Sakshi Murder: ಸಾಕ್ಷಿಯನ್ನು ಸಾಹಿಲ್ ಖಾನ್ 20 ಬಾರಿ ಚುಚ್ಚಿಕೊಂದಾಗ ಬೀದಿ ನಾಯಿ ಪ್ರತಿಭಟಿಸಿ ಬೊಗಳಿತ್ತು, ಜನ ಮುಖ ತಿರುಗಿಸಿ ಹೋಗಿದ್ದರು !

Sakshi was murdered by Sahil Khan in Delhi by stabbing him 20 times

Delhi Murder Case: ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ‘ಇನ್ನೂ ಭೀತಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಎನ್ನುವಾಗಲೇ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಮತ್ತೊಬ್ಬ ಮುಸ್ಲಿಂ ಹುಡುಗನಿಗೆ ಒಂದು ನಂಬಿಕೆ, ಬೆಟ್ಟದಷ್ಟು ಬಾಚಿ ಪ್ರೀತಿ ತೋರಿಸಿದ ಕಾರಣಕ್ಕೆ ಆ 16 ವರ್ಷದ ಎಳೆಯ ಬಾಲೆಯ ಹೊಟ್ಟೆಯಲ್ಲಿ ಎದೆಯಲ್ಲಿ 20 ಬಾರಿ ಚಾಕು (Delhi Murder Case) ಒಳ ಹೊಕ್ಕು ರಕ್ತ ಕರುಳೆನ್ನದೆ ಹೊಟ್ಟೆಯ ಬಹುಪಾಲು ಅಂಗಗಳನ್ನು ಹೊರಕ್ಕೆ ಎಳೆದು ಹಾಕಿತ್ತು. ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

 

ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ. ಈಗ ಸಿಕ್ಕಿರುವ ಮಾಹಿತಿ ಮತ್ತು ಸಿದ್ಧ ಸಾಕ್ಷ್ಯಾಧಾರಗಳ ಮತ್ತು ಕೆಲವು ವಿಶೇಷ ಘಟನೆಗಳ ಬಗ್ಗೆ ಈಗ ನಾವು ನಿಮ್ಮಗಮನ ಸೆಳೆಯಲಿದ್ದೇವೆ. ಆ ಘಟನೆಗಳು ಮನುಷ್ಯತ್ವವನ್ನು ಕಲಕಿರೋದು ಮಾತ್ರವಲ್ಲ, ಮನುಷ್ಯನಿಗಿಂತ ಪ್ರಾಣಿಯೊಂದು ಮನುಷ್ಯತ್ವ ಮೆರೆದ ಘಟನೆ ವರದಿಯಾಗಿದೆ.

