗುತ್ತಿದೆ. ಅದಕ್ಕೂ ಮೊದಲು ನಳಿನ್ ಕಟೀಲ್ ಏನಂದ್ರು ಅಂತ ನೋಡೋಣ.
ಎಲ್ಲಿ ಏನಂದ್ರು ಕಟೀಲ್ ?
ಇಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ಹೆಚ್ಚಾಗಿ ಸಂಚರಿಸುತ್ತವೆ. ಖಾಸಗಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ನೀಡದಿದ್ದರೆ, ಬಿಜೆಪಿ ಮಹಿಳೆಯರೊಂದಿಗೆ ಸೇರಿ ಪ್ರತಿಭಟನೆ ನಡೆಸಲಿದೆ ಎಂದಿದ್ದಾರೆ.
ಅದಕ್ಕೆ ಅವರು ನೀಡಿದ ಕಾರಣ, ‘ ಕಾಂಗ್ರೆಸ್ ತನ್ನ ಐದು ಭರವಸೆಗಳನ್ನು ಘೋಷಿಸಿದಾಗ, ಯಾವುದೇ ಮಾನದಂಡಗಳನ್ನು ಘೋಷಿಸಿರಲಿಲ್ಲ. ಎಲ್ಲಾ ಗ್ಯಾರಂಟಿಗಳು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಆದರೆ, ಈಗ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಮತ್ತು ನಿಯಮಗಳೊಂದಿಗೆ ಘೋಷಿಸಲಾಗುತ್ತಿದೆ. ಖಾತರಿ ಯೋಜನೆಗಳ ಮೂಲಕ ಜನರನ್ನು ದಾರಿ ತಪ್ಪಿಸಲಾಗಿದೆ ‘ ಎಂದು ನಳೀನ್ ಆರೋಪಿಸಿದರು.
ಮಾನ್ಯ ನಳೀನ್ ಕುಮಾರ್ ಕಟೀಲ್ ಜಿ, ‘ ನೀವು ಹೇಳೋದು ಎಲ್ಲಾ ಸರಿ ಇದೆ. ಸಿದ್ದರಾಮಯ್ಯ ಸರ್ಕಾರ ಮಾನದಂಡಗಳನ್ನು ಹಾಕಿರಲಿಲ್ಲ, ಷರತ್ತುಗಳನ್ನು ಇಟ್ಟಿರಲಿಲ್ಲ, ಎಲ್ಲವೂ ನಿಜ. ಯಾವುದೇ ಷರತ್ತುಗಳನ್ನು ಇಲ್ಲದೆ ಫ್ರೀ ಬಸ್ಸು, ಎಲ್ಲಾ ಮಹಿಳೆಯರಿಗೂ (ಬೇಕಾದರೆ ಈಗ ಹುಟ್ಟಿದ ಹೆಣ್ಣು ಮಗುವನ್ನೂ ಸೇರಿಸಿಕೊಳ್ಳಿ) 2,000 ರೂಪಾಯಿ, ಕರೆಂಟ್ ಇರುವ ಎಲ್ಲಾ ಮನೆಗೂ ಭರ್ತಿ 200 ಯೂನಿಟ್ ಇತ್ಯಾದಿ ಎಲ್ಲವನ್ನು ಕೂಡಾ ಕೊಡಲು ಒತ್ತಾಯಿಸೋಣ. ಆದ್ರೆ ಮಾರಾಯ, ಪ್ರೈವೇಟ್ ಪ್ರೈವೇಟ್ ಬಸ್ಸಿನಲ್ಲಿ ಕೂಡಾ ಫ್ರೀ ಬಸ್ ಅಂತ. ಕೆಲ್ತಿದ್ದೀರಲ್ಲ ? ಪ್ರೈವೇಟ್ ಬಸ್ಸು ಹೇಗೋ ನಿಮ್ಮ ಪಜೇರೋ ಸ್ಪೋರ್ಟ್ ಗಾಡಿ ಕೂಡಾ. ಅದು ನಿಮ್ಮಅಥವಾ ಕಾಂಗ್ರೆಸ್ ಸ್ವತ್ತಲ್ಲ. ಬೇಕಿದ್ರೆ ಪ್ರೈವೇಟ್ ಬಸ್ಸುಗಳ ಬದಲಿಗೆ, ಒಂದಷ್ಟು ಸರ್ಕಾರಿ ಬಸ್ಸುಗಳನ್ನು ಹಾಕಿ, ಉಚಿತ ಬಸ್ಸುಗಳ ಸೌಲಭ್ಯ ದಕ್ಷಿಣ ಕನ್ನಡ ಸೇರಿ ಕರಾವಳಿಯ ಪ್ರೈವೇಟ್ ಬಸ್ಸುಗಳು ಹೆಚ್ಚಿರುವ ಪ್ರದೇಶದಲ್ಲಿ ದೊರಕುವಂತಾಗಲಿ ಎಂದು ಬೇಡಿಕೆ ಇಡಿ. ಅದು ಬಿಟ್ಟು, ಪಿರ್ಕಿಯ ಥರ ಪ್ರೈವೇಟ್ ಬಸ್ಸಿಗೆ ಕೂಡಾ ಉಚಿತ ಸೌಲಭ್ಯ ಕೊಡಿಸಿ ಎಂದು ಮಾತಾಡಬೇಡಿ ‘ ಇದು ಇವತ್ತು ಕರಾವಳಿಯ ಜನ ಯೋಚಿಸುವ ರೀತಿ. ಪ್ಲೀಸ್, ತಲೆಯಿಂದ ತರ್ಕವನ್ನು ತಪ್ಪಿಸಿಕೊಳ್ಳಬೇಡಿ !
ಇದನ್ನೂ ಓದಿ :Address change in PAN: ಪಾನ್ ಕಾರ್ಡ್ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಬೇಕಾ?ಇಷ್ಟು ಮಾಡಿ ಸಾಕು !