ಪ್ರಕೃತಿ ಕಾಳಜಿ ಮಾಡೋಣ ಬನ್ನಿ

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ,ನೀರು, ಮಣ್ಣು,ಮರಗಳು, ಕಾಡುಗಳು,ಸಾಗರಗಳು ಇತ್ಯಾದಿಗಳನ್ನು ಎಂದೆಂದಿಗೂ ಇತ್ಯಾದಿಗಳನ್ನು ಎಂದೆಂದಿಗೂ ಉಳಿಸುವುದು ಮುಖ್ಯವಾಗಿದೆ. ನಾವುಗಳು ಅವಲಂಬಿ ಅವಲಂಬಿತವಾಗಿಸಿರುವ ಈ ಪರಿಸರವನ್ನು ಯುಗ ಯುಗಗಳವರೆಗೂ ಉಳಿಸಬೇಕಿದೆ. ಜೀವ ರಾಶಿಗಳ ರಕ್ಷಣೆ ಪೋಷಣೆಗೆ ತನ್ನೆಲ್ಲಾವನ್ನು ನೀಡಿದ ಭೂಮಿ ಇಂದು ಬರಿದಾಗುತ್ತಿದೆ. ತನ್ನೊಡಲಲ್ಲಿ ಬೆಂಕಿಯ ಕೆಂಡವನ್ನೇ ಆವರಿಸಿದರೂ ನಮ್ಮನ್ನು ಇಂದಿಗೂ ತಂಪು – ಇಂಪುಗಳ ನಿಸರ್ಗದ ಮಡಿಲು ಕಾಪಾಡುತ್ತಿದೆ. ಇದೆಲ್ಲದರ ಬಗ್ಗೆ ಮನುಜ ಒಂದು ಕ್ಷಣ ಯೋಚಿಸದೆ ಪ್ರಕೃತಿಗೆ ಕೃತಜ್ಞನಾಗಿರುವುದನ್ನು ಬಿಟ್ಟು ವಿನಾಶಕ್ಕೆ ಮುಂದಾಗುತ್ತಿದ್ದಾನೆ.

ಪರಿಸರದ ಅವಿಭಾಜ್ಯ ಅಂಗ ಎನಿಸಿಕೊಂಡಿರುವ ಕಾಡು ನಮ್ಮ ಸ್ವಾರ್ಥ ಚಿಂತನೆಯತ್ತ ಬರಡಾಗ ತೊಡಗುತ್ತಿದೆ. ನಮ್ಮ ಬದುಕಿನ ಉಸಿರಿಗೆ ಅನಿವಾರ್ಯದ ಕಾಡನ್ನು ಅಳಿವಿನ ಅಂಚಿನತ್ತ ಸಾಗುತ್ತಿರುವುದು. ಪಚ್ಚ ಹಸಿರು ಕಾನನ ಬದಲಾಗಿ ಇಂದು ಎಲ್ಲೆಡೆ ಕಾಂಕ್ರೀಟ್ ಭವನಗಳೇ ನಮ್ಮ ಕಣ್ಣಮುಂದಿವೆ. ಈ ಯುದ್ಧದಲ್ಲಿ ತಾತ್ಕಾಲಿಕವಾಗಿ ಪರಿಸರ ಮಾಡಿದರು ಇದಕ್ಕೆ ಬೆಲೆ ತೆರಬೇಕಾದವರು ನಾವೇ.

ಪರಿಸರ ದಿನಾಚರಣೆ ಎಂದರೆ ಎಂದಿನಂತೆ ಇಂದು ಒಂದು ದಿನ ಅಂದುಕೊಂಡೇ ನಾವು ಇಷ್ಟು ವರ್ಷ ಕಳೆದಿದ್ದೇವೆ. ನಾವುಗಳು ಪ್ರಕೃತಿಗೂ ಅಕ್ಕರೆ, ಕಾಳಜಿ ವಹಿಸಬೇಕು ಇಂದಿನ ಯುಗದಲ್ಲಿ ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳು ಮಾಡುತ್ತಿದ್ದೇವೆ. ಇವುಗಳನ್ನು ಹಿತಮಿತವಾಗಿ ಬಳಸುವುದನ್ನು ಕಲಿಯಬೇಕಿದೆ.