ಅವರಿಬ್ಬರಿಗೂ ಇನ್ಸ್ಟಾ ಗ್ರಾಮಿನಲ್ಲಿ 3 ವರ್ಷಗಳ ಹಿಂದೆ ಪರಿಚಯವಾಗಿತ್ತು. ಆಗ ಪರಿಚಯ ಆದ ಸಾಕ್ಷಿಗೆ ಈಗ 16 ವರ್ಷ ಪ್ರಾಯ. ಆ ಬಾಲಕಿಯನ್ನು ಸಾಹಿಲ್ ಪ್ರೀತಿಸುತ್ತಿದ್ದ. ಆತ ಹಿಂದೂ ಹುಡುಗ, ಹಾಗೆಂದು ಆಕೆ ನಂಬಿದ್ದಳು. ಹುಡುಗ ತನ್ನನ್ನು ಸಾಹಿಲ್ ಎಂದು ಪರಿಚಯಿಸಿಕೊಂಡಿದ್ದ. ಪ್ರೀತಿಯ ಮಾತುಗಳು, ಸಣ್ಣ ವಿಷಯಕ್ಕೂ ಕೇರ್ ಮಾಡುವ ಮನಸ್ಸು, ಜತೆಗೆ ಆತ ಮಹಾನ್ ದೈವಭಕ್ತ. ಬಲ ಕೈಗೆ ಮಂತ್ರಿಸಿದ ದಾರ ಬೇರೆ ಕಟ್ಟಿಕೊಂಡಿದ್ದ. ಆತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲಿ ಪೂಜೆ ಮತ್ತು ಪ್ರಾರ್ಥನೆ ಮಾಡುತ್ತಿದ್ದ. ಇದನ್ನೆಲ್ಲಾ ನೋಡಿದ ಹುಡುಗಿ ಆತನ ಗೆಳೆತನಕ್ಕೆ ಬಿದ್ದಿದ್ದಳು. ಜತೆಗೆ, ‘ ನಂಗೂ ಒಂದು ಬಾಯ್ ಫ್ರೆಂಡ್’ ಬೇಕು ಅಂದುಕೊಂಡು ಸಾಹಿಲ್ ಸ್ನೇಹವನ್ನು ಪ್ರೀತಿಗೆ ಕನ್ವರ್ಟ್ ಮಾಡಿದ್ದಳು. ಆದರೆ ಸಾಹಿಲ್ ಕೇವಲ ಸಾಹಿಲ್ ಆಗಿರಲಿಲ್ಲ. ಮೂಢ ಅಂಧ ಸ್ನೇಹದ ಹುಡುಗಿ ಸಾಕ್ಷಿಗೆ ಅದು ಗೊತ್ತಾಗಿಯೇ ಇರಲಿಲ್ಲ. ಸಾಹಿಲ್ ಖಾನ್, ಹಿಂದೂ ಹುಡುಗನ ಮುಖವಾಡ ಹಾಕಿಕೊಂಡು ಸಾಕ್ಷಿಯನ್ನು ಪ್ರೀತಿಸುವ ನಾಟಕ ಆಡಿದ್ದ. ಹಿಂದೂ ಹುಡುಗ ಅಂದುಕೊಂಡು ಆಕೆ ನಂಬಿದ್ದಳು. ಸ್ನೇಹ – ಪ್ರೀತಿ ಮಾಡಿದ್ದಳು !

ಮೊನ್ನೆ ಮೇ 28 ರಂದು ಇವರಿಬ್ಬರ ನಡುವೆ ಜಗಳವಾಗಿದೆ. ಆಕೆ ಸಾಹಿಲ್ ಜೊತೆ ಮಾತು ಬಿಟ್ಟಿದ್ದಾಳೆ. ಆತನ ನಂಬರ್ ಬ್ಲಾಕ್ ಮಾಡಿದ್ದಳು ಹುಡುಗಿ. ಇತ್ತ ಆಕ್ರೋಶಗೊಂಡ ಸಾಹಿಲ್ ಆಕೆಯ ಮನೆಯ ಬಳಿ ಬಂದಿದ್ದ. ಆದ್ರೆ ಆಕೆ ಮನೇಲಿ ಇರ್ಲಿಲ್ಲ. ಈ ಬಾಲಕಿ ತನ್ನ ಗೆಳತಿಯೊಬ್ಬಳ ಪುತ್ರನ ಹುಟ್ಟುಹಬ್ಬದ ಆಚರಣೆಗಾಗಿ ತೆರಳಿರುವ ಮಾಹಿತಿ ಸಾಹಿಲ್ ಗೆ ಸಿಕ್ಕಿತ್ತು. ಹಾಗೆ ಆಕೆಯನ್ನು ಹುಡುಕುತ್ತಾ ಬಂದ ಸಾಹಿಲ್‌ಗೆ ದಾರಿಯಲ್ಲಿ ದುರದೃಷ್ಟವಶಾತ್ ನಡೆದುಕೊಂಡು ಹೋಗುತ್ತಿರುವ ಗರ್ಲ್‌ಫ್ರೆಂಡ್ ಪತ್ತೆಯಾಗಿದ್ದಾಳೆ. ಅಷ್ಟೇ, ಆತನ ಜೇಬಿನಿಂದ ಹೊರಕ್ಕೆ ಬಂದ ಚಾಕು ನೇರವಾಗಿ ನುಗ್ಗಿದ್ದು ಆಕೆಯ ಹೊಟ್ಟೆಗೆ ನಂತರ ಮನಸೋ ಇಚ್ಛೆ, ತನ್ನ ಭುಜ ಸೋಲುವವರೆಗೆ ಆತ ತಿವಿದಿದ್ದಾನೆ. ಕೈ ಬಿದ್ದು ಹೋಗುವ ತನಕ ಆತ ಚಾಕು ಹೆಟ್ಟಿದ್ದು, ಅದಾಗಲೇ 20 ಬಾರಿ ಚಾಕುವಿನಿಂದ ಇರಿದಿದ್ದಾನೆ. ಅಷ್ಟೆಲ್ಲ ಚುಚ್ಚಿದ ಮೇಲೆ, ಆತನ ಹಣೆಯಲ್ಲಿ ಬೆವರು ಕಾಣಿಸಿಕೊಂಡಿದೆ. ಆದರೂ ಆತನ ರೋಷ ಕಮ್ಮಿಯಾಗಿಲ್ಲ. ಸುತ್ತಮುತ್ತ ನೋಡಿದವನೇ ಒಂದು ಕಲ್ಲೆತ್ತಿಕೊಂಡು ಆಕೆಯ ಮೇಲೆ ಎತ್ತಿ ಹಾಕಿದ್ದಾನೆ: ಯಾವುದೇ ಕಾರಣಕ್ಕೂ ಆಕೆ ಬದುಕಬಾರದು ಎನ್ನುವುದನ್ನು ಮೊದಲೇ ನಿರ್ಧರಿಸಿದಂತೆ !

