Home National Uttar pradesh: ಹಿಂದೂ ಎಂದು ನಂಬಿಸಿ ಪ್ರೇಮಿಸಿದ! ಬಲವಂತವಾಗಿ ಮತಾಂತರಗೊಳಿಸಿ, ಅಪ್ಪನೊಂದಿಗೆ ಮಲಗೆಂದು ವಿಕೃತಿ ಮೆರೆದ...

Uttar pradesh: ಹಿಂದೂ ಎಂದು ನಂಬಿಸಿ ಪ್ರೇಮಿಸಿದ! ಬಲವಂತವಾಗಿ ಮತಾಂತರಗೊಳಿಸಿ, ಅಪ್ಪನೊಂದಿಗೆ ಮಲಗೆಂದು ವಿಕೃತಿ ಮೆರೆದ ಮುಸ್ಲಿಂ ಕಾಮುಕ!

Love Jihad in Uttarpradesh
Image source- Zee news

Hindu neighbor gifts plot of land

Hindu neighbour gifts land to Muslim journalist

Love Jihad in Uttarpradesh: ಲವ್ ಜಿಹಾದ್(Love jihad in Uttarpradesh) ಹಿನ್ನೆಲೆಯಲ್ಲಿ ಅಪ್ರಾಪ್ತ ಯುವತಿಗೆ ಚೂರಿ ಇರಿದು ಸಾಯಿಸಿದ ಘಟನೆ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹಿಂದೂ ಹೆಸರಲ್ಲಿ ಲವ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಿ ಅಪ್ಪನ ಜೊತೆ ಸಂಭೋಗ ನಡೆಸು ಎಂದು ಒತ್ತಾಯಿಸಿದ ಅವಮಾನಕರವಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಉತ್ತರ ಪ್ರದೇಶದ(Uttar pradesh) ರಾಯಬರೇಲಿಯಲ್ಲಿ(Raybareli) ಅಬೀದ್(Abeed) ಎಂಬ ಮುಸ್ಲಿಂ(Muslim) ಯುವಕ ಹಿಂದು ಎನ್ನುತ್ತ, ಅಂಕಿತ್ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದಾನೆ. ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆಕೆಗೆ ಗೊತ್ತಿಲ್ಲದಂತೆ ಸಂಭೋಗದ ವಿಡಿಯೋ ಮಾಡಿ, ಇದೇ ವಿಡಿಯೋಗಳನ್ನಿಟ್ಟು ಬೆದರಿಸಿ ಹುಡುಗಿಯನ್ನು ಬಲವಂತವಾಗಿ ಮತಾಂತರ ಮಾಡಿದ್ದಾನೆ.

ಅಲ್ಲದೆ ಮದುವೆ(Marriage) ಯಾಗುವುದಾಗಿ ಹೇಳಿ ತನ್ನೊಂದಿಗೆ ಮಾತ್ರವಲ್ಲದೆ ತನ್ನ ತಂದೆಯ ಜೊತೆಗೂ ಮಲಗುವಂತೆ, ಸಂಭೋಗ ನಡೆಸುವಂತೆ ಹುಡುಗಿಗೆ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿದ್ದಾನೆ. ಕೊನೆಗೂ ಹೇಗೋ ಅಬೀದ್ ಮನೆಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ, ದೂರು ದಾಖಲಿಸಿದ್ದಾಳೆ. ಇತ್ತ ಅಬೀದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ತಂದೆ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಂದಹಾಗೆ ಅಬೀದ್ ತನ್ನ ಹೆಸರು ಅಂಕಿತ್(Ankit) ಎಂದು ಹೇಳಿ ಹಿಂದು ಹುಡುಗಿಯ ಸ್ನೇಹ ಸಂಂಪಾದಿಸಿದ್ದ. ಯುವತಿಯ ಭೇಟಿಯಾಗುವ ವೇಳೆ ಕೈಗೆ ದಾರ, ತಿಲಕ ಕಟ್ಟುವುದನ್ನೂ ಸೇರಿದಂತೆ ಇತರ ನಾಟಕಗಳನ್ನು ಆಡಿದ್ದ. ಹೀಗಾಗಿ ಯುವತಿಗೆ ಈತನ ಅಸಲಿ ಹೆಸರು ಅಬೀದ್ ಅನ್ನೋದು ಗೊತ್ತೆ ಆಗಿಲ್ಲ. ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇದೇ ವೇಳೆ ಈ ವಿಡಿಯೋಗಳನ್ನು ಮಾಡಿದ್ದ.

ಬಳಿಕ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಬಲವಂತವಾಗಿ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಮತಾಂತರ ಮಾಡಿದ ಅಬೀದ್ ಮನಗೆ ಕರೆದುಕೊಂಡು ಹೋಗಿ, ತನ್ನ ತಂದೆ ಜೊತೆಗೆ ಸಂಭೋಗ ಮಾಡುವಂತೆ ಒತ್ತಾಯಿಸಿದ್ದಾನೆ. ಇಷ್ಟೇ ಅಲ್ಲ ಚಿತ್ರ ಹಿಂಸೆ ನೀಡಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.

ಸದ್ಯ 24 ವರ್ಷದ ಮಹಿಳೆ ಪೊಲೀಸ್ ಠಾಣೆಯಲ್ಲಿ(Police station) ತನಗಾಗಿರುವ ಅನ್ಯಾಯದ ವಿರುದ್ದ ಹೋರಾಟ ಆರಂಭಿಸಿದ್ದಾಳೆ. ಅಬೀದ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿರುವ ಮಹಿಳೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾಳೆ. ಇತ್ತ ಪೊಲೀಸರು ಅಬೀದ್ ಬಂಧಿಸಿದ್ದಾರೆ. ಅಬೀದ್ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಯುವನಿಧಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಮಾರ್ಗಸೂಚಿ ಪ್ರಕಟ: ಯಾರಿಗೆ ಸಿಗತ್ತೆ, ಯಾರಿಗೆ ಸಿಗಲ್ಲ ?!