CM Siddaramaiah: ಕಂಡಕ್ಟರ್ ಆಗಿ ಮಹಿಳೆಯರಿಗೆ ಚೀಟಿ ಹರಿದು ‘ ರೈಟ್ ‘ ಹೇಳಲಿರುವ ಸಿಎಂ: ಒನ್ ಅವರ್ ಕಂಡಕ್ಟರ್ ಪಾತ್ರದಲ್ಲಿ ಸಿದ್ರಾಮಯ್ಯ !

CM Siddaramaiah will issue bus tickets to women as a conductor

CM Siddaramaiah: ಒಂದು ದಿನದ ಸಿಎಂ ಎನ್ನುವ ಕಾನ್ಸೆಪ್ಟ್ ಮೇಲೆ ತಮಿಳು ಚಿತ್ರವೊಂದು ಬಂದಿದ್ದು ಭಾರೀ ಜನಪ್ರಿಯ ಆಗಿರುವ ವಿಷಯ ನಿಮಗೆ ಗೊತ್ತೇ ಇದೆ. ಈಗ ‘ ಒನ್ ಅವರ್ ‘ ಕಂಡಕ್ಟರ್ ನ ಸರದಿ. ಇಲ್ಲೊಬ್ಬರು ಒಂದು ಗಂಟೆಯ ಮಟ್ಟಿಗೆ ಕಂಡಕ್ಟರ್ ಆಗುತ್ತಿದ್ದಾರೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೂನ್ 11 ರಂದು ಸರ್ಕಾರಿ ಬಸ್ ನಲ್ಲಿ ಬಸ್ ಕಂಡಕ್ಟರ್ ಆಗಲಿದ್ದಾರೆ. ಹಾಗಂತ ಇದು ಯಾವುದೋ ಹೊಸ ಚಿತ್ರದ ಶೂಟಿಂಗ್ ಅಲ್ಲ, ಸಿದ್ದರಾಮಯ್ಯನವರು ಯಾವುದೇ ಚಿತ್ರದಲ್ಲೂ ನಟಿಸುತ್ತಿಲ್ಲ. ಬದಲಿಗೆ, ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಶಕ್ತಿ ತುಂಬಲಿದ್ದಾರೆ.

ಜೂನ್ 11 ರ ಬೆಳಿಗ್ಗೆ ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಹೊರಡುವ ಬಿಎಂಟಿಸಿ ಬಸ್ ನಲ್ಲಿ ಸಿಎಂ ಸಿದ್ದರಾಮಯ್ಯನವರು ಟಿಕೇಟು ಹರಿಯಲಿದ್ದಾರೆ. ಮಹಿಳೆಯರಿಗೆ ಉಚಿತ ಟಿಕೆಟ್ ಹರಿದು ಕೊಟ್ಟು ರೈಟ್ ಹೇಳುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮಹತ್ವಕಾಂಕ್ಷೆ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಸಿಎಂ ಚಾಲನೆ ನೀಡಲಿದ್ದು, ತದನಂತರ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಸಭಾ ಕಾರ್ಯದ ಮೂಲಕ ಅಧಿಕೃತ ಚಾಲನೆ ನೀಡಲಾಗುತ್ತದೆ.

ಜನರಿಗೆ ಜೂನ್ 11ರಂದು ಮಧ್ಯಾಹ್ನ 1 ರಿಂದ ಈ ಸೌಲಭ್ಯ:

ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಫ್ರೀಯಾಗಿ ಪ್ರಯಾಣಿಸುವ ಅವಕಾಶವನ್ನು ಜೂನ್ 11ರಂದು ಮಧ್ಯಾಹ್ನ 1 ಗಂಟೆಯಿಂದ ಜಾರಿಗೆ ತರಲಾಗುತ್ತಿದೆ. ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಯನ್ನು ತೋರಿಸಬೇಕಾಗುತ್ತದೆ. ತಮ್ಮ ಒರಿಜಿನಲ್ ದಾಖಲಾತಿಗಳನ್ನು ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.

ಏನೆಲ್ಲಾ ಮೂಲ ದಾಖಲಾತಿಗಳು ಆಗುತ್ತೆ?:
ಆಧಾರ್ ಕಾರ್ಡ್,
ಮತದಾರರ ಗುರುತಿನ ಚೀಟಿ,
ಚಾಲನಾ ಪರವಾನಿಗೆ ಪತ್ರ,
ಅಡ್ರೆಸ್ ಪ್ರೂಫ್ – ಸರ್ಕಾರದ ಇಲಾಖೆಗಳು, ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ,
ವಾಸಸ್ಥಳ ನಮೂದಿಸಿರುವಂತಹ ಕರ್ನಾಟಕ ಸರ್ಕಾರದ ಇಲಾಖೆಗಳು
ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ,
ಅಂಗವಿಕಲರ ಮತ್ತು ಹಿರಿಯ ನಾಗರೀಕ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ.
ನೆನಪಿಡಿ: ಪಾನ್ ಕಾರ್ಡ್ ಆಗೋದಿಲ್ಲ !
ಮೇಲೆ ಹೇಳಿದ ಯಾವುದೇ ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದನ್ನು ತೋರಿಸಿ ಮಹಿಳೆಯರು ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ಉಚಿತವಾಗಿ ಐಷಾರಾಮಿ ಬಸ್ಸುಗಳಲ್ಲದೆ ಇತರ ಸಾಮಾನ್ಯ ವಸ್ತುಗಳಲ್ಲಿ ಉಚಿತವಾಗಿ ಸಂಚರಿಸಬಹುದು.

 

ಇದನ್ನು ಓದಿ: Bangalore to Tirupati Helicopter: ಬೆಂಗಳೂರು-ತಿರುಪತಿ ಹೆಲಿಕಾಪ್ಟರ್​ ಸೇವೆ ಆರಂಭ, ಹೆಚ್ಚಿನ ಮಾಹಿತಿ ಇಲ್ಲಿದೆ 

Leave A Reply

Your email address will not be published.