Maharastra: ಬೆಳ್ಳಂಬೆಳಗ್ಗೆಯೇ 4 ತಿಂಗಳ ಹಸುಳೆಯ ಮೇಲೆ ಹೆಡೆ ಬಿಚ್ಚಿ ನಿಂತ ಬುಸ್ ಬುಸ್ ನಾಗಪ್ಪ!! ಅಬ್ಬಬ್ಬಾ.. ಕಂದಮ್ಮನ ಪ್ರಾಣ ಉಳಿಸಲು ಮಹಾ ತಾಯಿ ಮಾಡಿದ್ದೇನು?

Baby :ಬೆಳಗ್ಗೆ(Morning) ಅಂದಾಜು ಐದು ಗಂಟೆಯ ಸಮಯ. ಜ್ಯೋತಿ(Jyothi) ಹಾಗೂ ಆಕೆಯ 4 ತಿಂಗಳ ಮಗು ಒಂದೇ ಹಾಸಿಗೆಯಲ್ಲಿ ಮಲಗಿದ್ದರು. ಇದ್ದಕ್ಕಿದ್ದಂತೆ ಮಗು(baby) ಜೋರಾಗಿ ಅಳಲು ಶುರುಮಾಡಿತು. ಮಗುವಿನ ಕೂಗು ಕೇಳಿದ ಜ್ಯೋತಿಗೆ ಎಚ್ಚರವಾಗಿ ಕಣ್ಣು ಬಿಟ್ಟು ದೃಷ್ಟಿ ಹಾಯಿಸುತ್ತಿದ್ದಂತೆ ಒಂದು ಕ್ಷಣ ಬೆಚ್ಚಿ ಬಿದ್ದು, ಹೌಹಾರಿದ್ದಾಳೆ.

ಹೌದು, ಮಹಾರಾಷ್ಟ್ರದ(Maharastra) ಜಲಗಾಂವ್‌ನ ಮಹಿಂದಲೆ(Mahindale) ಎಂಬ ಗ್ರಾಮದಲ್ಲಿ ಇಡೀ ಕುಟುಂಬ ಮುಂಜಾನೆಯ ಗಾಢ ನಿದ್ರೆಯಲ್ಲಿತ್ತು. ಜ್ಯೋತಿ ಹಾಗೂ ಆಕೆಯ 4 ತಿಂಗಳ ಮಗು ಒಂದೇ ಹಾಸಿಗೆಯಲ್ಲಿ ಮಲಗಿದ್ದರು. ಬೆಳಗ್ಗೆ ಅಂದಾಜು ಐದು ಗಂಟೆಯ ಸುಮಾರಿಗೆ ಮಗುವಿನ ಕೂಗು ಕೇಳಿದ ಜ್ಯೋತಿಗೆ ಎಚ್ಚರವಾಗಿದ್ದು, ಕಣ್ಣು ಬಿಟ್ಟು ದೃಷ್ಟಿ ಹಾಯಿಸುತ್ತಿದ್ದಂತೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾಳೆ. ಬಳಿಕ ತನ್ನ ನಾಲ್ಕು ತಿಂಗಳ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಲು ಆ ಮಹಾ ತಾಯಿ ತನ್ನ ಜೀವವನ್ನೇ ಪಣಕ್ಕಿಟ್ಟದ್ದಿದ್ದಾಳೆ.

ಯಾಕೆಂದರೆ ಬೆಳ್ಳಂಬೆಳಗ್ಗೆ ಬುಸ್, ಬುಸ್ ಎನ್ನುತ್ತ ನಾಗರಹಾವೊಂದು ತನ್ನ ನಾಲ್ಕು ತಿಂಗಳ ಕಂದಮ್ಮನ ಮೇಲೆ ಹರಡಿ, ಹೆಡೆ ಬಿಚ್ಚಿ ನಿಂತಿದೆ. ಈ ಭಯಾನಕ ದೃಶ್ಯವನ್ನು ಕಂಡು ಜ್ಯೋತಿ ಒಂದು ಕ್ಷಣ ಗಾಬರಿಯಾಗಿದ್ದಾಳೆ. ಏನು ಮಾಡಬೇಕೆಂದು ದಿಕ್ಕೇ ತೋಚದ ಸಮಯವದು. ಹೀಗಿದ್ದರೂ, ತನ್ನ ಮಗುವನ್ನು ರಕ್ಷಿಸಬೇಕೆಂದು ಯೋಚಿಸಿದ ಆ ತಾಯಿ ಕೂಡಲೇ ತನ್ನ ಜೀವದ ಬಗ್ಗೆ ಏನೂ ಚಿಂತಿಸದ ಜ್ಯೋತಿ, ಒಂದು ಕ್ಷಣವೂ ತಡ ಮಾಡದೆ ಮಗುವಿನ ಮೇಲೆ ಹರಡಿಕೊಂಡಿದ್ದ ನಾಗರಹಾವನ್ನು ಕೈಯಿಂದ ಎಳೆದು, ದೂರ ಎಸೆದಿದ್ದಾಳೆ. ಇದರಿಂದ ಮಗುವಿನ ಪ್ರಾಣ ಗಂಡಾಂತರವೊಂದರಿಂದ ಪಾರಾಗಿದೆ.

ಆದರೆ ದುರದೃಷ್ಟವಶಾತ್ ಆ ವಿಷ ಸರ್ಪ ಜ್ಯೋತಿಗೆ ಕಚ್ಚಿದೆ. ಈ ಗಲಾಟೆಗಳನ್ನೆಲ್ಲ ಕೇಳಿ ಕೂಡಲೇ ಎಚ್ಚೆತ್ತ ಮನೆ ಮಂದಿ ತಕ್ಷಣ ಜ್ಯೋತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪಚೋರಾದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ವಿಷ ಸರ್ಪ ಕಚ್ಚಿದ್ದರಿಂದ 6 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಜ್ಯೋತಿ ಸದ್ಯ ಚೇತರಿಸಿಕೊಂಡಿದ್ದಾಳೆ. ಆದರೂ ಕೂಡ ತನ್ನ ಪುಟ್ಟ ಕಂದಮ್ಮನನ್ನು ಬದುಕಿಸಲು ತನ್ನ ಪ್ರಾಣವನ್ನೂ ಲೆಕ್ಕಿಸದೆ ವಿಷ ಸರ್ಪವನ್ನು ಕೈಯಲ್ಲಿ ಹಿಡಿದು ಬಿಸಾಡಿದ ಮಹಾ ತಾಯಿಗೆ ನಮ್ಮ ಕಡೆಯಿಂದ ಒಂದು ಸಲಾಮ್!!

ಇದನ್ನೂ ಓದಿ : ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌..!ಬಸ್ಸಿಗಾಗಿ ನೂಕುನುಗ್ಗಲು

Leave A Reply

Your email address will not be published.