Mirjapur: ಒಡಿಶಾ ರೈಲು ದುರಂತದಲ್ಲಿ ಪವಾಡವೆಂಬಂತೆ ಬದುಕುಳಿದ ಜೈನ ಯಾತ್ರಾರ್ಥಿ ಮನೆಗೆ ಬರುವ ಮೊದಲೇ ಹೃದಯಾಘಾತದಿಂದ ಸಾವು!
Karnataka district latest news Odisha train crash uodates Chikamagaluru piligrim survived odisha train accident after died of a heart attack
Chikamagaluru piligrim: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಒಡಿಶಾ ರೈಲು ದುರಂತದಲ್ಲಿ (Odisha train accident) ಪ್ರಾಣಾಪಾಯದಿಂದ ಪಾರಾಗಿದ್ದ ಚಿಕ್ಕಮಗಳೂರಿನ ವ್ಯಕ್ತಿ (Chikamagaluru piligrim), ಒಡಿಶಾ ಪ್ರವಾಸ ಮುಗಿಸಿ ವಾಪಸ್ ಬರುವಾಗ ಹೃದಯಾಘಾತಕ್ಕೆ(Heart attack) ಒಳಗಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹೌದು, ಚಿಕ್ಕಮಗಳೂರಿನ(Chikkamagalure) ಕಳಸ(Kalasa)ದಿಂದ ಜೈನರ ತೀರ್ಥಕ್ಷೇತ್ರವಾದ ಒಡಿಶಾ ಬಳಿ ಇರುವ ಸಮೇದ್ ಶಿಖರ್ಜಿಗೆ(Samed Shikharji) ಪ್ರಯಾಣ ಬೆಳೆಸಿದ್ದ 110 ಜನರ ತಂಡವು ಅದೃಷ್ಟವೆಂಬಂತೆ ಒಡಿಶಾ ರೈಲು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇಡೀ ದೇಶವೇ ರೈಲಿನಲ್ಲಿದ್ದ ಪ್ರಯಾಣಿಕರು ಬದುಕಿದ್ದಾರೆಯೋ ಇಲ್ಲವೋ ಎಂದು ಆತಂಕದಲ್ಲಿದ್ದಾಗ ಕರ್ನಾಟಕದಿಂದ ತೆರಳಿದ್ದ ಈ 110 ಜನರ ತಂಡವು ಅಲ್ಲಿ ಫೋಟೋ ತೆಗೆಸಿಕೊಂಡು ನಾವೆಲ್ಲರೂ ಬದುಕಿದ್ದೇವೆ ಯಾವುದೇ ಅಪಾಯವಾಗಿಲ್ಲ ಎಂದು ಫೋಟೋವೊಂದನ್ನು ಕರ್ನಾಟಕದ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದರು.
ಆದರೆ ದುರದೃಷ್ಟವಶಾತ್, ಇದೇ ಪ್ರವಾಸದ ಗುಂಪಿನಲ್ಲಿದ್ದ ಧರ್ಮಪಾಲಯ್ಯ (Dharmapalayya-72) ಎಂಬುವವರು ಸುಮೇದ್ ಶಿಖರ್ಜಿ ಜೈನ ಯಾತ್ರೆಯನ್ನು ಮುಗಿಸಿಕೊಂಡು ಹಿಂದಿರುಗುವಾಗ ಹೃದಯಾದಿಂದ ಸಾವನ್ನಪ್ಪಿದ್ದಾರೆ. ಜೈನ ಯಾತ್ರಿಕರು ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಮಿರ್ಜಾಪುರ(Mirjapura) ಸರ್ಕಾರಿ ಆಸ್ಪತ್ರೆ ಮುಂಭಾಗ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಸ್ವಗ್ರಾಮ ಕಳಕೋಡು ತಲುಪಲು ಎರಡು ದಿನ ಬೇಕಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.