Train Accident: ಓಡಿಶಾದ ಭೀಕರ ರೈಲು ಅಪಘಾತಕ್ಕೆ ಹೊಸ ಟ್ವಿಸ್ಟ್: ಅವಘಡಕ್ಕೆ ಕಾರಣ ರಿವೀಲ್ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
Found responsible for Odisha train accident
Train Accident: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ, ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು–ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ (Train Accident) ಕನಿಷ್ಠ 288 ಮಂದಿ ಮೃತಪಟ್ಟಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರಂತ ರೈಲು ಅಪಘಾತದ ಮೂಲ ಕಾರಣ ಹಾಗೂ ಕಾರಣಕರ್ತರನ್ನು ಪತ್ತೆಹಚ್ಚಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಮಾಹಿತಿ ನೀಡಿದ್ದಾರೆ.
ಹೌದು, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತ ಕುರಿತು, ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ವೈಷ್ಣವ್ ಅವರು, “ಈ ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ. ಪ್ರಧಾನಿ ಮೋದಿ ನಿನ್ನೆ ಸ್ಥಳವನ್ನು ಪರಿಶೀಲಿಸಿದರು. ನಾವು ಇಂದು ಟ್ರ್ಯಾಕ್ ಅನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತೇವೆ. ಎಲ್ಲಾ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬುಧವಾರ ಬೆಳಿಗ್ಗೆ ಮರುಸ್ಥಾಪನೆ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ಇದರಿಂದ ಈ ಮಾರ್ಗದಲ್ಲಿ ರೈಲುಗಳು ಓಡಲು ಆರಂಭಿಸಬಹುದು ಎಂದು ಹೇಳಿದರು.
ಈಗಾಗಲೇ ‘ರೈಲ್ವೆ ಸುರಕ್ಷತಾ ಆಯುಕ್ತರು ಈ ವಿಷಯವನ್ನು ತನಿಖೆ ಮಾಡಿದ್ದಾರೆ. ಇನ್ನೇನು ತನಿಖಾ ವರದಿ ಬರಲಿದೆ. ಆದರೆ,ನಾವು ಘಟನೆಯ ಕಾರಣವನ್ನು ಮತ್ತು ಅದಕ್ಕೆ ಕಾರಣರಾದ ಜನರನ್ನು ಗುರುತಿಸಿದ್ದೇವೆ ಎಂದಿದ್ದಾರೆ.
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯಿಂದಾಗಿ ಇದು ಸಂಭವಿಸಿದೆ’ ಎಂದು ಅವರು ತಿಳಿಸಿದ್ದು, ಬುಧವಾರ ಬೆಳಗಿನ ವೇಳೆಗೆ ಪುನಃಸ್ಥಾಪನೆ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದರಿಂದ ರೈಲುಗಳು ಈ ಟ್ರ್ಯಾಕ್‌ನಲ್ಲಿ ಓಡಾಡಲು ಪ್ರಾರಂಭಿಸಬಹುದು. ಅಪಘಾತಕ್ಕೂ ಕವಚಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಗ್ರೀನ್ ಸಿಗ್ನಲ್!