Gurugrama: ಎಣ್ಣೆ ಏಟಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ! ಮರುದಿನ ಕಾದಿತ್ತು ಶಾಕ್​!!

Alcohol :ವ್ಯಕ್ತಿಯೊಬ್ಬ ಮದ್ಯದ (Alcohol) ಅಮಲಿನಲ್ಲಿ ತನ್ನ ಸ್ವಂತ ಕಾರನ್ನು ಬೇರೆಯವರಿಗೆ ಕೊಟ್ಟು ಬಳಿಕ ತಾನು ಮೆಟ್ರೋ (Metro) ದ ಮೂಲಕ ಮನೆಗೆ ಬಂದ ವಿಚಿತ್ರ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

 

ಹೌದು, ವೀಕೆಂಡ್‌ ಸಂಭ್ರಮದಲ್ಲಿ(weekend enjoy) ಗುರುಗ್ರಾಮದ(Gurugrama) 30 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿದ್ದ. ಮನೆಗೆ ಹೋದ ನಂತರವೇ ಆತನಿಗೆ ತನ್ನ ಕಾರು(Car), ಲ್ಯಾಪ್‌ಟಾಪ್‌(Laptop), ಮೊಬೈಲ್‌ ಫೋನ್‌(Mobile phone) ಹಾಗೂ 18 ಸಾವಿರ ರೂಪಾಯಿ ಹಣ ಕಳೆದುಹೋಗಿದೆ ಅನ್ನೋದು ಎನ್ನುವುದು ಗೊತ್ತಾಗಿದೆ. ಆದರೆ, ಇಲ್ಲಿರೋ ಟ್ವಿಸ್ಟ್‌ ಏನಂದ್ರೆ, ಈತನ ಕಾರು ಸೇರಿದಂತೆ ಉಳಿದ ವಸ್ತುಗಳನ್ನು ಯಾರೋ ಕದ್ದುಕೊಂಡು ಹೋಗಿಲ್ಲ. ಬದಲಿಗೆ ಎಣ್ಣೆ ಏಟಲ್ಲಿ ಸ್ವತಃ ಈತನೇ ಕಳ್ಳರ ಕೈಗೆ ಎಲ್ಲವನ್ನೂ ಕೊಟ್ಟಿದ್ದಾನೆ..!

 

ಅಂದಹಾಗೆ ಅಮಿತ್​(Amith) ಎಂಬಾತ ಗುರುಗ್ರಾಮದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಆಮಡುತ್ತಿದ್ದು, ಶುಕ್ರವಾರ ಸಂಜೆ ಎಂದಿನಂತೆ ತಮ್ಮ ಕೆಲಸ ಮುಗಿದ ಬಳಿಕ ಗಾಲ್ಫ್​ ಕೋರ್ಸ್​ ರಸ್ತೆಯಲ್ಲಿರುವ ಲೇಕ್​ ಫಾರೆಸ್ಟ್​ ವೈನ್​ ಶಾಪ್​ಗೆ ಹೋಗಿದ್ದಾರೆ. ಈ ವೇಳೆ ಇವರು ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ವಂಚಕ ತಾನು ಕೂಡ ಸೇರಿಕೊಳ್ಲಬಹುದೆ ಎಂದು ಕೇಳಿದ್ದಾನೆ. ಕಾರಿನಲ್ಲಿ ಕುಳಿತು ಎಣ್ಣೆ ಹೊಡಿಯೋಕೆ ಒಬ್ಬನೇ ಅಂದುಕೊಂಡು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಮದ್ಯದ ಆಫರ್‌ ನೀಡಿದ್ದಾನೆ.

 

ಬಳಿಕ ಅಮಿತ್​ ಕುಡಿದ ಮತ್ತಿನಲ್ಲಿ ಇನ್ನೊಂದು ವೈನ್​ ಬಾಟಲಿ(Wine bottel) ಖರೀದಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ವಂಚಕ 2 ಸಾವಿರ ರೂಪಾಯಿ ಬೆಲೆ ಬಾಳುವ ಬಾಟಲಿಗೆ 20,000 ರೂ. ಪಡೆದಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಆತನೇ ದೂರುದಾರರ ಕಾರ್​ ಡ್ರೈವ್​ ಮಾಡಿಕೊಂಡು ಬಂದಿದ್ದು, ಅವರನ್ನು ದೆಹಲಿಯಲ್ಲಿರುವ ಸುಭಾಷ್​ ಚೌಕ್​ ಮೆಟ್ರೋ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಮಾರನೆಯ ದಿನ ಬೆಳಗ್ಗೆ ಅಮಿತ್​ ಅವರಿಗೆ ಹಿಂದಿನ ದಿನ ನಡೆದ ಘಟನೆಗಳು ಜ್ಞಾಪಕವಾಗಿದ್ದು, ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ ದೂರು ದಾಖಲಿಸಿದ್ದಾರೆ. ಘಟನೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿರಗು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದು ಕುಡಿದ ಮತ್ತಿನಲ್ಲಿ ಮಾಡಿದ ಕೆಲಸಕ್ಕೆ ಕಿಡಿಕಾರುತ್ತಿದ್ದಾರೆ.

 

ಇತ್ತ ಮರುದಿನ ಬೆಳಗ್ಗೆ ಅಮಿತ್‍ಗೆ ಹಿಂದಿನ ದಿನ ನಡೆದ ಘಟನೆಗಳು ನೆನಪಾದವು. ಕೂಡಲೇ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿ ದೂರು ದಾಖಲಿಸಿದ್ದಾನೆ. ಸದ್ಯ ಪೊಲೀಸರು ಅಪರಿಚಿ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ವಿಮಾನದಲ್ಲಿ ಇಂಧನವನ್ನು ಎಲ್ಲಿ ಇಡಲಾಗುತ್ತದೆ ?ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ !

Leave A Reply

Your email address will not be published.