ರೈಲು ಬರುತ್ತಿದ್ದಂತೆ ಹಳಿಗೆ ತಲೆಕೊಟ್ಟ ವ್ಯಕ್ತಿ: ಮಿಂಚಿನಂತೆ ಓಡಿ ಟ್ರಾಕ್’ಗೆ ಇಳಿದು ರಕ್ಷಿಸಿದ ಮಹಿಳಾ ಕಾನ್‌ಸ್ಟೇಬಲ್ !

Viral video : ರೈಲು ಬರುತ್ತಿರುವುದನ್ನು ಕಾದು ಕುಳಿತು, ರೈಲು ಕಂಡ ತಕ್ಷಣ ಹೋಗಿ ಹಳಿಗೆ ತಲೆ ಕೊಟ್ಟ ವ್ಯಕ್ತಿಯನ್ನು ಮಹಿಳಾ. ಪೊಲೀಸ್ ಒಬ್ಬರು ಕ್ಷಿಪ್ರವಾಗಿ ಎಳೆದು ಹಾಕಿ ರಕ್ಷಿಸಿರುವ ಘಟನೆ ನಡೆದಿದೆ. ಹೀಗೆ ಸಾಯಲು ಹೊರಟ ವ್ಯಕ್ತಿಯನ್ನು ಮಹಿಳಾ ಸಿಬ್ಬಂದಿ ರಕ್ಷಿಸುತ್ತಿರುವ ದೃಶ್ಯದ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ (Viral video )ಆಗಿದೆ.

 

ಪಶ್ಚಿಮ ಬಂಗಾಳದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಿಳಾ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ತನ್ನ ಪ್ರಾಣಭಯ ರಕ್ಷಿಸುವ ಮೂಲಕ ಒಂದು ದೊಡ್ಡ ಅವಘಡವನ್ನು ತಪ್ಪಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳನ್ನು ಆರ್‌ಪಿಎಫ್ ಇಂಡಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಆ ಮಹಿಳಾ ಸಿಬ್ಬಂದಿಗೆ ಸೆಲ್ಯೂಟ್ ಹೊಡೆದು ಗೌರವ ನೀಡಿದೆ.

 

ಅಲ್ಲಿನ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹಠಾತ್ತನೆ ಹಳಿಗೆ ಇಳಿದು ಓಡಿ ಹೋಗಿ ರೈಲು ಬರುತ್ತಿರುವ ಹಳಿಯ ಮೇಲೆ ತಲೆ ಕೊಟ್ಟು ಮಲಗಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ಮಹಿಳಾ ಸಿಬ್ಬಂದಿ ಒಬ್ಬರು ತಕ್ಷಣ ಟ್ರ್ಯಾಕ್‌ ಗೆ ಇಳಿದು ರೈಲು ಹಳಿಗೆ ತಲೆಯಿಟ್ಟ ವ್ಯಕ್ತಿಯನ್ನು ಎಳೆದು ಹಾಕಿದ್ದಾರೆ. ಮಹಿಳಾ ಪೊಲೀಸ್ ಸಹಾಯಕ್ಕೆ ಧಾವಿಸಿದುದನ್ನು ಕಂಡ ಇನ್ನಿಬ್ಬರು ಆ ವೇಳೆ ಇನ್ನಿಬ್ಬರು ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಿ ರೈಲು ಅದೇ ಹಳಿಯ ಮೇಲೆ ಪಾಸ್‌ ಆಗುತ್ತದೆ. ಮೈನವಿರೇಳಿಸುವ ಸಿನಿಮೀಯ ದೃಶ್ಯದ ರೀತಿಯ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಾಹಸದ ವೀಡಿಯೋವನ್ನು ಪೋಸ್ಟ್‌ ಮಾಡಿದ ಆರ್‌ಪಿಎಫ್‌ ಇಂಡಿಯಾ, “ ರೈಲೊಂದು ಪೂರ್ವ ಮೇದಿನಿಪುರ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿತ್ತು. ಈ ವೇಳೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ತಕ್ಷಣ ಮಹಿಳಾ ಕಾನ್‌ಸ್ಟೇಬಲ್‌ ಕೆ.ಸುಮತಿ ಧಾವಿಸಿ ಆತನನ್ನು ರಕ್ಷಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ಅವರ ಬದ್ಧತೆಗೆ ನಮ್ಮದೊಂದು ಸೆಲ್ಯೂಟ್‌ ” ಎಂದು ಬರೆದುಕೊಂಡಿದೆ.

 

 

ಈ ಅನಾಮಿಕ ವ್ಯಕ್ತಿಯನ್ನು ರಕ್ಷಿಸಿದ ಆರ್‌ಪಿಎಫ್‌ ಸಿಬ್ಬಂದಿಯ ಬದ್ಧತೆಯನ್ನು ನೂರಾರು ಜನ ಶ್ಲಾಘಿಸಿದ್ದು, ಸುಮತಿಯವರಿಗೆ ಎಲ್ಲರೂ ಅಭಿನಂದನೆಗಳು ಹೇಳುತ್ತಿದ್ದಾರೆ.

 

ಇದನ್ನೂ ಓದಿ :ರಾತ್ರಿಯಿಡೀ ಬಾಟಲಿಯಲ್ಲಿ ಇಟ್ಟ ನೀರನ್ನು ಕುಡಿಯಬಹುದೇ?ವೈದ್ಯರು ಏನು ಹೇಳುತ್ತಾರೆ?

Leave A Reply

Your email address will not be published.