Post office: ಪೋಸ್ಟ್ ಆಫೀಸಿನಿಂದ ಹೊಸ ಸೇವೆ: ಮನೆ ಬಾಗಿಲಿಗೇ ಬಂದು ಪಾರ್ಸೆಲ್ ಒಯ್ಯಲಿದೆ ಅಂಚೆ ಇಲಾಖೆ

post office introduce parcel on wheels service for customers complete details in kannada

Parcel on wheels service: ಇಂಡಿಯನ್ ಪೋಸ್ಟ್, ಅಂದ್ರೆ ಅಂಚೆ ಕಚೇರಿ ನಂಬಿಕಸ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಸಂಸ್ಥೆ ಹಲವು ವರ್ಷಗಳಿಂದ ನಷ್ಟದ ಹಾದಿಯಲ್ಲಿ ಸಾಗಿದ್ದು ಇತ್ತೀಚಿಗೆ ಇತರ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವುದರೊಂದಿಗೆ ಪುಟಿದೆದ್ದು ನಿಲ್ಲುತ್ತಿದೆ. ಇದೀಗ ಒಂದಿಲ್ಲೊಂದು ವಿನೂತನ ಪ್ರಯೋಗಗಳಿಂದ ಜನಮಾನಸ ಗೆಲ್ಲುತ್ತಾ ಬರುತ್ತಿರುವ ಭಾರತೀಯ ಅಂಚೆ ಇಲಾಖೆ ಇದೀಗ ಮತ್ತೊಂದು ಹೊಸ ಸೇವೆ ಪರಿಚಯಿಸಿದೆ.

ಯಸ್, ಇನ್ಮುಂದೆ ಪಾರ್ಸೆಲ್ ಕಳುಹಿಸಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಅಂಚೆ ಕಚೇರಿಯೇ ಮನೆಬಾಗಿಲಿಗೆ ಓಡಿ ಬರಲಿದೆ. ಆಂಚೆ ಕಚೇರಿಯ ವಾಹನವು ನಿಮ್ಮ ಮನೆಗೇ ಬಂದು ಪಾರ್ಸೆಲ್ ಸ್ವೀಕರಿಸಲಿದ್ದು ಈ ನಿಟ್ಟಿನಲ್ಲಿ ‘ ಪಾರ್ಸೆಲ್ ಆನ್ ವೀಲ್ಸ್ ‘ (Parcel on wheels service) ಅನ್ನುವ ಈ ಹೊಸ ಸೇವೆಯನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸಿದೆ.

ಎಲ್ಲಿಲ್ಲಿ ದೊರೆಯುತ್ತೆ ಈ ಸೇವೆ ಗೊತ್ತಾ ?

ಈ ಸೇವೆಯನ್ನು ಪ್ರಾರಂಭಿಕ ಹಂತದಲ್ಲಿ ಬೆಂಗಳೂರಿನ ಕೈಗಾರಿಕಾ ಪ್ರದೇಶವಾದ ಅಬ್ಬಿಗೆರೆ, ಪೀಣ್ಯದಲ್ಲಿ ಪ್ರಾಯೋಗಿಕವಾಗಿ ಆಚರಣೆಗೆ ತರಲಾಗಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ, ಮುಂದಿನ ಹಂತದಲ್ಲಿ ಬೆಂಗಳೂರು ನಗರದಾದ್ಯಂತ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ ಎನ್ನಲಾಗಿದೆ.

ಈಗ ಕಾರ್ಯಾಚರಿಸಿದ ಈ ಯೋಜನೆಗೆ ಗ್ರಾಹಕರಿಂದ ಸಿಗ್ತಿದೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆಯಂತೆ. ಕೇವಲ ಒಂದು ಕರೆಗೆ ಗ್ರಾಹಕರು ಇರುವಲ್ಲಿಗೇ ಹೋಗಿ ಪಾರ್ಸೆಲ್ ಸಂಗ್ರಹಿಸುವುದರಿಂದ ಈ ಹೊಸ ಸೇವೆಗೆ ಭರ್ಜರಿ ಜನಸ್ಪಂದನೆ ದೊರೆತಿದೆ. ಜೂನ್ 6 ರಂದು ಈ ಸೇವೆ ಆರಂಭವಾಗಿದ್ದು ಒಂದೇ ದಿನ 25 ಕ್ಕೂ ಅಧಿಕ ಸರಕುಗಳನ್ನು ಈ ವಾಹನದ ಮೂಲಕ ಸ್ವೀಕರಿಸಲಾಗಿದೆ.

ಇದಕ್ಕಾಗಿಯೇ ತಯಾರಾಯ್ತು ವಿಶೇಷ ವಾಹನ
ಈ ಪಾರ್ಸೆಲ್ ಗಳನ್ನು ಸ್ವೀಕರಿಸಲು ಅಂಚೆ ಇಲಾಖೆ ತನ್ನ ಬಳಿ ಈಗಾಗಲೇ ಇರುವ ವಾಹನವನ್ನೇ ಒಂದಿಷ್ಟು ಆಲ್ಟ್ರೇಶನ್ ಮಾಡಿ ಬಳಸಿದ್ದು, ಸದ್ಯ ಇಲಾಖೆಯ ಈ ಹೊಸ ಸೇವೆಗೆ ಯಾವುದೇ ರೀತಿಯ ಹೆಚ್ಚುವರಿ ಚಾರ್ಜ್ ಹಾಕಲಾಗುತ್ತಿಲ್ಲ. ಯಾವುದೇ ರೀತಿಯ ಹೊಸ ಖರ್ಚು ಇಲ್ಲದೇ ಇರುವುದರಿಂದ ಮತ್ತು ಅಂಚೆ ಇಲಾಖೆಯಲ್ಲಿ ಆ ಬಗ್ಗೆ ಯಾವುದೇ ರೀತಿಯ ಅವಕಾಶವೇ ಇಲ್ಲದಿರುವುದರಿಂದ ಈ ಸೇವೆ ಸಂಪೂರ್ಣ ಫ್ರೀ. ನೀವೂ ಸದರಿ ಏರಿಯಾದವರಾಗಿದ್ರೆ 94808 84078 ನಂಬರ್ ಗೆ ಕರೆ ಮಾಡಿ ಪಾರ್ಸೆಲ್ ಕಳಿಸಬಹುದಾಗಿದೆ.

ಈ ಸೌಲಭ್ಯಕ್ಕೆ ಸೂಕ್ತ ಸಮಯ ಫಿಕ್ಸ್ ಮಾಡಲಾಗಿದೆ. ಈಗ
ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:30 ರವರೆಗೆ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸಂಜೆ 3 ರಿಂದ 4:30 ರವರೆಗೆ ಈ ಸೇವೆ ಲಭ್ಯ. ಮುಂದೆ ಇನ್ನಷ್ಟು ಏರಿಯಾಗಳಿಗೆ ಇದನ್ನು ವಿಸ್ತರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Dhoomam Trailer: ಹೊಂಬಾಳೆಯಲ್ಲಿ ಮೂಡಿ ಬಂತು ʼಧೂಮಂʼ ಚಿತ್ರದ ಟ್ರೇಲರ್‌! ಫಹಾದ್‌ ಫಾಸಿಲ್‌ ಅಭಿನಯಕ್ಕೆ ಫುಲ್‌ ಮಾರ್ಕ್ಸ್‌!!!

Leave A Reply

Your email address will not be published.