ಸಂಸತ್ ಭವನದಲ್ಲಿ ಮಗುವಿಗೆ ಮೊಲೆ ಹಾಲುಣಿಸಿದ ಮಹಿಳಾ ಸಂಸದೆ !
International news politics news Italian lawmaker breastfeeds baby in parliament fellow members applaud
Breastfeeds baby in parliament : ಸಂಸತ್ತಿನಲ್ಲಿ ಸ್ತನ್ಯಪಾನ ಮಹಿಳೆಯೊಬ್ಬರು(Breastfeeds baby in parliament ) ಸುದ್ದಿ ಮಾಡಿದ್ದು, ಆಕೆ ಈ ರೀತಿ ಮಾಡಿದ ಮೊದಲ ರಾಜಕಾರಣಿಯಾಗಿದ್ದಾರೆ. ಇಂತಹಾ ಅಪರೂಪದ ಹೃದಯಸ್ಪರ್ಶಿ ಘಟನೆಗೆ ರಾಜಕೀಯ ತಾಣವೊಂದು ಸಾಕ್ಷಿಯಾಗಿದೆ.
ಮಹಿಳಾ ಸಂಸದೆ ಒಬ್ಬರು ಸಂಸತ್ ಭವನದಲ್ಲಿ ತನ್ನ ಮಗುವಿಗೆ ಸ್ಥನ್ಯಪಾನ ಮಾಡಿದ್ದಾರೆ. ತನ್ನ ಗಂಡು ಮಗುವನ್ನು ಅಪ್ಪಿಕೊಂಡು ಸಂಸತ್ ಸದಸ್ಯರ ಆಸನದಲ್ಲಿ ಕುಳಿತು ಮೊಲೆ ಯೂಡಿದ್ದಾಳೆ. ಈ ಅಪರೂಪದ ದೃಶ್ಯ ಇಟಲಿ ಸಂಸತ್ತಿನಲ್ಲಿ ನಡೆದಿದೆ. ಅಲ್ಲಿನ ಮಹಿಳಾ ಸಂಸದೆ ಗಿಲ್ಡಾ ಸ್ಪೋರ್ಟಿಲೊ ಇಟಲಿ ಸಂಸತ್ತಿನ ಸಭಾಂಗಣದಲ್ಲಿ ತಮ್ಮ ಮಗುಗೆ ಹಾಲುಣಿಸಿದರು. ಸದಸ್ಯರು ಕುಳಿತಿದ್ದ ಬೆಂಚಿನ ಬಳಿ ಮಗನನ್ನು ಎತ್ತಿಕೊಂಡು ಅವರು ಎದೆಯ ಹಾಲು ಕುಡಿಸಿದ್ದಾರೆ. ಈ ಘಟನೆಗೆ ಸಂಸದರು ಚಪ್ಪಾಳೆ ತಟ್ಟಿ ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಪುರುಷರದೇ ಬಹು ಪ್ರಾಬಲ್ಯವಿರುವ ಇಟಲಿಯ ಕೆಳಮನೆಯಲ್ಲಿ ಇಂತಹ ಭಾವುಕ ಘಟನೆ ನಡೆಯುತ್ತಿರುವುದು ಗಮನಾರ್ಹ ವಿಷಯವಾಗಿದೆ.
ITALIEN, HEUTE.
