Odisha Train Accident: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 288 ಕ್ಕೆ ಏರಿಕೆ! 1000 ಮಂದಿಗೆ ಗಾಯ
Odisha Balasore coromandel express train accident
Odisha Train Accident: ಭಾರತದ ರೈಲು ಅವಘಡಗಳ ಕರಾಳ ಇತಿಹಾಸಕ್ಕೆ ಇನ್ನೊಂದು ರೈಲು ಅಪಘಾತ ನಿನ್ನೆ ನಡೆದು ಬರೋಬ್ಬರಿ 288 ಮಂದಿ ಹತರಾಗಿದ್ದಾರೆ. ಒಡಿಶಾದ ಬಾಲಸೋರ್ (Balasore) ಜಿಲ್ಲೆಯಲ್ಲಿ ನಡೆದ ಘನಘೋರ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 288 ಕ್ಕೆ ಏರಿದೆ. ಹಾಗೆನೇ ಈ ದುರಂತದಲ್ಲಿ 1000 ಮಂದಿ ಜನರಿಗೆ ಗಾಯವಾಗಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಇದೊಂದು ನಿಜಕ್ಕೂ ವಿಷಾದನೀಯ ಘಟನೆ ಎಂದೇ ಹೇಳಬಹುದು. ಇದರಿಂದಾಗಿ ಇಂದು ರಾಜ್ಯದಲ್ಲಿ (ಜೂ.03)ಯಾವುದೇ ಸಂಭ್ರಮಾಚರಣೆ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ.
ನಿನ್ನೆ (ಜೂ.02)ರಂದು ಸಂಜೆ 7.30ಕ್ಕೆ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈವ್‌ನಲ್ಲಿ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಸಂಖ್ಯೆ 12841 ಒಡಿಶಾದ ಬಹನಗಾ ಬಜಾರ್‌ನಲ್ಲಿ ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡಿದ ನಂತರ, ಈ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿ ಮತ್ತೆ ಮೂರನೇ ರೈಲು ಮಾರ್ಗದ ಮೇಲೆ ಬಿದ್ದು ಜನರ ಸಾವು ನೋವು ಸಂಭವಿಸಿದೆ.
ದುರದೃಷ್ಟ ಏನೆಂದರೆ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ12864) ಕೋರಮಂಡಲ್ ನ ಬೋಗಿಗಳಿಗೆ ಡಿಕ್ಕಿಹೊಡೆದ ಪರಿಣಾಮ ನಾಲ್ಕು ಬೋಗಿಗಳು ಹಳಿ ತಪ್ಪಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ 10 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂಬುದಾಗಿ ಕೂಡಾ ಅವರು ಘೋಷಣೆ ಮಾಡಿದ್ದರು.
SWR ನೀಡಲಾದ ಸಹಾಯವಾಣಿ ಸಂಖ್ಯೆ ಇಲ್ಲಿದೆ:
ಬೆಂಗಳೂರು(Bangalor): 080-22356409
ಬಂಗಾರಪೇಟೆ(Bangarpet): 08153 255253
ಕುಪ್ಪಂ(Kuppam): 8431403419
ಎಸ್ಎಮ್ವಿಬಿ(SMVB) : 09606005129
ಕೆಜೆಎಮ್(KJM):+91 88612 03980
ಭದ್ರಕ್(Bhadrak): 8455889900
ಜಾಜ್ಪುರ್ ಕಿಯೋನಿಹಾರ್ ರಸ್ತೆ(Jajpur Keonihar Road): 8455889906
ಕಟಕ್(Cuttack): 8455889917
ಭುವನೇಶ್ವರ(Bhubaneswar): 8455889922
ಖುರ್ದಾ ರಸ್ತೆ(Khurda Road): 6370108046
ಬ್ರಹ್ಮಪುರ(Brahmapur): 89173887241
ಬಾಳುಗಾಂವ್(Balugaon): 9937732169
ಪಲಾಸ(Palasa): 8978881006
ಹೌರಾ ಸಹಾಯವಾಣಿ ಸಂಖ್ಯೆ(Howrah Helpline Number): 033-26382217
#WATCH | Latest visuals from the site of the deadly train accident in Odisha's Balasore. Rescue operations underway
The current death toll stands at 233 pic.twitter.com/H1aMrr3zxR
— ANI (@ANI) June 3, 2023
ಇದನ್ನೂ ಓದಿ: Prathap simha: ಬಿಜೆಪಿಯವರನ್ನೂ ಒದ್ದು ಒಳಗೆ ಹಾಕಿ- ಪ್ರತಾಪ್ ಸಿಂಹ!! ಸ್ವತಃ ಬಿಜೆಪಿ ಸಂಸದರೇ ಹೀಗೇಳಿದ್ಯಾಕೆ?