ವೈಯಕ್ತಿಕ ದ್ವೇಷಕ್ಕೆ ಶಿಕ್ಷಕಿಯರಿಬ್ಬರ ಮಧ್ಯೆ ಚಪ್ಪಲಿಯಲ್ಲಿ ಹೊಡೆದಾಟ : ವಿಡಿಯೋ ವೈರಲ್

Fight breaks out between two teachers in Patna's Bihta video goes viral

Teachers Fight video viral: ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಇಬ್ಬರು ಶಿಕ್ಷಕರ ನಡುವಿನ ಜಗಳದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Teachers Fight video viral) ಎಂದು ವರದಿಯಾಗಿದೆ. ಶಿಕ್ಷಕರ ನಡುವಿನ ವೈಯಕ್ತಿಕ ದ್ವೇಷದಿಂದ ದೈಹಿಕವಾಗಿ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡು ಜಗಳವಾಡಿದ್ದಾರೆ ಎಂದು ಬಿಹ್ತಾ ಬ್ಲಾಕ್ ಶಿಕ್ಷಣ ಅಧಿಕಾರಿ ನವೇಶ್ ಕುಮಾರ್ ತಿಳಿಸಿದ್ದಾರೆ. ಈ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹೊರಬಂದಿದೆ.

 

ವೀಡಿಯೊದಲ್ಲಿ, ಇಬ್ಬರು ಶಿಕ್ಷಕರು ಕೊಳಕು ರಸ್ತೆ ಬದಿಯಲ್ಲಿ ಗಲಾಟೆ ತೀವ್ರಗೊಂಡು ಮಲಗಿಸಿ ಪರಸ್ಪರ ಚಪ್ಪಲಿಯ ಮೂಲಕ ಕೆನ್ನೆಗೆ ಹೊಡೆಯುವುದನ್ನು ಮತ್ತು ಒದೆಯುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ ಪರಸ್ಪರರ ಉಟ್ಟ ಸೀರೆಯನ್ನು ಕಸಿದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಶಿಕ್ಷಕಿಯರಿಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ಸುತ್ತಲಿನ ವೀಕ್ಷಕರು ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಬ್ಬ ಮಹಿಳೆ ಶಿಕ್ಷಕರಲ್ಲಿ ಒಬ್ಬರನ್ನು ಚಪ್ಪಲಿಯಿಂದ ಹೊಡೆಯುವುದನ್ನು ಗಮನಿಸಲಾಗಿದೆ. ಹಾಜರಿದ್ದ ಇತರ ಪ್ರೇಕ್ಷಕರು ಗಲಾಟೆ ನಿಲ್ಲಿಸಲು ಮುಂದಾಗಿದ್ದಾರೆ.

https://twitter.com/amarDgreat/status/1662006979664175104?s=20

 

ಇದನ್ನೂ ಓದಿ: ಇಂದು ಅಂಬರೀಷ್‌ಗೆ 71ನೇ ವರ್ಷದ ಹುಟ್ಟು ಹಬ್ಬ : ಸುಮಲತಾ ಟ್ವೀಟ್‌ ಮಾಡಿದ್ದೇನು ಗೊತ್ತಾ?

Leave A Reply

Your email address will not be published.