Koppala: ಕಲುಷಿತ ನೀರು ಸೇವಿಸಿ ಕೊಪ್ಪಳದಲ್ಲಿ ಮತ್ತೊಂದು ಬಾಲಕಿ ಬಲಿ

Koppala news Koppala Girl died due to drink contaminated water

Share the Article

Koppala : ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ದಿನದಿಂದ ದಿನಕ್ಕೆ ಅಸ್ವಸ್ಥಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಬಾಲಕನೊಬ್ಬ ಸಾವನ್ನಪ್ಪಿದ ಬೆನ್ನಲ್ಲೆ ಮತ್ತೊಂದು ಬಾಲಕಿ ಬಲಿಯಾದ ಘಟನೆಯೊಂದು(Koppala) ಬೆಳಕಿಗೆ ಬಂದಿದೆ.

ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. 15 ಜನರ ಪೈಕಿ 10 ವರ್ಷದ ಬಾಲಕಿ ನಿರ್ಮಲಾ ಈರಪ್ಪ ಬೆಳಗಲ್ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.

ಕಲುಷಿತ ನೀರು ಸೇವಿಸಿದಂತ ಅನೇಕ ಜನರಲ್ಲಿ ಏಕಾಏಕಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಇವರೊಂದಿಗೆ 10 ವರ್ಷದ ಬಾಲಕಿ ನಿರ್ಮಲಾ ಈರಪ್ಪ ಬೆಳಗಲ್ ಕೂಡಾ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಬಾಲಕಿ ನಿರ್ಮಲಾ ಈರಪ್ಪ ಬೆಳಗಲ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Manipura: ರೋಗಿಯನ್ನು ಹೊತ್ತೊಯ್ಯುತ್ತಿದ್ದ ಅಂಬುಲೆನ್ಸ್‌ಗೆ ಬೆಂಕಿಯಿಟ್ಟ ಜನ- 8ರ ಬಾಲಕ, ತಾಯಿ ಸುಟ್ಟು ಭಸ್ಮ!!

Leave A Reply