ವಿಚಿತ್ರ ಎಂದರೆ, ಇದೆಲ್ಲಾ ಹಚ್ಚ ಹಗಲು ನಿಚ್ಚಳ ಬೆಳಕಿನಲ್ಲಿ ನಡೆದು ಹೋಗಿದೆ. ಆರೋಪಿ ಸಾಹಿಲ್ ಸಾಕ್ಷಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಕ್ರೌರ್ಯ ಸಮೀಪದಲ್ಲೇ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗ ಅಲ್ಲೇ ದಾರಿಹೋಕರು ಹೋಗುತ್ತಾ ಇದ್ದರೂ, ಯಾರೇ ಒಬ್ಬ ನರ ಮನುಷ್ಯ ಪ್ರತಿಭಟಿಸಲಿಲ್ಲ. ಭಿಕ್ಷುಕರು ಭಿಕ್ಷೆ ಕೇಳಲು ಬಂದಾಗ, ನಾವು ತಮಗೇನೂ ಸಂಬಂಧ ಇಲ್ಲದವರಂತೆ ಸರಬರ ನಡೆದು ಹೋಗುತ್ತೇವೆಲ್ಲ, ಆ ರೀತಿ ಕೊಲೆ ನಡೆದ ಆ ದಿಲ್ಲಿಯ (Delhi Murder Case) ಬೀದಿಯ ಜನರು ಅಂದು ವರ್ತಿಸಿದ್ದರು ! ಯಾರೊಬ್ಬರೂ, ಅಟ್ಲೀಸ್ಟ್ ಒಂದು ಕೂಗು ಹಾಕಲಿಲ್ಲ, ‘ಅಯ್ಯೋ ಹೆಲ್ಪ್ ‘ ಅನ್ನಲಿಲ್ಲ: ಆದರೆ ಆ ವಿಶೇಷ ‘ ವ್ಯಕ್ತಿ ‘ ಯೊಬ್ಬನನ್ನು ಬಿಟ್ಟು ! ಮನುಷ್ಯನು ಮನುಷ್ಯತ್ವ ಮರೆತು ಬಿಟ್ಟರೂ ಆ ಬೀದಿಯ ಯಕಶ್ಚಿತ್ ನಾಯಿಯೊಂದು ತನ್ನ ಕರ್ತವ್ಯ ಮರೆತಿರಲಿಲ್ಲ. ಘಟನೆಯು ತನ್ನ ಗಮನಕ್ಕೆ ಬಂದಾಗ ತಕ್ಷಣ ಹಾರಿಹಾರಿ ಬೊಗಳಿತ್ತು ಆ ಬೀದಿ ನಾಯಿ ! ಘಟನೆಯನ್ನು ಪ್ರತಿಭಟಿಸಲು ತನ್ನ ಕೈಲಾದ ರೀತಿ ಪ್ರಯತ್ನಿಸಿತ್ತು ಆ ಬೀದಿ ನಾಯಿ !!!

