Husband and wife death: ಮೊದಲ ರಾತ್ರಿಯೇ ದಂಪತಿ ಸಾವು ; ಸ್ವರ್ಗ ಸುಖ ಪಡೆಯುತ್ತಿರುವಾಗ ಸ್ವರ್ಗಸ್ಥರಾಗಲು ಕಾರಣವೇನು?

Husband and wife death in Uttarpradesh

Husband and wife death: ನವ ವಿವಾಹಿತ ದಂಪತಿ ತಮ್ಮ ಮೊದಲ ರಾತ್ರಿಯಂದೇ ಮೃತಪಟ್ಟಿರುವ (Husband and wife death) ಘಟನೆ ಉತ್ತರ ಪ್ರದೇಶದ ಬಹ್ಮಚ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಪ್ರತಾಪ್ ಯಾದವ್ (22) ಹಾಗೂ ಪುಷ್ಪಾ (20) ಎಂದು ಗುರುತಿಸಲಾಗಿದೆ.

ಪ್ರತಾಪ್ ಯಾದವ್ ಮೇ 30 ರಂದು ಪುಷ್ಪಾ ಅವರನ್ನು ವಿವಾಹವಾಗಿದ್ದರು. ಈ ದಂಪತಿ ಮದುವೆಯ ನಂತರದ ಮೊದಲ ರಾತ್ರಿಗಾಗಿ ಕೋಣೆಗೆ ಹೋಗಿದ್ದಾರೆ. ಆದರೆ, ಮರುದಿನ ಬೆಳಗ್ಗೆ ಈ ಜೋಡಿ ಎಷ್ಟು ಹೊತ್ತಾದರೂ ಹೊರಬರಲೇ ಇಲ್ಲ. ಹಾಗಾಗಿ ಮನೆಯವರು ಕೋಣೆಯ ಒಳಗೆ ಹೋಗಿದ್ದು, ನೋಡಿದರೆ ಅವರಿಗೆ ಆಶ್ಚರ್ಯ ಕಾದಿತ್ತು. ಪತಿ-ಪತ್ನಿ ಶವವಾಗಿ ಬಿದ್ದಿದ್ದರು.

ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪತಿ- ಪತ್ನಿ ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವಿವಾಹವಾದ ಒಂದೇ ದಿನಕ್ಕೆ ದಂಪತಿಗಳ ಮರಣಕ್ಕೆ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಮುಂದೆ ಸುಖ ಜೀವನ ನಡೆಸಬೇಕಿದ್ದ ಜೀವಗಳು ಒಟ್ಟಿಗೆ ಇಹಲೋಕ ತ್ಯಜಿಸಿ ಪರಲೋಕ ಸೇರಿದ್ದಾರೆ.ದಂಪತಿಯ ಅಂತ್ಯಕ್ರಿಯೆಯನ್ನು ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಇದನ್ನೂ ಓದಿ: Mb Patil Warns chakravarthy: ‘ ಸೂಲಿಬೆಲೆ, ನಕ್ರಾ ಮಾಡಿದ್ರೆ ಕಂಬಿ ಒಳಗೆ ಹೋಗ್ತೀಯಾ…’ ಚಕ್ರವರ್ತಿಗೆ ಎಂಬಿ ಪಾಟೀಲ್ ಎಚ್ಚರಿಕೆ!

Leave A Reply

Your email address will not be published.