Vinay kulakarni: ಗೋಮಾತೆ, ಗೋಪೂಜೆ ಅನ್ನೋ ಈ ಬಿಜೆಪಿಯವ್ರು, ಯಾರೊಬ್ರೂ ಮನೇಲಿ ಹಸು ಸಾಕಿಲ್ಲ!! ಇವರೆಲ್ಲ ಬಾಯಲ್ಲಿ ಬಡಬಡಾಯಿಸೋದಷ್ಟೆ- ವಿನಯ್ ಕುಲಕರ್ಣಿ

Vinay Kulkarni Gopuje None of this BJP has kept a cow at home

Vinay kulakarni: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರೋ ಕಾಂಗ್ರೆಸ್ ಸರ್ಕಾರ(Congress Government) ಆಡಳಿವನ್ನು ಕೈಗೆತ್ತಿಕೊಂಡ ಕೂಡಲೇ, ಬಿಜೆಪಿ(BJP) ಮಾಡಿದ್ದ ಕೆಲ ನಿರ್ಧಾರಗಳನ್ನು ಒಂದೊಂದಾಗಿ ಹಿಂಪಡೆಯಲು ಮುಂದಾಗಿರುವ ನೂತನ ಸರ್ಕಾರ, ಗೋಹತ್ಯೆ ಸಂಬಂಧಿತ ಕಾನೂನನ್ನು ವಾಪಸ್​ ಪಡೆಯಲು ಮುಂದಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ. ಇದೀಗ ಬೆಳಗಾವಿ ಶಾಸಕ ವಿನಯ್ ಕುಲಕರ್ಣಿ(Vinay kulakarni), ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

ಹೌದು, ಗೋಹತ್ಯೆ (Cow Slaughter) ನಿಷೇಧ ಕಾಯ್ದೆ ರದ್ದು ಮಾಡಿದ್ರೆ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರಕ್ಕೆ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಪ್ರತಿಕ್ರಿಯೆ ನೀಡಿದ್ದು, ಗೋಮಾತೆ, ಗೋವು ಎಂದು ಬಾಯಲ್ಲಿ ಬಡಬಡಾಯಿಸೋ ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಕೆಲವರು ಪ್ಲಾಸ್ಟಿಕ್ ಆಕಳು ಇಟ್ಟು ಪೂಜೆ ಮಾಡುತ್ತಾರೆ. ಇವರು ಬರೀ ಮಾತನಾಡುತ್ತಾರೆ ಅಷ್ಟೇ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ “ನನ್ನ ಡೈರಿ(Diary) ಯಲ್ಲಿ 1600 ಹಸುಗಳು ಇವೆ. ನಾನು ದೊಡ್ಡ ಹೈನುಗಾರಿಕೆ ಹೊಂದಿದ್ದೇನೆ. ಅರ್ಧದಷ್ಟು ಹೋರಿಗಳನ್ನು ಇಟ್ಟುಕೊಂಡು ನಾವು ಏನೂ ಮಾಡಲು ಸಾಧ್ಯವಿಲ್ಲ. ಕೃಷಿಯಲ್ಲಿ ಎತ್ತು ಬಳಕೆ ಸಹ ಕಡಿಮೆಯಾಗಿದೆ. ಮೇವು, ಕಾರ್ಮಿಕರ ವೆಚ್ಚ ಹೆಚ್ಚು ಆಗಿದೆ. ಮಾತಾಡಿ ಜನರಿಗೆ ದಾರಿ ತಪ್ಪಿಸುವುದು ಬೇರೆ. ನಮಗೆ ಮೇವು ಸಿಗಲ್ಲ. ಪ್ರ‍್ಯಾಕ್ಟಿಕಲ್ ಆಗಿ ಸರ್ಕಾರ ಮೇವು ಕೊಡಿಸಿ ಕೊಡಲಿ ನೋಡೋಣ ಎಂದರು.ವಾಸ್ತವವಾಗಿ ಅನುಭವಿಸುವುದು ಬೇರೆ” ಎಂದಿದ್ದಾರೆ.

ಇಷ್ಟೇ ಅಲ್ಲದೆ ದೇಶಿಯ ತಳಿ ಉಳಿಸಿಕೊಳ್ಳಲು, ಬೆಳೆಸಲು ಸರ್ಕಾರ ಯೋಜನೆ ಹಾಕಿ ಅವುಗಳಿಗೆ ರಕ್ಷಣೆ ಕೊಡಿ. ಹೆಚ್‌ಎಫ್ ವಿದೇಶಿ ತಳಿಗೆ ನಿರ್ಬಂಧ ಹೇರುತ್ತೇವೆ. ಯಾರಿಂದಾದರೂ ದುಡ್ಡು ಪಡೆದು ಗೋಶಾಲೆ ಮಾಡೋದು ಬೇರೆ. ಕೋಟಿ ಕೋಟಿ ಸಾಲ ಮಾಡಿ ಡೈರಿ ನಡೆಸುತ್ತಿರುತ್ತೇವೆ. ಆಕಳು ಗರ್ಭಧಾರಣೆ ಮಾಡದಿದ್ದರೆ ಅದನ್ನು ಇಟ್ಟುಕೊಂಡು ಏನು ಮಾಡಲಿ? ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿ, ಚರ್ಚೆ ಆಗಲಿ. ನಮ್ಮಂತಹ ರೈತರನ್ನು ಕರೆದು ಚರ್ಚೆ ಮಾಡಬೇಕು. ರಾಜಕಾರಣಿಗಳು, ಜಾತಿವಾದ ಮಾಡುವರನ್ನು ಕರೆಯುವ ಅವಶ್ಯಕತೆ ಇಲ್ಲ” ಎಂದರು.

ಅಂದಹಾಗೆ ಈ ವಿವಾದ ಪ್ರಮುಖವಾಗಿ ಆರಂಭಗೊಳ್ಳುವುದಕ್ಕೆ ಕಾರಣ ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್(K venkatesh) ಹೌದು .. ಈಗಾಗಲೇ ಹೆಮ್ಮೆ ಮತ್ತು ಕೋಣಗಳನ್ನು ಕಡೆಲಾಗುತ್ತಿದೆ ಹಸುಗಳನ್ನು ಕಡಿಯುವುದರಲ್ಲಿ ಏನು ತಪ್ಪಿದೆ? ಈಗಾಗಲೇ ಹಲವು ಹಸುಗಳು ಸಾವನ್ನಪ್ಪುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಿದರು‌ . ಇದೀಗ ಕೆ ವೆಂಕಟೇಶ್ ಅವರ ಈ ಹೇಳಿಕೆ ನೂತನ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಸಚಿವರ ಈ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

 

ಇದನ್ನು ಓದಿ: Actor Naseeruddin Shah: ನನಗೆ ಸಿಕ್ಕಿದ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಫಾರ್ಮ್​ಹೌಸ್​ನಲ್ಲಿರುವ ವಾಶ್‌ರೂಮ್‌ ಬಾಗಿಲುಗಳಾಗಿ ಬಳಸುತ್ತಿದ್ದೇನೆ : ಖ್ಯಾತ ನಟನ ಸ್ಪೋಟಕ ಹೇಳಿಕೆ

Leave A Reply

Your email address will not be published.