Train accidents: ಈವರೆಗೂ ಭಾರತದಲ್ಲಿ ನಡೆದ ಭೀಕರ ರೈಲು ದುರಂತಗಳಿವು…! ಇಲ್ಲಿದೆ ನೋಡಿ ವಿವರ

14 worst train accidents that occurred in india

Train Accidents : ಉನ್ನತ ಮಟ್ಟದ ಸುರಕ್ಷತಾ ಪ್ರೊಸೀಜರ್ ಗಳು, ನವೀನ ತಂತ್ರಜ್ಞಾನ, ಇಂಟರ್ ಲಾಕ್ ತಂತ್ರಜ್ಞಾನ, ಅತ್ಯಾಧುನಿಕ ಸಂಪರ್ಕ ಸಾಧನಗಳು ಹಾಗೂ ಸ್ಥಳದಲ್ಲಿ ಮೂಲ ಸೌಕರ್ಯದ ಅಭಿವೃದ್ಧಿಯ ಕಾರಣದಿಂದ ಭಾರತದಲ್ಲಿ ರೈಲು ಅಪಘಾತಗಳ(Indian railway accident) ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಈಗ ಮತ್ತೆ ದೇಶ ಕಂಡ ಇನ್ನೊಂದು ಬೃಹತ್ ಅವಘಡ ನಡೆದಿದೆ. ಈ ಹಿಂದೆ ಭಾರತದಲ್ಲಿ ನಡೆದಿರುವ ಅತ್ಯಂತ ಭೀಕರ ರೈಲು ಅವಘಡಗಳ(Train Accidents ) ಬಗ್ಗೆ ಒಂದು ಭೀಕರ ನೋಟ ಇಲ್ಲಿದೆ.

 

1. 1954- ಹೈದರಾಬಾದ್ ರೈಲು ದುರಂತ
28 ಸೆಪ್ಟೆಂಬರ್ 1954ರಲ್ಲಿ ನಡೆದ ಹೈದರಾಬಾದ್(Hyderabad) ರೈಲು ದುರಂತದಲ್ಲಿ ಸುಮಾರು 139 ಜನ ಪ್ರಯಾಣಿಕರು ಮೃತಪಟ್ಟು ನೂರಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ಹೈದರಾಬಾದ್‌ನ ದಕ್ಷಿಣಕ್ಕೆ 75 ಕಿಮೀ ದೂರದಲ್ಲಿ ನಡೆದ ಈ ಘಟನೆಯು ಅತಿ ದೊಡ್ಡ ರೈಲು ಅಪಘಾತಗಳಲ್ಲಿ ಒಂದಾಗಿದೆ

2. 1964ರ ಪಂಬನ್-ಧನುಸ್ಕೊಡಿ ಪ್ಯಾಸೆಂಜರ್ ರೈಲು ದುರಂತ:
1964 ರ ಡಿಸೆಂಬರ್ 23 ರಂದು ನಡೆದ ಪಂಬನ್-ಧನುಸ್ಕೊಡಿ(Pambum-Dhanushkodi) ಪ್ಯಾಸೆಂಜರ್ ರೈಲು ಅಪಘಾತ 150ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು ಇಂದಿಗೂ ಮರೆಯಲಾಗದ ಅತಿ ದೊಡ್ಡ ದುರಂತ. ಘಟನೆ ಕೆಲವರು ಚಂಡಮಾರುತವೇ ಕಾರಣ ಎಂದರೇ ಮತ್ತೆ ಕೆಲವರು ದುಷ್ಕರ್ಮಿಗಳ ಕೃತ್ಯವೇ ಇದಕ್ಕೆ ಕಾರಣ ಎಂದಿದ್ದಾರೆ. ಆದರೂ ಘಟನೆಗೆ ಬಗ್ಗೆ ಇದುವರೆಗೂ ನಿಖರ ಕಾರಣವಿಲ್ಲ.

3. 1981ರ ಬಿಹಾರ ರೈಲು ದುರಂತ
ಬಿಹಾರದ ಸಹರ್ಸಾ(Bihar sahasra) ಬಳಿ ಭೀಕರ ಅವಘಡ ನಡೆದಿತ್ತು. ಸುಮಾರು 900 ಜನರನ್ನು ಕರೆದೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ಹಳಿ ತಪ್ಪಿ ಭಾಗಮತಿ ನದಿಗೆ ಬಿದ್ದಿತ್ತು. 502 ಕ್ಕೂ ಅಧಿಕ ಮಂದಿ ಘಟನೆಯಲ್ಲಿ ಮೃತಪಟ್ಟಿದ್ದರು.

