Belagavi News: ಗಂಡ ಬೇರೆ ಮನೆ ಮಾಡಿಲ್ಲ ಅನ್ನೋ ಕೋಪ ಅತ್ತೆ ಮೇಲೆ: ಅತ್ತೆಯನ್ನೇ ಹೊಡೆದು ಕೊಂದ ಸೊಸೆ

Husband- wife: ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailhongal) ಪಟ್ಟಣದಲ್ಲಿ ನಡೆದ ವಿಚಿತ್ರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಸೊಸೆ, ತವರು ಮನೆಯವರನ್ನ ಕರೆಯಿಸಿ ಅತ್ತೆ, ಗಂಡನ(Husband- wife) ಮೇಲೆ ಹಲ್ಲೆ ಮಾಡಿದ್ದು, ಇದೀಗ ಹಲ್ಲೆಗೊಳಗಾಗಿದ್ದ ಅತ್ತೆ ಕೊನೆ ಉಸಿರು ಎಳೆದಿದ್ದಾರೆ.

 

 

ಮೇಹರೂಣಿ ಯಾಕೂಶಿ ಮತ್ತು ಸುಬಾನ್ (Husband- wife) ಇವರಿಬ್ಬರು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಬಿರುಗಾಳಿ ಬೀಸಲಾರಂಭಿಸಿತ್ತು. ಹೌದು, ಒಂದು ವರ್ಷದ ಬಳಿಕ ಪತ್ನಿ ಮೇಹರೂಣಿ ಬೇರೆ ಮನೆ ಮಾಡುವಂತೆ ಗಂಡನಿಗೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದನ್ನ ಒಪ್ಪದ ಸುಬಾನ್ ಹಾಗೂ ಅತ್ತೆ ಜೊತೆ ನಿರಂತರ ಜಗಳವಾಡುತ್ತಿದ್ದಳು.

 

ಕೊನೆಗೆ ಮೇ.22ರಂದು ಸೊಸೆ ಮೇಹರೂಣಿ ಯಾಕೂಶಿ ಮತ್ತು ಇಬ್ಬರು ಸಹೋದರರ ಜತೆ ಸೇರಿ ಅತ್ತೆ ಮತ್ತು ಗಂಡನ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ, ಈ ವೇಳೆ ರಾಡ್‌ನಿಂದ ಗಂಡ ಸುಬಾನ್ ಮತ್ತು ಅತ್ತೆ ಮಹಾಬೂಬಿ ಮೇಲೆ ಬಲವಾಗಿ ಹೊಡೆಯಲಾಗಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಾಬೂಬಿ ಇಂದು(ಜೂ.13) ಸಾವನ್ನಪ್ಪಿದ್ದಾಳೆ.

 

ಸದ್ಯ ಈ ಸಾವಿಗೆ ಸೊಸೆ ಮೇಹರೂಣಿ ಮತ್ತು ಇಬ್ಬರು ತಮ್ಮಂದಿರೇ ಕಾರಣ ಎಂದು ಪತಿ ಕುಟುಂಬಸ್ಥರು ಆರೋಪ ಮಾಡಿದ್ದು, ಸದ್ಯ ಮೂರು ಜನರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ಮತ್ತು ಸಹೋದರರನ್ನ ಬಂಧಿಸುವಂತೆ ಪತಿ ಮತ್ತು ಕುಟುಂಬಸ್ಥರ ಮನವಿ ಮಾಡಿದ್ದಾರೆ. ಸದ್ಯ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ:ಟೈ ಕಟ್ಟಲು ಪರದಾಡುತ್ತಿದ್ದ ಹುಡುಗನ ಸಹಾಯಕ್ಕೆ ನಿಂತ ಅಜ್ಜಿ !ಅಜ್ಜನ ತಿವಿದು ಟೈ ಕಟ್ಟಿಸಿ, ಯಾರೂ ನೋಡದಿರಲು ಗೋಡೆಯಾದ ಅಜ್ಜಿ !

Leave A Reply

Your email address will not be published.