Beer truck viral video: ಬಿಯರ್ ತುಂಬಿದ್ದ ಟ್ರಕ್ ಪಲ್ಟಿ : ಬಾಟಲಿಗಾಗಿ ಮುಗಿಬಿದ್ದ ಜನ.! ವಿಡಿಯೋ ವೈರಲ್‌

A truck carrying 200 boxes of beer bottles overturned the crowd ran to the bottles viral video

Share the Article

Beer truck viral video: ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ರಸ್ತೆಯ ಮಧ್ಯದಲ್ಲಿ ಸೋಮವಾರ ಸಂಜೆ ಬಿಯರ್ ತುಂಬಿದ್ದ ಟ್ರಕ್‌ವೊಂದು(Beer truck viral video) ಪಲ್ಟಿಯಾಗಿದ್ದು, ಬಿಯರ್ ಬಾಟಲಿಗಾಗಿ ಜನರು ಮುಗಿಬಿದ್ದಿದ್ದಾರೆ.

ಆಂಧ್ರಪ್ರದೇಶದ ಅನಕಪಲ್ಲಿ ಮತ್ತು ಬಯ್ಯಾವರಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಯರ್‌ ತುಂಬಿದ್ದ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿತ್ತು. ಈ ಸಂದರ್ಭದಲ್ಲಿ ಬಿಯರ್‌ ತುಂಬಿದ್ದ ಟ್ರಕ್‌ ಕಂಡ ಸ್ಥಳೀಯ ಜನರು ಟ್ರಕ್ ಚಾಲಕ ಮತ್ತು ಕ್ಲೀನರ್ ಗೆ ಸಹಾಯಕ್ಕೆ ಬಾರದೇ, ಬಿಯರ್‌ ಬಾಟಲಿ ಕದ್ದು ಕೊಂಡು ಹೋಗುವುದರಲ್ಲೇ ಬ್ಯುಸಿಯಾಗಿದ್ದರು ಎಂದು ತಿಳಿಯಲಾಗಿದೆ.

ಬಿಯರ್ ತುಂಬಿದ್ದ ಟ್ರಕ್ ಪಲ್ಟಿಯಗಾಗಿ ಟ್ರಕ್ ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಷಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 200 ಕೇಸ್ ಬಿಯರ್ ಬಾಟಲಿಗಳು ನೆಲದ ಮೇಲೆ ಬಿದ್ದಿವೆ ಎಂದು ವರದಿಗಳು ತಿಳಿಸಿವೆ.

ಮದ್ಯ ಸಾಗಿಸುವ ಟ್ರಕ್ ರಸ್ತೆ ಅಪಘಾತಗೊಂಡಾಗ ಜನರು ಮದ್ಯದ ಬಾಟಲಿಗಳಿಗಾಗಿ ಮುಗಿಬಿದ್ದ ಘಟನೆಗಳು ಈ ಹಿಂದೆಯೂ ರಾಜ್ಯದಲ್ಲಿ ವರದಿಯಾಗಿವೆ.

 

ಇದನ್ನೂ ಓದಿ: Cloth Cleaning Tips: ಬಟ್ಟೆಯ ಮೇಲಿನ ಚಹಾದ ಕಠಿಣ ಕಲೆಗಳನ್ನು ಅಳಿಸಿ ಹಾಕೋದು ಸುಲಭ, ಇಲ್ಲಿದೆ ಸಿಂಪಲ್ ಟ್ರಿಕ್ಸ್ !

Leave A Reply