4. 1995 ಫಿರೋಜಾಬಾದ್ ರೈಲು ದುರಂತ
ಉತ್ತರ ಪ್ರದೇಶದ ಫಿರೋಜಾಬಾದ್(Firosabad) ಬಳಿ 1985ರಲ್ಲಿ ಈ ದುರ್ಘಟನೆ ಸಂಭವಿಸಿತ್ತು. ದೆಹಲಿಗೆ ತೆರಳುತ್ತಿದ್ದ ಪುರುಷೋತ್ತಮ್ ಎಕ್ಸ್​​ಪ್ರೆಸ್​ ನಿಂತಿದ್ದ ಕಾಳಿಂದಿ ಎಕ್ಸ್​ಪ್ರೆಸ್​ ರೈಲಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 358 ಜನರು ಮೃಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

5. 1998ರ ಪಂಜಾಬ್ ರೈಲು ದುರಂತ
ನವೆಂಬರ್ 26, 1998 ರಂದು ನಡೆದ ಜಮ್ಮು ತಾವಿ ಸೀಲ್ದಾ ಎಕ್ಸ್‌ಪ್ರೆಸ್ ಹಳಿತಪ್ಪಿದ ಪರಿಣಾಮ ಬರೋಬ್ಬರಿ 212 ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡರು. ಪಂಜಾಬ್ ಖನ್ನಾ(Punjab khanna) ಬಳಿಯ ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಬಳಿಯ ಈ ಘಟನೆ ನಡೆದಿತ್ತು. ಘಟನೆ ನಂತರ ಜಮ್ಮು ತಾವಿ ಸೀಲ್ದಾ ಎಕ್ಸ್‌ಪ್ರೆಸ್ ಹಿಂದೆಯೇ ಬರುತ್ತಿದ್ದ ಮತ್ತೊಂದು ಎಕ್ಸ್‌ಪ್ರೆಸ್ ಕೂಡಾ ಹಳಿತಪ್ಪಿದ ರೈಲಿಗೆ ಡಿಕ್ಕಿಹೊಡೆದಿತ್ತು.

6. 1999 ಗೈಸಲ್ ರೈಲು ದುರಂತ
ಅಸ್ಸಾಂ(Assam) ರಾಜಧಾನಿ ಗುವಾಹಟಿಯಿಂದ(Guhavati) 310 ಮೈಲಿ ದೂರದಲ್ಲಿರುವ ಗೈಸಲ್ ಬಳಿ 2,500 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದವು ಪರಿಣಾಮ 290 ಪ್ರಯಾಣಿಕರು ಮೃತಪಟ್ಟಿದ್ದರು. ಅತಿ ವೇಗದಲ್ಲಿ ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ರೈಲುಗಳು ಸ್ಫೋಟಗೊಂಡಿದ್ದವು.

8. 2002ರ ಹೌರಾ-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ದುರಂತ
2000 ಅವಧಿಯಲ್ಲಿ ಭಾರತದ ಅತಿ ವೇಗದ ರೈಲು ಎಂದು ಹೇಳಲಾಗಿದ್ದ ಹೌರಾ-ನವದೆಹಲಿ(Houra – Newdelhi) ರಾಜಧಾನಿ ಎಕ್ಸ್​ಪ್ರೆಸ್​ ರೈಲು ಗಯಾ ಮತ್ತು ದೆಹ್ರಿ-ಆನ್-ಸೋನೆ ನಿಲ್ದಾಣಗಳ ನಡುವಿನ ರಫಿಗಂಜ್ ಬಳಿ ಹಳಿ ತಪ್ಪಿತ್ತು. 130 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ರೈಲಿನ ಬೋಗಿಗಳು ಧವಿ ನದಿಗೆ ಬಿದ್ದಿದ್ದವು. ರಾತ್ರಿ 10.40 ಕ್ಕೆ ನಡೆದ ಘಟನೆಯಲ್ಲಿ 140ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

9. 2010 ಜ್ಞಾನೇಶ್ವರಿ ಎಕ್ಸ್ ಪ್ರೆಸ್ ದುರಂತ
ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖೇಮಾಶುಲಿ ಮತ್ತು ಸರ್ದಿಹಾ ನಡುವಿನ ಪ್ರದೇಶದಲ್ಲಿ ಮುಂಬೈಗೆ ತೆರಳುತ್ತಿದ್ದ ಹೌರಾ ಕುರ್ಲಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರಿ ಸೂಪರ್ ಡೀಲಕ್ಸ್ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿತ್ತು. ಘಟನೆಯಲ್ಲಿ ಕನಿಷ್ಠ 170 ಮಂದಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರಿಯಾಗಿತ್ತು.

10. 2014ರಸಂತ ಕಬೀರ್ ನಗರ ರೈಲು ಅಪಘಾತ
ಮೇ 26, 2014 ರಂದು ಉತ್ತರ ಪ್ರದೇಶದ ಸಂತ ಕಬಿರ್ ನಗರ(Santa khabeer nagar) ಜಿಲ್ಲೆಯ ಖಲೀಲಾಬಾದ್(Khaleedabad) ನಿಲ್ದಾಣದ ಬಳಿ ನಡೆದ ಈ ಅಪಘಾತ ಪ್ರಕರಣದಲ್ಲಿ ಗೋರಖ್‌ಪುರ್ ಟು ಗೋರಖ್‌ಧಾಮ್ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 25 ಪ್ರಯಾಣಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು.

