Balasore Train Accident: 40 ಮೃತದೇಹದಲ್ಲಿ ಒಂದೇ ಒಂದು ಗಾಯದ ಗುರುತಿಲ್ಲ, ಆದರೂ ಸಾವು ಸಂಭವಿಸಿದೆ…ಏನು ಕಾರಣ?

Odisha Balasore train accident updates CBI investigation death due to electric shock

Balsore Train Accident: ಒಡಿಶಾದ ಬಾಲಸೋರ್‌ನಲ್ಲಿ ನಡೆದಂತಹ ರೈಲು ಅಪಘಾತ(Balsore Train Accident) ಅತಿದೊಡ್ಡ ರೈಲು ಅಪಘಾತಗಳ ಪಟ್ಟಿಗೆ ಸೇರಿದೆ. ಈ ಅಪಘಾತದಲ್ಲಿ ಇನ್ನೂರಕ್ಕೂ ಹೆಚ್ಚು ಜನ ಮೃತ ಹೊಂದಿದ್ದರೆ, ಸಾವಿರಕ್ಕೂ ಹೆಚ್ಚಿನ ಜನರು ಗಂಭೀರ ಗಾಯಗೊಂಡಿದ್ದಾರೆ. ಆದರೆ ವಿಚಿತ್ರವೆಂದರೆ ಈ ಘಟನೆಯ ನಂತರ ಸ್ಥಳಕ್ಕೆ ಬಂದ ರಕ್ಷಣಾ ಮತ್ತು ಪರಿಹಾರ ತಂಡದವರಿಗೆ ಒಂದೇ ಒಂದು ಗಾಯದ ಗುರುತು ಇಲ್ಲದ ನಲುವತ್ತು ಶವಗಳು ಪತ್ತೆಯಾಗಿದೆ. ಹೌದು, ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಇದ್ಹೇಗೆ ಸಾಧ್ಯ? ಎಂದು ನಿಮಗೆ ಅನಿಸಬಹುದು. ಇದು ನಿಜಕ್ಕೂ ತನಿಖಾ ಸಂಸ್ಥೆಗಳಿಗೆ ಕೂಡಾ ಗೊಂದಲವುಂಟು ಮಾಡಿದೆ. ಆದರೆ ಇದಕ್ಕೆ ಕೂಡಾ ಉತ್ತರ ಇದೀಗ ದೊರಕಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಇದು ದಾಖಲಾಗಿದೆ.

 

ಕೋರಮಂಡಲ್‌ ಎಕ್ಸ್‌ಪ್ರೆಸ್‌ನಿಂದ ವಶಪಡಿಸಿಕೊಂಡ ಸುಮಾರು 40ಮೃತ ದೇಹದಲ್ಲಿ ಗಾಯದ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಈಗ ಸ್ವತಃ ಸರಕಾರಿ ರೈಲ್ವೆ ಪೊಲೀಸ್‌ (ಜಿಆರ್‌ಪಿ) ಮಾಹಿತಿ ನೀಡಿದೆ. ಬಾಲಸೋರ್‌ನ ಜಿಆರ್‌ಪಿ ಪೊಲೀಸ್‌ ಠಾಣೆಯಲ್ಲಿ ದಾಖಲು ಮಾಡಲಾದ ಎಫ್‌ಐಆರ್ ನಲ್ಲಿ ಅಪಘಾತದ ನಮತರ ಓವರ್‌ಹೆಡ್‌ ವೈರ್‌ಗಳು ತುಂಡಾಗಿ ಕೋಚ್‌ಗಳ ಮೇಲೆ ಬಿದ್ದು, ವಿದ್ಯುತ್‌ ಸ್ಪರ್ಶದಿಂದ ಸಾವು ಸಂಭವಿಸಿದೆ ಎಂದು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪಿ ಕುಮಾರ್‌ ನಾಯಕ್‌ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಬೋಗಿಗಳು ಪಲ್ಟಿಯಾದ ಪರಿಣಾಮ ವಿದ್ಯುತ್‌ ಕಂಬಗಳು ಬಿದ್ದು, ಮೇಲಿನಿಂದ ಹೋಗುತ್ತಿದ್ದ ತಂತಿಗಳು ತುಂಡಾಗಿ ಕೋಚ್‌ಗಳ ಮೇಲೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂದೂರು ಕೆರೆಯ ನೊರೆಗೆ ಕಾರಣ ತಿಳಿಸಿದ IISc! ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗ!

Leave A Reply

Your email address will not be published.