GILDA SPORTIELLO IST DIE ERSTE ABGEORDNETE, DIE MIT EINEM NEUGEBORENEN IN DIE ABGEORDNETENKAMMER ERSCHEINT UND IHR BABY FEDERICO STILLT. DER APPLAUS DER GESAMTEN VERSAMMLUNG WAR LANG UND INTENSIV. PIC.TWITTER.COM/ZFYTIXEGUS
— THEMISSROSSI 🍋 (@THEMISSROSSI) JUNE 7, 2023
ಹಿಂದೆ, ಮಹಿಳಾ ಸಂಸದರು ತಮ್ಮ ಮಕ್ಕಳನ್ನು ಸಂಸತ್ ಭಾವನೆಗೆ ಕರೆ ತರಲು ಅನುಮತಿ ಇರಲಿಲ್ಲ. ಆದರೆ ಕಳೆದ ನವೆಂಬರ್‌ನಲ್ಲಿ, ಸಂಸದೀಯ ನಿಯಮಗಳ ಸಮಿತಿ, ಮಹಿಳಾ ಶಾಸಕರುಗಳು ತಮ್ಮ ಮಕ್ಕಳನ್ನು ಇಟಲಿಯು ಸಂಸತ್ತಿಗೆ ಕರೆತರಲು ಅವಕಾಶ ನೀಡುವ ಕಾನೂನನ್ನು ಅಂಗೀಕರಿಸಿತ್ತು. ಆದರೆ ಆದರೆ ಯಾವ ಮಹಿಳಾ ಶಾಸಕರುಗಳು ಚಿಕ್ಕ ಮಗುವನ್ನು ಹೊಂದಿರದ ಕಾರಣ ಇವರಿಗೆ ಯಾರು ಮಗುವನ್ನು ಸಂಸತ್ ಭವನಕ್ಕೆ ಕರೆತಂದಿರಲಿಲ್ಲ. ಈಗ ಮಕ್ಕಳಿಗೆ ಒಂದು ವರ್ಷ ತುಂಬುವವರೆಗೆ ಸಂಸತ್ತಿನಲ್ಲಿ ಎದೆಹಾಲು ಕುಡಿಸಬಹುದು ಎಂದು ನಿರ್ಧರಿಸಲಾದ 6 ತಿಂಗಳ ನಂತರ ಮಹಿಳಾ ಸಂಸದೆ ಗಿಲ್ಡಾ ಸ್ಪೋರ್ಟಿಲೊ ತನ್ನ ಮಗುವನ್ನು ಕರೆ ತಂದಿದ್ದಾರೆ. ಈಕೆಯ ಈ ಕಾರ್ಯಕ್ಕೆ ಜಾಗತಿಕವಾಗಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳೆಯರು ಸ್ತನ್ಯಪಾನವನ್ನು ಸಮಯಕ್ಕಿಂತ ಮುಂಚಿತ ಸ್ತನ್ಯಪಾನ ನಿಲ್ಲಿಸುವುದು ತಮ್ಮ ಆಯ್ಕೆಯಿಂದಲ್ಲ, ಬದಲಿಗೆ ಅವರು ಕೆಲಸಕ್ಕೆ ಹೋಗಲು ಹೀಗೆ ಮಾಡಬೇಕಾಗುತ್ತದೆ. ಇದನ್ನು ಮನಗಂಡ ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದ ಜಾರ್ಜಿಯಾ ಮೆಲೋನಿ ಅವರು ಸ್ತನ್ಯಪಾನವನ್ನು ಅನುಮತಿಸುವ ಹೊಸ ನಿಯಮವನ್ನು ಅಕ್ಟೋಬರ್ 2019 ರಲ್ಲಿ ಮಂಡಿಸಿದ ಪ್ರಸ್ತಾಪದ ನಂತರ ಈಗಿನ ನಿಯಮ ಜಾರಿಗೆ ಬಂದಿತು. 2019 ರ ನವೆಂಬರ್‌ನಲ್ಲಿ, ಸಂಸತ್ತಿನ ಕಟ್ಟಡಗಳಲ್ಲಿ ವಿಶೇಷ ಸ್ತನ್ಯಪಾನ ಕೊಠಡಿಯನ್ನು ಉದ್ಘಾಟಿಸಲಾಯಿತು.
ಈಗ ಸಂಸತ್ತಿನಲ್ಲಿ ಸ್ತನ್ಯಪಾನ ಮಾಡಿರುವ ಸುದ್ದಿ ಇಟಲಿಗೆ ಮೊದಲನೆಯದಾಗಿದೆ. ಆದರೆ 13 ವರ್ಷಗಳ ಹಿಂದೆಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಸೆಂಟರ್ ರೈಟ್ ಫೋರ್ಜಾ ಇಟಾಲಿಯಾ ಪಕ್ಷದ ಸೆನೆಟರ್ ಲಿಸಿಯಾ ರೊನ್‌ಜುಲ್ಲಿ ತನ್ನ ಮಗಳಿಗೆ ಮೊಲೆ ಹಾಲುಣಿಸಿದ್ದರು.
ಇದನ್ನೂ ಓದಿ: ತೆಂಗಿನಕಾಯಿಯಲ್ಲಿ ಬಾಂಬ್ ಉಂಟು ಮಾರಾಯ್ರೆ; ಕುಕ್ಕರ್ ಬಾಂಬ್ ಗಿಂತಲೂ ಹೆಚ್ಚು ಭಯ ಸೃಷ್ಟಿ, ವಿಮಾನ ಸಿಬ್ಬಂದಿ ಸುಸ್ತೋ ಸುಸ್ತು!