Current Price Hike : ‘ನಾವು ವಿದ್ಯುತ್‌ ದರ ಏರಿಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಏರಿಕೆಯ ದಿನಾಂಕ ನಿಗದಿಯಾಗಿತ್ತು’ – ಸಿಎಂ ಸಿದ್ಧರಾಮಯ್ಯ ಹೇಳಿಕೆ!

Current Price Hike : ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೆ ತರುವುದಾಗಿ ಘೋಷಿಸಿತ್ತು. ಅಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಘೋಷಿಸಿದಂತೆ ಇಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಯಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯಡಿ ಜುಲೈ ತಿಂಗಳಿನಿಂದ 200 ಯೂನಿಟ್ ತನಕ ಉಚಿತ ವಿದ್ಯುತ್ (Free Current) ಇರಲಿದೆ. ಈ ಘೋಷಣೆ ಬೆನ್ನಲ್ಲೆ ರಾಜ್ಯ ಸರ್ಕಾರ ವಿದ್ಯುತ್ ಯೂನಿಟ್‌ ದರ (Current Price Hike) ಏರಿಸಿತ್ತು.

 

 

ವಿದ್ಯುತ್ ದರ ಏರಿಕೆ ಮಾಡಿದ ಹಿನ್ನೆಲೆ ರಾಜ್ಯದ ಜನತೆ ರೊಚ್ಚಿಗೆದ್ದರು. ಜನಸಾಮಾನ್ಯರು ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಇದೀಗ ವಿದ್ಯುತ್ ದರ ಏರಿಕೆಯ ಬಗ್ಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ. ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ.

 

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ

ಸಿದ್ದರಾಮಯ್ಯ (Siddaramaiah), ನಾವು ಗ್ಯಾರಂಟಿ ಘೋಷಿಸಿದ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದರು. ಇದೀಗ ಘೋಷಿಸಿದಂತೆ ಗ್ಯಾರಂಟಿ ಜಾರಿಯೂ ತಂದಾಯಿತು. ಅವರು ಟೀಕಿಸುತ್ತಲೇ ಇರಲಿ ಎಂದು ಹೇಳಿದರು.

 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವಿದ್ಯುತ್ ದರ ಏರಿಕೆ ಮಾಡಿದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನರಲ್ಲಿ ಆಕ್ರೋಶ ಬಿತ್ತುತ್ತಿದ್ದಾರೆ. ಅವರಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ, ನಾವು ವಿದ್ಯುತ್‌ ದರ ಏರಿಸಿಲ್ಲ. ಚುನಾವಣೆಗೂ ಮೊದಲೇ ವಿದ್ಯುತ್ ದರ ಏರಿಕೆಯ ದಿನಾಂಕ ಗೊತ್ತುಪಡಿಸಲಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲೇ ಮೇ 12 ರಿಂದ ವಿದ್ಯುತ್ ದರ ಏರಿಕೆ ಎಂದು ಏಪ್ರಿಲ್ ನಲ್ಲಿಯೇ ತೀರ್ಮಾನವಾಗಿತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇದು ಜಾರಿಯಾಗಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಉಚಿತ ಬಸ್ ಯೋಜನೆಗೆ ‘ಶಕ್ತಿ’ ಹೆಸರಿಟ್ಟ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ ಕಂ ಕಂಡಕ್ಟರ್ ಸಿದ್ರಾಮಯ್ಯ

Leave A Reply

Your email address will not be published.