KSRTC ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಮುಂಗಡ ಟಿಕೆಟ್ ಕಾದಿರಿಸುವ ಬಗ್ಗೆ ಬಿಗ್ ಅಪ್ಡೇಟ್ !
Congress guarantee Shakti scheme updates free advance ticket reservation for women in KSRTC buses
Shakti Scheme: KSRTC ಮಹಿಳೆಯರ ಶಕ್ತಿ ಯೋಜನೆಗೆ (Shakti Scheme) ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಮುಖ್ಯಮಂತ್ರಿಯವರು ಅವರು ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ನೀಡಿದರು ಎಂದು ತಿಳಿಸಿದೆ.
ಇದೀಗ ‘ ಶಕ್ತಿ ಟ್ರಾನ್ಸ್ಪೋರ್ಟ್’ ನ ಉಚಿತ ಬಸ್ ವ್ಯವಸ್ಥೆಯಲ್ಲಿ ಬಿಗ್ ಅಪ್ಡೇಟ್ ಸಿಕ್ಕಿದೆ. ನಿನ್ನೆ ಚಾಲನೆಗೊಂಡ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಿ, ಪ್ರಯಾಣಿಸುವುದಕ್ಕೂ ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ KSRTC ಮುಂಗಡ ಬುಕ್ಕಿಂಗ್ ಸೌಲಭ್ಯವಿರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಿ, ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ. ಶೀಘ್ರದಲ್ಲಿಯೇ ವೆಬ್ಸೈಟ್ ಗಳಲ್ಲಿ ಬದಲಾವಣೆ ಮಾಡಿ ಮುಂಗಡ ಟಿಕೆಟ್ ಕಾದಿರಿ ಸಲುವಾಗಿ ಅವಕಾಶ ಕಲ್ಪಿಸಲಾಗುವುದು.
ಯೋಜನೆಯ ಪ್ರಮುಖ ಅಂಶಗಳ ಒಂದು ರೌಂಡಪ್ ಇಲ್ಲಿದೆ:
1.ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು.
2.ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯಿಸಲಿದೆ.
3. ರಾಜ್ಯದ ಸಾಮಾನ್ಯ ಸಾರಿಗೆಯಲ್ಲಿ ಮಾತ್ರ ಅವಕಾಶ.
4. ಒಟ್ಟು 6308 ನಗರ, 5958 ಸಾಮಾನ್ಯ ಹಾಗೂ 3943 ವೇಗದೂತ ಬಸ್ಸುಗಳ ಒಟ್ಟು 18,609 ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ.
5.ಐಷಾರಾಮಿ ಸಾರಿಗೆಗಳಲ್ಲಿ ಈ ಯೋಜನಾ ಸೌಲಭ್ಯ ಇರಲ್ಲ.
6. ಪ್ರತಿನಿತ್ಯ ರಾಜ್ಯದ 41.81 ಲಕ್ಷ ಮಹಿಳೆಯರು (11.58 ಲಕ್ಷ ಪಾಸ್ ಹೊಂದಿರುವ ಪ್ರಯಾಣಿಕರು ಸೇರಿದಂತೆ) ಪಡೆಯುವವರು ಎಂದು ಅಂದಾಜಿಸಲಾಗಿದೆ.
7. ಅಂತರರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಆದರೆ ಅಂತರರಾಜ್ಯ ಮಾರ್ಗಗಳಲ್ಲಿ ಕಷ್ಟಕರ Enclave and Solitary Routes ಸಾರಿಗೆಗಳಲ್ಲಿ ರಾಜ್ಯದೊಳಗೆ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ.
8. ಶಕ್ತಿ ಟ್ರಾನ್ಸ್ಪೋರ್ಟ್ ನ ಉಚಿತ ಬೆಲೆಯ ಟಿಕೆಟ್ ನೀಡಲಾಗುತ್ತದೆ.
9..ಅನಿವಾರ್ಯ ಸಂದರ್ಭಗಳಲ್ಲಿ ಇಟಿಎಂ ನಲ್ಲಿ ತಾಂತ್ರಿಕ ದೋಷ ಉಂಟಾದರೆ ಮ್ಯಾನುಯಲ್ ಪಿಂಕ್ ಟಿಕೆಟ್ ವಿತರಿಸಲು ಕ್ರಮ.
10.ಯೋಜನೆಯ ವೆಚ್ಚವನ್ನು ಇಟಿಎಂಗಳಿಂದ ವಿತರಿಸಲಾದ ಶೂನ್ಯ ಟಿಕೆಟ್, ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ, ನಿಗಮಗಳಿಗೆ ಭರಿಸಲಾಗುವುದು.
11.ಸೇವಾಸಿಂಧು ತಂತ್ರಾಂಶದ ಮೂಲಕ ಜೂನ್ 15 ರಿಂದ ಅರ್ಜಿ ಸಲ್ಲಿಸಲು ಅವಕಾಶ
12. ಜೂನ್.15 ರಿಂದ 3 ತಿಂಗಳೊಳಗೆ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ
13. ಸದ್ಯಕ್ಕೆ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು
14. ಶಕ್ತಿ ಯೋಜನೆಯಡಿ ಮುಂಗಡ ಟಿಕೆಟ್ ಬುಕ್ಕಿಂಗ್ ಗೂ ಅವಕಾಶ
ಇದನ್ನೂ ಓದಿ: Amith sha: ದೇಶದ ಮುಂದಿನ ಪ್ರಧಾನಿಯಾಗಿ ತಮಿಳು ನಾಯಕ ಆಯ್ಕೆ- ಅಚ್ಚರಿ ಹೇಳಿಕೆ ನೀಡಿದ ಅಮಿತ್ ಶಾ