Bomb Threat: ತೆಂಗಿನಕಾಯಿಯಲ್ಲಿ ಬಾಂಬ್ ಉಂಟು ಮಾರಾಯ್ರೆ; ಕುಕ್ಕರ್ ಬಾಂಬ್ ಗಿಂತಲೂ ಹೆಚ್ಚು ಭಯ ಸೃಷ್ಟಿ, ವಿಮಾನ ಸಿಬ್ಬಂದಿ ಸುಸ್ತೋ ಸುಸ್ತು!

National latest news Bomb Threat At Delhi Airport Delays Mumbai-Bound Vistara Flight By 2 Hours

Bomb-threat in Vistara flight: ಬಾಂಬ್ ಎಂದಾಕ್ಷಣ ಅರೆಕ್ಷಣ ಭಯ ಹುಟ್ಟುವುದು ಸಹಜ. ಈ ಮೊದಲು ಕಸದ ತೊಟ್ಟಿಯಲ್ಲಿ, ಕುಕ್ಕರ್ ನಲ್ಲಿ ಹೀಗೆ ಕೆಲವೊಂದರಲ್ಲಿ ಪತ್ತೆಯಾಗಿ ಸುದ್ದಿಯಾಗುತ್ತಿದ್ದ ಬಾಂಬ್ ಇಲ್ಲೊಂದೆಡೆ ತೆಂಗಿನಕಾಯಿಯಲ್ಲಿದೆ ಎನ್ನುವ ಸುದ್ದಿ ಭೀತಿಗೆ ಕಾರಣವಾಗಿದೆ.

 

‘ ಕುಂಬಳ ಕಾಯಲ್ಲಿ ಬಾಂಬು ಉಂಟು ಮಾರಾಯ್ರೆ’ ಎನ್ನುವ ಹಾಸ್ಯ ನಟ ದಿನೇಶ್ ಅವರ. ಜೋಕು ಕಂ ಬೆದರಿಕೆಗೆ ಹೆದರಿ ಊರಿನ ಮಾರ್ಕೆಟ್ ಪೂರಾ ಖಾಲಿಯಾಗುವ ಸಿನಿಮೀಯ ಸನ್ನುವೇಶವೊಂದನ್ನು ನೆನಪಿಸುವ ಹಾಗೆ, ನಿನ್ನೆ ತೆಂಗಿನಕಾಯಿಯಲ್ಲಿ ಬಾಂಬು ಉಂಟೆಂಬ(Bomb-threat in Vistara flight) ನೆಪದಲ್ಲಿ ವಿಮಾನವೊಂದು ಎರಡು ಗಂಟೆಗಳ ಕಾಲ ವಿಮಾನ ಪ್ರಯಾಣ ನಿಲ್ಲಿಸಿದ ಘಟನೆ ವರದಿಯಾಗಿದೆ. ದಿಲ್ಲಿ-ಮುಂಬೈ ಹೊರಟಿದ್ದ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರ ಫೋನ್ ಸಂಭಾಷಣೆಯೇ ಇದಕ್ಕೆ ಕಾರಣವಾಗಿದೆ.

 

ಏನಿದು ಘಟನೆ;

ದುಬೈಗೆ ತೆರಳಬೇಕಿದ್ದ ವ್ಯಕ್ತಿಯೋರ್ವರು ವಿಸ್ತಾರ ವಿಮಾನ ಏರಿಕುಳಿತಿದ್ದರು. ಇನ್ನೂ ವಿಮಾನ ಶುರುವಾಗಲು ಸಮಯಾವಕಾಶ ಇತ್ತು. ಆ ಸಂದರ್ಭದಲ್ಲಿ ತನ್ನ ತಾಯಿಯೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದು, ತೆಂಗಿನಕಾಯಿ ಹಾಗೂ ಬಾಂಬ್ ವಿಚಾರ ಮಾತನಾಡಿದ್ದರು. ಅದನ್ನು ಕೇಳಿಸಿಕೊಂಡ ಸಹ ಪ್ರಯಾಣಿಕ ಮಹಿಳೆಯೋರ್ವರು ಗಾಬರಿಗೊಂಡು ವಿಮಾನದ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು. ಆಕೆಯ ಆತಂಕ ಕಂಡ ಸಿಬ್ಬಂದಿ ಕೂಡಲೇ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬರದ ಹಿನ್ನೆಲೆಯಲ್ಲಿ ಮತ್ತೆ ಯಾನ ಮುಂದುವರಿಸಲಾಯಿತು.

 

ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ವಿಮಾನ ಏರಿದ್ದ ವ್ಯಕ್ತಿ ತೆಂಗಿನಕಾಯಿಯನ್ನು ಬ್ಯಾಗ್ ನಲ್ಲಿರಿಸಿದ್ದರು. ಅದನ್ನು ವಿಮಾನ ನಿಲ್ದಾಣದ. ಭದ್ರತಾ ಅಧಿಕಾರಿಗಳು ಇತರ ಎಲ್ಲಾ ವಸ್ತುಗಳ ತಪಾಸಣೆ ನಡೆಸುವ ಹಾಗೆ ತಪಾಸಣೆ ಮಾಡಿದ್ದರು.  ತೆಂಗಿನ ಕಾಯಿಯನ್ನು ಕೂಡಾ ಬಾಂಬ್ ತೆಗೆದು, ಅದರಲ್ಲಿ ಬಾಂಬ್ ಉಂಟಾ ಎಂದು ಪರಿಶೀಲಿಸಿದರು ಎಂದು ತೆಂಗಿನ ಕಾಯಿ ಒಯ್ಯಿತ್ತಿರುವ ವ್ಯಕ್ತಿಯು ತನ್ನ ತಾಯಿಗೆ ವಿವರಿಸಿದ್ದರು. ಸಹ ಪ್ರಯಾಣಿಕ ಮಹಿಳೆಗೆ ಕೇವಲ ‘ ಬಾಂಬ್ ‘ ಎನ್ನುವ ಪದ ಮಾತ್ರ ಕೇಳಿಸಿದೆ. ಆಕೆ ಭಯ ಮತ್ತು ಅನುಮಾನದಿಂದ ಭದ್ರತಾ ಸಿಬ್ಬಂದಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಈ ವಿಚಾರವನ್ನು ತನ್ನ ತಾಯಿಯೊಂದಿಗೆ ಹೇಳಿಕೊಳ್ಳುತ್ತಿದ್ದಾಗ ಮಹಿಳೆ ಆಲಿಸಿಕೊಂಡು ಆತಂಕಗೊಂಡು ರಾದ್ಧಾಂತ ನಡೆದಿದೆ.

 

ತಕ್ಷಣ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸದ ವಿಮಾನಯಾನ ಸಿಬ್ಬಂದಿ ತಕ್ಷಣ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ವಿಷದವಾಗಿ ಪರಿಶೀಲನೆ ನಡೆಸಿದ್ದಾರೆ. ನಂತರ ತೆಂಗಿನಕಾಯಿ ಒಯ್ಯುತ್ತಿದ್ದ ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ಯಾವುದೇ ಬಾಂಬ್ ಆಗಲಿ, ಅನುಮಾನಾಸ್ಪದ ವಸ್ತುಗಳು ಕಂಡುಬಂದಿರುವುದಿಲ್ಲ ಎಂದು ಹೇಳಿದ್ದಾರೆ. ತದನಂತರ ವಿಮಾನ ಒಂದುವರೆ ಗಂಟೆ ತಡವಾಗಿ ಹೊರಟಿದೆ.

Leave A Reply

Your email address will not be published.