ಆದರೆ ಅಷ್ಟರಲ್ಲಾಗಲಿ, ಪೈಶಾಚಿಕ ಕೃತ್ಯ ಮುಗಿಸಿ ಬಿಟ್ಟಿದ್ದ ಕಿರಾತಕ. ಕೃತ್ಯ ಎಸಗಿದ ನಂತರ ಸಾಹಿಲ್ ಖಾನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಹತ್ಯೆ ನಡೆಸಿದ ನಂತರ ಆರೋಪಿಯು ಉತ್ತರ ಪ್ರದೇಶದ ಬುಲಂದ್‌ಶಹ‌ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿ ತಲೆಮರೆಸಿಕೊಂಡಿದ್ದ. ಇದಾದ ಬಳಿಕ ಪೊಲೀಸರು ಫೋನ್ ಟ್ರ್ಯಾಕಿಂಗ್ ಮೂಲಕ ಆತನ ಹೈಡ್ ಔಟ್ ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆದಿದ್ದರು.

ಇದೀಗ ವಿಚಾರಣೆ ವೇಳೆ ಆರೋಪಿ ಸಾಹಿಲ್ ತನ್ನ ಅಪರಾಧವನ್ನು ಒಪ್ಪಿಕೊಂಡು ಸಾಕ್ಷಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಸಾಕ್ಷಿ ಹತ್ಯೆ ಆರೋಪಿ ಸಾಹಿಲ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಸಾರ್ವಜನಿಕರ ಮುಂದೆ ಇಡಲು ದೆಹಲಿ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದ್ದು, ಸಾಹಿಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ತಪ್ಪಿತಸ್ಥ ಯಾವುದೇ ಸಂದರ್ಭದಲ್ಲಿ ತಪ್ಪಿಸಿಕೊಳ್ಳದಂತೆ ಪ್ರಬಲ ಚಾರ್ಜ್ ಶೀಟ್ ಸಿದ್ಧಪಡಿಸಲು ಪ್ರಯತ್ನಿಸುವುದಾಗಿ ದೆಹಲಿಯ ಉತ್ತರ ಹೊರವಲಯದ ಡಿಸಿಪಿ ರವಿಕುಮಾರ್ ಹೇಳಿದ್ದಾರೆ. ಮತ್ತದೇ ಕೇಸು ತನಿಖೆ ಚಾರ್ಜ್ ಶೀಟ್ ಜಾಮೀನು ಇತ್ಯಾದಿ ಇತ್ಯಾದಿ ಚರ್ವಿತ ಚರ್ವಣ ಪ್ರೊಸೀಜರ್ ಗಳು. ಕಳೆದ ವರ್ಷ ಶ್ರದ್ದಾ ವಾಕರ್ ಳನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜಲ್ಲಿಟ್ಟು ಇನ್ಸ್ಟಾಲ್ ಮೆಂಟಿನಲ್ಲಿ ಡಿಸ್ಪೋಸಲ್ ಮಾಡಿದ ಜಿಹಾದಿ ಹುಡುಗ ಇವತ್ತಿಗೂ ಜೈಲಿನಲ್ಲಿ ಆರಾಮವಾಗಿಯೇ ಇದ್ದಾನೆ. ಆತನಿಗೆ ಶಿಕ್ಷೆ ಇನ್ನು ಪ್ರಕಟಗೊಂಡಿಲ್ಲ. ಅದಕ್ಕೂ ಹಿಂದೆ ಟೈಲರ್ ಕನ್ನಯ್ಯ ಸಿಂಗ್ ಅನ್ನು ನಿಚ್ಚಳ ಬೆಳಕಿನಲ್ಲಿ ತಲೆ ಕಡಿದು ಹೋದ ಕಿರಾತಕರಿಗೆ ಇನ್ನೂ ಗಲ್ಲು ಶಿಕ್ಷೆ ವಿಧಿಸಿಲ್ಲ: ಇದು ನಮ್ಮ ನ್ಯಾಯ ಪ್ರದಾನದ ವೇಗ.

 

ಇದನ್ನು ಓದಿ: Vishwanath Shetty: ಮಂಗಳೂರು ಹಣಕಾಸು ವಂಚನೆ: ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಬಂಧನ

Leave A Reply

Your email address will not be published.