ಚಿಕ್ಕಮಗಳೂರು: ಶಾಸಕರ ಕಾರ್ಯಕ್ರಮದಲ್ಲೇ ಯುವಕನ ಬರ್ಬರ ಹತ್ಯೆ;

Murder in Chikmagaluru

Chikmagaluru: ಶಾಸಕರ ಅಭಿನಂದನಾ ಕಾರ್ಯಕ್ರಮದ ತುಂಬಿದ ಸಭೆಯಲ್ಲೇ ಯುವಕನೋರ್ವನನ್ನು ಡ್ರ್ಯಾಗರ್ ನಿಂದ ಇರಿದು ಕೊಲೆ ನಡೆಸಿದ ಘಟನೆಯೊಂದು (Chikmagaluru) ಜಿಲ್ಲೆಯ ತರೀಕೆರೆ ಪಟ್ಟಣದಿಂದ ವರದಿಯಾಗಿದೆ.

 

ಹತ್ಯೆಯಾದ ಯುವಕನನ್ನು ವರುಣ್(28) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಆರೋಪಿಯನ್ನು ಕಬಾಬ್ ಮೂರ್ತಿ ಎಂದು ಗುರುತಿಸಲಾಗಿದೆ.

ಘಟನಾ ವಿವರ:

ತರೀಕೆರೆ ಶಾಸಕ ಶ್ರೀನಿವಾಸ್ ಅವರ ಅಭಿಮಾನಿಗಳ ಬಳಗವೊಂದು ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ್ದು, ಖುದ್ದು ಶಾಸಕರು ಸಹಿತ ಹಲವು ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಆರ್ಕೆಸ್ಟ್ರಾ ದಲ್ಲಿ ಹಾಡು ಬದಲಾವಣೆ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು,ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ ಎಂಬಾತ ಡ್ರ್ಯಾಗರ್ ನಿಂದ ವರುಣ್ ಗೆ ಇರಿದಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಉನ್ನತ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Odisha: ಅಯ್ಯೊ ಮಗನೇ, ಏಲ್ಲಿದ್ದೀಯೋ…? ಕಣ್ಣಲ್ಲಿ ನೀರು, ಮುಖದಲ್ಲಿ ಆತಂಕ!! ಶವಗಳ ರಾಶಿಯ ನಡುವೆ ಮುಸುಕು ತೆಗೆ ತೆಗೆದು ಮಗನಿಗಾಗಿ ತಂದೆಯ ಹುಡುಕಾಟ

Leave A Reply

Your email address will not be published.