ಪರಿಸರ ದಿನದ ಕೆಲವು ಘೋಷಣೆಗಳು :

ಮರಗಳು ಜೀವ ಮತ್ತು ಜೀವನ ಅವುಗಳನ್ನು ಕತ್ತರಿಸಬೇಡಿ.
ನೀರಿಗೆ ನೈದಿಲೆ ಶೃಂಗಾರ, ನಾಡಿಗೆ ಕಾಡೇ ಶೃಂಗಾರ.
ಕಾಡಿದ್ದರೆ ನಾವಿಲ್ಲಿ, ಕಾಡಿಲ್ಲದಿದ್ದರೆ ನಾವಿಲ್ಲ.
ಕಾಡು ಬೆಳೆಸಿ ನಾಡು ಉಳಿಸಿ ವನ್ಯಪ್ರಾಣಿಗಳನ್ನು ರಕ್ಷಿಸಿ

ಆದರೆ ಪ್ರತಿವರ್ಷದಂತೆ ಅತ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ, ವರ್ಷ ಕಳೆದಂತೆ ಪ್ರಕೃತಿ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮಾತ್ರ ದುರಂತ.ಇನ್ನಾದರೂ ಮನುಜ ಜಾಗೃತಿ ನಾಗಿ ಹಸಿರು ಕ್ರಾಂತಿ ಮಾಡಬೇಕಿದೆ. ಪರಿಸರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಅದು ನಿತ್ಯ ನಿರಂತರವಾಗಿರಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಇದಕ್ಕೆ ನಾವು ಮಾಡಬೇಕಾಗಿರುವುದು ಕೆಲವು ಕೆಲಸಗಳ ಅನುಕರಣೆ ತ್ಯಾಜ್ಯ ವಸ್ತುಗಳ ನಿರ್ವಹಣೆ ಪ್ಲಾಸ್ಟಿಕ್ ನಿರ್ವಹಣೆ ಗಾಳಿ, ನೀರು, ಬೆಳಕನ್ನು ಶುದ್ಧವಾಗಿಟ್ಟುಕೊಳ್ಳುವುದು. ಪ್ರಕೃತಿ ಮಾತೆಗೆ ಅದರ ನೈಜ ಸ್ಥಿತಿಯನ್ನು ಪುನಃ ಮರುಜನ್ಮ ಮಾಡುವುದು ನಮ್ಮ ಆದ್ಯ ಕರ್ತವ್ಯ .

ಪರಿಸರ ದಿನದ ಸಲುವಾಗಿ ಆದರೆ ನಮ್ಮ ಮನೆಯ ಆವರಣದಲ್ಲಿ ವಿವಿಧ ರೀತಿಯ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡೋಣ. ಇಂದು ನಮ್ಮ ಮಕ್ಕಳಲ್ಲಿ ಘೋಷಣೆ ಕೂಗಿಸಿ ಅದರ ಅರ್ಥ ತಿಳಿ ಹೇಳಿಯಾದರೂ ಪರಿಸರದ ಮಹತ್ವವನ್ನು ಪೀಳಿಗೆಗೆ ಸಾರೋಣ.

” ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಆದರ್ಶವಾಗಿರಲಿ ಎಲ್ಲರಿಗೂ ಆಶಿಸುತ್ತಾ ನಿಮ್ಮೆಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. ”

ಕಿಶನ್ ಎಂ..
ಪವಿತ್ರನಿಲಯ ಪೆರುವಾಜೆ.. ✍️

Leave A Reply

Your email address will not be published.