Twin Children Murder: ಕೌಟುಂಬಿಕ ಕಲಹ ಹಿನ್ನೆಲೆ, ತನ್ನ ಅವಳಿ ಮಕ್ಕಳನ್ನೇ ಉಸಿರುಗಟ್ಟಿಸಿ ಕೊಂದ ನಿರ್ದಯಿ ತಂದೆ!

Twin Children Murder by father at davanagere

Twin Children Murder: ಮಕ್ಕಳಿದ್ದರೆ ಮನೆ ಚೆಂದ ಎನ್ನುವ ಹಾಗೆ ಮಕ್ಕಳಿಗಾಗಿ ದೇವರಲ್ಲಿ ಹರಕೆ ಹೊರುವವರ ಜೊತೆ ಜೊತೆಗೆ ತನ್ನದೇ ಮುದ್ದಾದ ಅವಳಿ ಮಕ್ಕಳನ್ನು (Twin Children Murder) ನಿಷ್ಕರುಣಿ ತಂದೆಯೊಬ್ಬ ಉಸಿರುಗಟ್ಟಿಸಿ ಕೊಂದ ಘಟನೆಯೊಂದು ದಾವಣಗೆರೆಯಲ್ಲಿ ( Davanagere) ನಡೆದಿದೆ.

 

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ ಟೋಲ್ ಬಳಿಯ ಸರ್ವೀಸ್ ರಸ್ತೆಗೆ ಕಾರಿನಲ್ಲಿ ಕರೆದುಕೊಂಡು ಹೋದ ಪಾಪಿ ತಂದೆ, ಏನೂ ಅರಿಯದ ನಾಲ್ಕು ವರ್ಷದ ಮಕ್ಕಳ ಬಾಯಿಗೆ ಟಿಕ್ಸ್ ಟೇಪ್ ಅನ್ನು ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಈ ಘಟನೆ ಬುಧವಾರ (ಮೇ 31) ರಾತ್ರಿ 10:30 ರ ಸುಮಾರಿಗೆ ನಡೆದಿದೆ.

4 ವರ್ಷದ ಅವಳಿ ಮಕ್ಕಳಾದ ಅದ್ವೈತ್ ಮತ್ತು ಅನ್ವಿತ್ ನಿಷ್ಕರುಣಿ ಅಪ್ಪನಿಂದಲೇ ಕೊಲೆಗೀಡಾದ ಮಕ್ಕಳು. ಆರೋಪಿ ಅಮರ್ (36) ಎಂಬಾತನೇ ಈ ಕೃತ್ಯ ಎಸಗಿದ್ದು. ಈತ ಗೋಕಾಕ್ ಮೂಲದವರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ. ಈತ ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿ ತನ್ನ ಮಕ್ಕಳು, ಹೆಂಡತಿ, ಅಮ್ಮನೊಂದಿಗೆ ವಾಸಿಸುತ್ತಿದ್ದ.

ಗಂಡ ಹೆಂಡತಿಯ ನಡುವಿನ ವೈಮನಸ್ಸಿನಿಂದ ಹೆಂಡತಿ ಜಯಲಕ್ಷ್ಮಿ ಮಕ್ಕಳನ್ನು ಇಲ್ಲಿಯೇ ಬಿಟ್ಟು ತನ್ನ ತವರು ಮನೆ ವಿಜಯಪುರಕ್ಕೆ ಹೋಗಿದ್ದಳು ಎನ್ನಲಾಗಿದೆ. ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಈ ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave A Reply

Your email address will not be published.