Home latest Manipura: ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ : ಕಮಾಂಡೋ ಕಾರ್ಯಾಚರಣೆಗೆ 8 ಗಂಟೆಯಲ್ಲಿ 40 ಮಂದಿ ಎನ್​ಕೌಂಟರ್!!...

Manipura: ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ : ಕಮಾಂಡೋ ಕಾರ್ಯಾಚರಣೆಗೆ 8 ಗಂಟೆಯಲ್ಲಿ 40 ಮಂದಿ ಎನ್​ಕೌಂಟರ್!! ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ

Manipur Violence
Image source- Kannada prabha, TV9 Kannada

Hindu neighbor gifts plot of land

Hindu neighbour gifts land to Muslim journalist

Manipur Violence: ಕೆಲ ದಿನಗಳಿಂದ ತಣ್ಣಗಿದ್ದ ಈಶಾನ್ಯ ರಾಜ್ಯ ಮಣಿಪುರ(Manipur Violence) ದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಸದ್ಯ ಮೇ 27-28ರ ಮಧ್ಯರಾತ್ರಿಯಲ್ಲಿ ಹಲವು ಪ್ರದೇಶಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ ಉಗ್ರರ(Terrorist) ವಿರುದ್ಧ ಕಮಾಂಡೋಗಳು ಪ್ರತಿದಾಳಿ ನಡೆಸಿ 40 ಮಂದಿಯನ್ನು ಹತ್ಯೆಗೈದಿದ್ದಾರೆ.

ಹೌದು, ಮಣಿಪುರದಲ್ಲಿ(Manipurq) ಎಗ್ಗಿಲ್ಲದೇ ಮುಂದುವರಿಯುತ್ತಿರುವ ಹಿಂಸಾಚಾರಗಳನ್ನು ನಿಗ್ರಹಿಸಲು ಅಲ್ಲಿನ ಪೊಲೀಸ್ ಪಡೆಯ ಕಮಾಂಡೋಗಳು ಉಗ್ರ ಕಾರ್ಯಾಚರಣೆ ನಡೆಸಿದ್ದಾರೆ. ಮೇ 28, ಇಂದು ಬೆಳಗ್ಗೆಯಿಂದ ಮಣಿಪುರದ ವಿವಿಧೆಡೆ ಕಮಾಂಡೋಗಳು(Commandos)ಸಾಕಷ್ಟು ದಂಗೆಕೋರರನ್ನು ಹತ್ಯೆಗೈಯುವಲ್ಲಿ ಸಲಫಲರಾಗಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್(C M N Birean sing) ನೀಡಿರುವ ಮಾಹಿತಿ ಪ್ರಕಾರ 40 ಉಗ್ರರು ಹತರಾಗಿದ್ದಾರೆ.

“ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ರೈಫಲ್‌ಗಳು ಮತ್ತು ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಜನರ ಮನೆಗಳನ್ನು ಸುಟ್ಟುಹಾಕಲು ಹಳ್ಳಿಗಳಿಗೆ ನುಗ್ಗಿದ್ದರು. ನಾವು ಸೇನೆ ಮತ್ತು ಇತರ ಭದ್ರತಾ ಪಡೆಗಳ ಸಹಾಯದಿಂದ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ಸುಮಾರು 40 ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿರುವ ವರದಿಗಳು ನಮಗೆ ಸಿಕ್ಕಿವೆ” ಎಂದು ತಿಳಿಸಿದರು.

“ಭಯೋತ್ಪಾದಕರು ನಿರಾಯುಧ ನಾಗರಿಕರ ಮೇಲೆ ಗುಂಡು ಹಾರಿಸುತ್ತಿದ್ದಾರೆ. ಮಣಿಪುರವನ್ನು ವಿಘಟಿಸಲು ಪ್ರಯತ್ನಿಸುತ್ತಿರುವ ಸಶಸ್ತ್ರ ಭಯೋತ್ಪಾದಕರು ಮತ್ತು ಕೇಂದ್ರದ ಸಹಾಯದ ಪಡೆದಿರುವ ರಾಜ್ಯ ಸರ್ಕಾರದ ನಡುವೆ ಹೋರಾಟ ನಡೆಯುತ್ತಿದೆ” ಎಂದು ಸಿಎಂ ಹೇಳಿದ್ದಾರೆ. ಹತ್ಯೆಯಾಗಿರುವ ಬಂಡುಕೋರರು ಕುಕಿ ಬುಡಕಟ್ಟು ಸಮುದಾಯದವರು ಎಂದು ವರದಿಯಾಗಿದೆ.

ಅಂದಹಾಗೆ ನಿನ್ನೆ (ಮೇ 28)ಮುಂಜಾನೆ 2 ಗಂಟೆಗೆ ಬಂಡುಕೋರರು ಇಂಫಾಲ್(Impal)ಕಣಿವೆ ಮತ್ತು ಸುತ್ತಮುತ್ತಲಿನ ಐದು ಪ್ರದೇಶಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭಧ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಬೀದಿ ಬೀದಿಗಳಲ್ಲಿ ಶವಗಳು ಬಿದ್ದಿವೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮಣಿಪುರದ ಇಂಫಾಲ್ ಕಣಿವೆ ಪ್ರದೇಶದ ಸುತ್ತಲಿನ ಸೆಕ್ಮಾಯ್, ಸುಗ್ನು, ಕುಂಬಿ, ಫಯೆಂಗ್ ಮತ್ತು ಸೆರೌ ಈ ಐದು ಪ್ರದೇಶಗಳ ಮೇಲೆ ಬಂಡುಕೋರರು ರಾತ್ರಿ 2ರ ವೇಳೆಯಲ್ಲಿ ಏಕಕಾಲದಲ್ಲಿ ದಾಳಿ ಆರಂಭಿಸಿದ್ದರು. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದಾರೆ. ಈಗಲೂ ಕೂಡ ಇಲ್ಲಿ ಗುಂಡಿನ ಕಾಳಗ ಮುಂದುವರಿದಿದೆ. ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಕೆಲವರ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಬಿಶೇನ್​ಪುರ್​ನ ಚಂದನ್​ಪೋಕಪಿ ಎಂಬಲ್ಲಿ 27 ವರ್ಷದ ರೈತರೊಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.

ಇದನ್ನೂ ಓದಿ: New Parliament house: ವಾವ್ಹ್… ನೂತನ ಸಂಸತ್ ಭವನದಲ್ಲಿ ಕನ್ನಡದ ಕಂಪು !! ಗೋಡೆಗಳ ಮೇಲೆ ರಾರಾಜಿಸುತ್ತಿದೆ ಬಸವಣ್ಣನ ವಚನ, ಹಂಪಿಯ ರಥ!!