PAN – Adhar Link: ಆಧಾರ್ -ಪಾನ್ ಲಿಂಕ್ ಮಾಡುವ ಗಡುವು ಹತ್ತಿರದಲ್ಲೇ ; ದಿನಾಂಕ ಗಮನಿಸಿ 1000 ರೂ. ಉಳಿಸಿ!

Note the last date for linking Aadhaar - PAN

PAN – Adhar Link: ಆದಾಯ ತೆರಿಗೆ ಇಲಾಖೆಯು ಮಾರ್ಚ್ 31ರ ಒಳಗೆ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ (PAN – Adhar Link) ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಹಾಗೇ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡ ವಿಧಿಸಲಾಗಿತ್ತು‌. ಆದರೆ ಸಾಕಷ್ಟು ಜನರ ಲಿಂಕ್ ಕಾರ್ಯ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಜೂನ್ 30, 2023 ರವರೆಗೆ ವಿಸ್ತರಿಸಿ (Pan-Aadhar link date extend) ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಆಧಾರ್ ಪಾನ್ ಲಿಂಕ್ ಮಾಡುವ ಗಡುವು ಹತ್ತಿರದಲ್ಲೇ ಇದೆ. ನಿಮ್ಮ ಪಾನ್-ಆಧಾರ್ ಲಿಂಕ್ ಆಗದಿದ್ದರೆ ಲಿಂಕ್ ಮಾಡಿಸಿ 1000 ರೂ. ಉಳಿಸಿ!.

 

ಏಪ್ರಿಲ್ 1ರಿಂದ ಆಧಾರ್ ಜೊತೆ ಜೋಡಣೆಯಾಗದ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ. ಆ ಬಳಿಕ ಆಧಾರ್ ನಂಬರ್​ಗೆ ಪಾನ್ ಲಿಂಕ್ ಮಾಡಲು ಅವಕಾಶ ಇರುತ್ತದೆಯಾದರೂ ದುಬಾರಿ ಶುಲ್ಕ ತೆರಬೇಕಾಗುತ್ತದೆ. ಅಲ್ಲದೇ, ನಿಷ್ಕ್ರಿಯಗೊಂಡ ಪಾನ್ ಕಾರ್ಡನ್ನು (pan card) ನೀವು ಗೊತ್ತಿದ್ದೋ ಗೊತ್ತಿಲ್ಲದೆಯೇ ಹಣಕಾಸು ವಹಿವಾಟುಗಳಲ್ಲಿ ಬಳಕೆ ಮಾಡಿದ್ದೇ ಆದಲ್ಲಿ ಭಾರೀ ದಂಡ ಕಟ್ಟಬೇಕಾಗುತ್ತದೆ.

ಸಿಬಿಡಿಟಿ ನಿಯಮದ ಪ್ರಕಾರ, “ಆದಾಯ ತೆರಿಗೆ ನಿಯಮದ 114AAA ಪ್ರಕಾರ ಒಬ್ಬ ವ್ಯಕ್ತಿಯ ಪ್ಯಾನ್ ನಿಷ್ಕ್ರಿಯಗೊಂಡರೆ, ಪ್ಯಾನ್ ಕಾರ್ಡ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮಗಳಿಗೆ ಅವರೇ ಜವಾಬ್ದಾರಿಯಾಗಿರುತ್ತಾರೆ”ಎಂದು ಉಲ್ಲೇಖಿಸಲಾಗಿದೆ.

ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡೋದು ಹೇಗೆ?

• ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್ https://www.incometax.gov.in/iec/foportal/ ಗೆ ಭೇಟಿ ನೀಡಿ.
• ಎಡಬದಿಯಲ್ಲಿ Quick Liks ಕಾಣಿಸುತ್ತದೆ. ಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ.

ಪ್ಯಾನ್-ಆಧಾರ್ ಲಿಂಕ್ ಮಾಡೋದು ಹೇಗೆ?

• ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ https://incometaxindiae filing.gov.in/ ಭೇಟಿ ನೀಡಿ
• ಲಾಗ್-ಇನ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
• ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್
ಲಿಂಕ್ ಆಯ್ಕೆ ಇರುತ್ತದೆ. ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ ‘ಪ್ರೊಫೈಲ್ ಸೆಟ್ಟಿಂಗ್ಸ್’ ಗೆ ಹೋಗಿ ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ.
• ಆಧಾರ್‌ನಲ್ಲಿರುವ ಪ್ಯಾನ್ ವಿವರಗಳನ್ನು ಪರಿಶೀಲಿಸಿ, ‘link now’
ಬಟನ್ ಮೇಲೆ ಕ್ಲಿಕ್ ಮಾಡಿ. ಆಧಾರ್-ಪಾನ್ ಲಿಂಕ್ ಆಗುತ್ತದೆ.

 

ಇದನ್ನು ಓದಿ: Free busfor students: ಇನ್ನು ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಬಸ್ ಫ್ರೀ, ಆದರೆ ಎಲ್ಲಿಯತನಕ ಅನ್ನೋದೇ ಸಸ್ಪೆನ್ಸ್ ! 

Leave A Reply

Your email address will not be published.