11, 2016 ಇಂದೋರ್ ಪಾಟ್ನಾ ದುರಂತ
ಇಂದೋರ್-ಪಾಟ್ನಾ ಎಕ್ಸ್​​ಪ್ರೆಸ್​(Indhor patna Express) 2016ರ ನವೆಂಬರ್ 20ರಂದು ಕಾನ್ಪುರದ ಪುಖ್ರಾಯನ್ ಬಳಿ ಹಳಿ ತಪ್ಪಿ ಉರುಳಿ ಬಿದ್ದಿತ್ತು. ಘಟನೆಯಲ್ಲಿ 150 ಜನರು ಸಾವನ್ನಪ್ಪಿದರು ಹಾಗೂ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

12. 2005 ವಾಲಿಗೊಂಡ ರೈಲು ದುರಂತ
2005ರ ಅಕ್ಟೋಬರ್ 29ರಂದು ಆಂಧ್ರಪ್ರದೇಶದ(Andrapradesh) ವಾಲಿಗೊಂಡದಲ್ಲಿ ಈ ಅವಘಡ ನಡೆದಿತ್ತು. ಏಕಾಏಕಿ ಸುರಿದ ಮಳೆಗೆ ಸಣ್ಣ ರೈಲು ಸೇತುವೆಯನ್ನು ಕೊಚ್ಚಿಕೊಂಡು ಹೋಗಿತ್ತು. ಅದರ ಮಾಹಿತಿ ಇಲ್ಲದೇ ಡೆಲ್ಟಾ ಫಾಸ್ಟ್ ಪ್ಯಾಸೆಂಜ್​ ರೈಲು ಆ ಹಳಿಯ ಮೇಲೆ ಬಂದು ಉರುಳಿ ಬಿದ್ದಿತ್ತು. ಘಟನೆಯಲ್ಲಿ 114 ಜನರು ಮೃತಪಟ್ಟಿದ್ದರು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

13. 2010 ಸೈಂಥಿಯಾ ರೈಲು ಅಪಘಾತ
ಜುಲೈ 19, 2010ರಂದು ಪಶ್ಚಿಮ ಬಂಗಾಳದ ಸೈಂಥಿಯಾದಲ್ಲಿ ಉತ್ತರ ಬಂಗಾ ಎಕ್ಸ್​ಪ್ರೆಸ್​ ಮತ್ತು ವನಂಚಲ್ ಎಕ್ಸ್​ಪ್ರೆಸ್​ ಪರಸ್ಪರ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸುಮಾರು 63 ಜನರು ಮೃತಪಟ್ಟಿದ್ದರು. 165 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

14. 2012 ಹಂಪಿ ಎಕ್ಸ್ ಪ್ರೆಸ್ ಅಪಘಾತ
2012ರ ಮೇ 22ರಂದು ಹುಬ್ಬಳ್ಳಿ- ಬೆಂಗಳೂರು ಹಂಪಿ ಎಕ್ಸ್​ಪ್ರೆಸ್​(Hampi – Benglore Express) ರೈಲು ಆಂಧ್ರಪ್ರದೇಶದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು. ಅವುಗಳಲ್ಲಿ ಒಂದು ಬೆಂಕಿಗೆ ಆಹುತಿಯಾಗಿತ್ತು. ಘಟನೆಯಲ್ಲಿ 25 ಪ್ರಯಾಣಿಕರು ಮೃತಪಟ್ಟಿದ್ದು ಸುಮಾರು 43 ಜನರು ಗಾಯಗೊಂಡಿದ್ದರು.

ಭಾರತದಲ್ಲಿ ಇನ್ನೂ ಹಲವಾರು ರೈಲು ಅವಘಡಗಳು ಸಂಭವಿಸಿವೆ. ಆದರೆ, ಸಾವು ನೋವುಗಳ ವಿಚಾರಕ್ಕೆ ಬಂದಾಗ ಈ ಮೇಲಿನ ಅಪಘಾತಗಳಲ್ಲಿ (Train accidents) ಹೆಚ್ಚಿನ ಸಾವು, ನೋವುಗಳು ಸಂಭವಿಸಿವೆ. ಹೀಗಾಗಿ ಇವುಗಳನ್ನು ಅತ್ಯಂತ ಭೀಕರ ದುರಂತ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : ಚಿಕ್ಕಮಗಳೂರಿನಿಂದ ಜೈನ ತೀರ್ಥಯಾತ್ರೆಗೆ ಹೊರಟ 108 ಮಂದಿ ಪವಾಡಸದೃಶ ಪಾರು, ಕೊನೆಯ ಕ್ಷಣದಲ್ಲಿ ಬೋಗಿ ಬದಲಾಗಿ ಉಳಿದಿತ್ತು ಕನ್ನಡಿಗರ ಜೀವ !

Leave A Reply

Your email address will not be published.