KSCPCR: ಇನ್ನು ಶಾಲಾ ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಬದಲು ಪ್ಯಾಂಟ್ ಅಥವಾ ಚೂಡಿದಾರ ಸಮವಸ್ತ್ರ: ಕೆಎಸ್‌ಸಿಪಿಸಿಆರ್ ಪ್ರಸ್ತಾವನೆ
Karnataka Education news School Uniform news Karnataka panel change girl students uniform to Chudidar pant
School uniform: ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತರಲು ಬಯಸಿದೆ. ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಗಮನ ಹರಿಸಿದ ಸರ್ಕಾರ ಇದೀಗ ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದ ಮೇಲೂ ಕಣ್ಣಿಟ್ಟಿದ್ದು, ಸಮವಸ್ತ್ರ(School uniform) ಬದಲಾವಣೆಗೆ ಚಿಂತನೆ ನಡೆಸಿದೆ.
ಹೌದು, ಭದ್ರತೆ ಮತ್ತು ಹಿತದೃಷ್ಟಿಯಿಂದ 1 ರಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಬದಲು ಪ್ಯಾಂಟ್ ಅಥವಾ ಚೂಡಿದಾರ (ಸಲ್ವಾರ್ ಸೂಟ್) ಸಮವಸ್ತ್ರ ಕಡ್ಡಾಯಗೊಳಿಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(Commission for Protection of Child Rights) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿ(Commissioner of School Education and Literacy Department)ಗೆ ಮನವಿ ಸಲ್ಲಿಸಿದೆ. ಸಾಧ್ಯವಾದರೆ ಶಾಲೆಗಳಲ್ಲಿ ಸೂಚಿಸಲಾದ ಸಮವಸ್ತ್ರದ ನಿಯಮಗಳು ಮತ್ತು ನಿಬಂಧನೆಗಳನ್ನು ಮರುಪರಿಶೀಲಿಸಿ ಮತ್ತು ಬಾಲಕಿಯರ ಒಟ್ಟಾರೆ ಅಭಿವೃದ್ಧಿಗಾಗಿ ಸಮವಸ್ತ್ರದ ನಿಯಮಗಳಲ್ಲಿ ಮಾರ್ಪಾಡು ಮಾಡಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಹೇಳಿದೆ.
ಇದರೊಂದಿಗೆ ಮ ಸ್ಕರ್ಟ್(skirt)ಧರಿಸುವ ಹುಡುಗಿಯರು ಎದುರಿಸುತ್ತಿರುವ ಅನಾನುಕೂಲತೆಗಳ ಕುರಿತು ಆಯೋಗಕ್ಕೆ ಪತ್ರ ಬರೆದ ನಂತರ ಶಿಫಾರಸು ಮಾಡಲಾಗಿದೆ. ಪತ್ರದಲ್ಲಿ ಹುಡುಗಿಯರು ನಾಚಿಕೆ ಸ್ವಭಾವದರಾಗಿದ್ದು, ಸಾಮಾನ್ಯವಾಗಿ ಸ್ಕರ್ಟ್ಗಳನ್ನು ಧರಿಸುವುದರಿಂದ ಮುಜುಗರ ವ್ಯಕ್ತಪಡಿಸುತ್ತಾರೆ. ಪ್ರಯಾಣಿಸುವಾಗ, ಜನನಿಬಿಡ ಪ್ರದೇಶಗಳಲ್ಲಿ ತಿರುಗಾಡುವಾಗ, ಸೈಕ್ಲಿಂಗ್ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಸ್ಕರ್ಟ್ ಧರಿಸುವುದು ಒಂದು ಅಡಚಣೆಯಾಗಿದೆ. ಇನ್ನು ಪತ್ರದಲ್ಲಿ ಲೈಂಗಿಕ ಕಿರುಕುಳದ ವರದಿಗಳೂ ಇವೆಯೆಂದು ಉಲ್ಲೇಖಿಸಿ, ಅವರ ಸಮವಸ್ತ್ರವನ್ನು ಚೂಡಿದಾರ್ ಅಥವಾ ಪ್ಯಾಂಟ್ಗೆ ಬದಲಾಯಿಸುವಂತೆ ಸೂಚಿಸಿದೆ.
ಅಂದಹಾಗೆ ಕರ್ನಾಟಕ ಶಿಕ್ಷಣ ಕಾಯ್ದೆ(karnataka education act), 1983 ರ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಶಿಫಾರಸು ಮಾಡಲು ಸ್ವತಂತ್ರವಾಗಿವೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಗಂಡುಮಕ್ಕಳಿಗೆ ಶರ್ಟ್, ಚಡ್ಡಿ (ಶಾರ್ಟ್ಸ್) ಅಥವಾ ಪ್ಯಾಂಟ್‌ಗಳನ್ನು ಸೂಚಿಸಿದರೆ, ಹೆಚ್ಚಿನ ಖಾಸಗಿ ಶಾಲಾ ಆಡಳಿತಗಳು ಹುಡುಗಿಯರಿಗೆ ಸ್ಕರ್ಟ್‌ಗಳನ್ನು ಸೂಚಿಸಿದೆ. ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಚೂಡಿದಾರಗಳನ್ನು ಧರಿಸುವುದು ಕಡ್ಡಾಯವಾಗಿದೆ. ಎಲ್ಲಾ ಸರಕಾರಿ, ಅನುದಾನಿತ ಮತ್ತು ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಧರಿಸುವುದು ಸಮವಸ್ತ್ರದ ಒಂದು ಭಾಗವಾಗಿದೆ. ಆದರೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೇಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ಪತ್ರ ಬರೆದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕೆಎಸ್‌ಸಿಪಿಸಿಆರ್(KPCPCR) ಅಧ್ಯಕ್ಷ ಕೆ.ನಾಗಣ್ಣಗೌಡ(K naganna) ಅವರು “ಸ್ಕರ್ಟ್ಗಿಂತ ಪ್ಯಾಂಟ್ ಅಥವಾ ಚೂಡಿದಾರ ಧರಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಹೆಚ್ಚಿನ ವಿದ್ಯಾರ್ಥಿನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ನಾವು ಡಿಎಸ್‌ಇಎಲ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.