Malaika Arora- Arjun kapoor: ತನ್ನ ಪ್ರಿಯತಮನ ಖಾಸಗಿ ಫೋಟೋ ಶೇರ್ ಮಾಡಿದ ನಟಿ ಮಲೈಕಾ- ಟ್ರೋಲಿಗರಿಗೆ ಆಹಾರವಾದ ಅರ್ಜುನ್ ಕಪೂರ್

Actress Malaika shared a private photo of Arjun Kapoor

Malaika Arora- Arjun kapoor: ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ (Arjun Kapoor) ಅವರ ಜೋಡಿ ತುಂಬಾ ಫೇಮಸ್ ಆಗಿದ್ದು ಆಗಾಗ ಸುದ್ಧಿಮಾಡುತ್ತಿರುತ್ತದೆ. ಅದರಲ್ಲೂ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ನಡುವೆ ಮಲೈಕಾ ಮಾಡಿದ ಒಂದು ಕೆಲಸದಿಂದ ಅರ್ಜುನ್ ಕಪೂರ್ (Arjun Kapoor) ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ.

 

ಹೌದು, ಮಲೈಕಾ ಅರೋರಾ (Malaika Arora) 50ರ ಆಸು ಪಾಸಿನಲ್ಲಿದ್ರೂ ಕೂಡ ಅವರ ಬ್ಯೂಟಿ ಕೊಂಚವೂ ಮಾಸಿಲ್ಲ. ಈ ನಟಿ ಆಗಾಗ ತಮ್ಮ 38ರ ಹರಯದ ಪ್ರಿಯತಮ ಅರ್ಜುನ್ ಕಪೂರ್ (Malaika Arora- Arjun kapoor) ಜೊತೆ ಹಾಗೂ ತಮ್ಮದೇ ಕೆಲವು ಗ್ಲ್ಯಾಮರಸ್ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿರುತ್ತಾರೆ. ಆದರೀಗ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದು, ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್(Relationship) ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ.

ಇದೀಗ ‘ನನ್ನ ಲೇಝಿ ಬಾಯ್’(My lazy boy) ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ನಟನ ಲುಕ್‌ಗೆ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಅಂದಹಾಗೆ ಅರ್ಜುನ್ ಕಪೂರ್ ಅವರು ಸ್ಟಾರ್ ಕಿಡ್. ಖ್ಯಾತ ಬಾಲಿವುಡ್ ನಿರ್ಮಾಪಕ(Bollywood Producer) ಬೋನಿ ಕಪೂರ್(Boni Kapoor) ಅವರ ಪುತ್ರ. ಆರಂಭದಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜತೆ ಅರ್ಜುನ್ ಸುತ್ತಾಟ ನಡೆಸುತ್ತಿದ್ದರು. ಇವರ ಸಂಬಂಧ ಮುರಿದುಬಿತ್ತು. ಈ ವೇಳೆ ಅರ್ಜುನ್​ ಕಪೂರ್​ಗೆ ಕಂಡಿದ್ದು ಸಲ್ಲು ಸಹೋದರ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ. ಅರ್ಬಾಜ್ ಹಾಗೂ ಮಲೈಕಾ ದಾಂಪತ್ಯ ಜೀವನ ನಡೆಸುತ್ತಿದ್ದ ಸಂದರ್ಭದಲ್ಲೇ ಅರ್ಜುನ್ ಕಪೂರ್​ಗೆ ನಟಿಯ ಮೇಲೆ ಒಂದು ಅಫೆಕ್ಷನ್ ಬೆಳೆದಿತ್ತು.

ಅರ್ಜುನ್ ಕಪೂರ್ ಆಗತಾನೇ ಬಾಲಿವುಡ್​ನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಇದರ ಜತೆ ಮಲೈಕಾ ಜತೆಗಿನ ಬಾಂಧವ್ಯ ಗಟ್ಟಿ ಆಗುತ್ತಾ ಹೋಗುತ್ತಿತ್ತು. ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. 2016ರಲ್ಲಿ ಮಲೈಕಾ ಮತ್ತು ಅರ್ಬಾಜ್ ಅವರ 19 ವರ್ಷಗಳ ದಾಂಪತ್ಯ ಕೊನೆ ಆಯಿತು. ಅರ್ಜುನ್ ಹಾಗೂ ಮಲೈಕಾ ಸುತ್ತಾಟ ಆರಂಭಿಸಿದ್ದರಿಂದಲೇ ವಿಚ್ಛೇದನ ಆಯಿತು ಎನ್ನುವ ಆರೋಪ ಕೂಡ ಇದೆ. ಆದರೆ, ‘ನಮ್ಮ ನಡುವೆ ಯಾವುದೇ ಪ್ರೀತಿ ಇಲ್ಲ, ನಮ್ಮ ಮಧ್ಯೆ ಇರುವುದು ಒಳ್ಳೆಯ ಫ್ರೆಂಡ್​ಶಿಪ್’ ಎಂದು ಈ ಜೋಡಿ ಹೇಳುತ್ತಾ ಬಂತು.

ಡಿವೋರ್ಸ್ ಪಡೆದ ನಂತರದಲ್ಲಿ ಮಲೈಕಾ ಹಾಗೂ ಅರ್ಜುನ್ ಕಪೂರ್ ಪರಸ್ಪರ ಭೇಟಿ ಆಗುವುದು ಹೆಚ್ಚಿತು. 2018ರಲ್ಲಿ ಈ ಜೋಡಿ ಒಟ್ಟಾಗಿ ಕ್ಯಾಮೆರಾಗೆ ಪೋಸ್ ನೀಡಿ ಗಮನ ಸೆಳೆಯಿತು. 2019ರಲ್ಲಿ ಮಲೈಕಾ ‘ಕಾಫಿ ವಿತ್ ಕರಣ್​’ ಶೋಗೆ ಬಂದಿದ್ದರು. ಈ ವೇಳೆ ಕರಣ್ ಜೋಹರ್ ಎದುರು ಅರ್ಜುನ್ ಕಪೂರ್ ಅವರನ್ನು ಪ್ರೀತಿಸುತ್ತಿರುವ ವಿಚಾರದ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡಿದ್ದರು. ಈಗ ಅರ್ಜುನ್-ಮಲೈಕಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಪ್ರೀತಿ ವಿಚಾರವನ್ನು ಅಧಿಕೃತ ಮಾಡಲಾಗಿದೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

 

ಇದನ್ನು ಓದಿ: Accident: ಮೈಸೂರಲ್ಲಿ ಭೀಕರ ಅಪಘಾತ: 10 ಮಂದಿ ಸಾವು 

Leave A Reply

Your email address will not be published.