Aadhaar Card Update: ಆಧಾರ್ ಕಾರ್ಡ್ ಅಪ್ಡೇಟ್ ಈಗ ಉಚಿತ ಉಚಿತ, ನಯಾ ಪೈಸೆ ಖರ್ಚು ಮಾಡದೆ ಅಪ್ಡೇಟ್ ಮಾಡಿಕೊಳ್ಳಿ, ಜೂನ್ 17 ಕೊನೆಯ ದಿನಾಂಕ!

Aadhaar card update with free of cost

Aadhaar Card Update: ಆಧಾರ್ ಕಾರ್ಡ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಯನ್ನು ಭಾರತದ ನಾಗರಿಕರಿಗೆ ನೀಡಲಾಗಿದೆ. ಪ್ರತಿಯೊಬ್ಬ ಭಾರತೀಯ ನಿರ್ವಹಿಸುವ ಪ್ರತಿಯೊಂದು ವಹಿವಾಟಿಗೆ ಮುಖ್ಯವಾಗಿ ಆಧಾರ್ ಕಾರ್ಡ್(Aadhaar Card) ಒಂದು ಪ್ರಮುಖ ಗುರುತಿನ ದಾಖಲೆಯಾಗಿದೆ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀಡಲಾಗಿರುವ ಮಾಹಿತಿಯು ಸಂಪೂರ್ಣವಾಗಿ ನಿಖರವಾಗಿರಬೇಕು. ಯಾಕೆಂದರೆ ಆಧಾರ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

ಆದ್ದರಿಂದ ಗಮನಿಸಿ 2023 ಜೂನ್ 14ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ (Aadhaar Card Update) ಮಾಡಲು ಅವಕಾಶ ನೀಡುತ್ತದೆ. ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಯಾವುದೇ ರೀತಿ ಹಣ ನೀಡಬೇಕಾಗಿಲ್ಲ.

ಈ ಮೊದಲು ನಿಮ್ಮ ಆಧಾರ್‌ನಲ್ಲಿ ಹೆಸರು, ಫೋಟೊ, ವಿಳಾಸ, ಮೊಬೈಲ್‌ ನಂಬರ್ ಮಾಹಿತಿ ನಂತಹ ಯಾವುದೇ ಮಾಹಿತಿಯನ್ನು ಅಪ್‌ಡೇಟ್ ಮಾಡಲು 50 ರೂಪಾಯಿಗಳನ್ನು ಪಾವತಿಸಬೇಕಿತ್ತು. ಆದರೆ, ಪ್ರಸ್ತುತ UIDAI ಈ ಎಲ್ಲ ತಿದ್ದುಪಡಿ ಸೇವೆಗಳನ್ನು ಉಚಿತವಾಗಿ ಜೂನ್ 14ರವರೆಗೆ ನೀಡಲಿದೆ. ಇದಕ್ಕಾಗಿ myAadhaar ಪೋರ್ಟಲ್ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಿದರೆ ಯಾವುದೇ ಶುಲ್ಕ ಇರುವುದಿಲ್ಲ.

ಮೊದಲು https://myaadhaar.uidai.gov.in/ ಗೆ ಭೇಟಿ ನೀಡಿ ನಂತರ, ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ.
ಬಳಿಕ ಡಾಕ್ಯುಮೆಂಟ್ ನವೀಕರಣದ ಆಯ್ಕೆಯನ್ನ ಆರಿಸಿ ಮತ್ತು ಅದರ ನಂತರ ನಿಮ್ಮ ಮುಂದೆ ವಿಳಾಸವು ಕಾಣಿಸಿಕೊಳ್ಳುತ್ತದೆ. ಇದರ ನಂತರ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನ ಪರಿಶೀಲಿಸಬೇಕಾಗುತ್ತದೆ. ಇದು ಸರಿಯಾಗಿದ್ದರೆ, ನೀವು ಮುಂದಿನ ಲಿಂಕ್ ಕ್ಲಿಕ್ ಮಾಡಿ. ಇದರ ನಂತರ, ನೀವು ನಿಮ್ಮ ID ಪುರಾವೆ ಮತ್ತು ವಿಳಾಸ ಪುರಾವೆ ದಾಖಲೆಯನ್ನ ಸಲ್ಲಿಸಬೇಕು. ಎಲ್ಲಾ ಮಾಹಿತಿಯನ್ನ ನೀಡಿದ ನಂತರ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: IPL 2023 Finals: ಇನ್ನೊಂದು ದಿನವೂ ಮಳೆ ಬಂದ್ರೆ ಚಾಂಪಿಯನ್ ಆಗೋದು ಗುಜರಾತ್ ಟೈಟಾನ್ಸ್, ಕಾರಣ ಇಲ್ಲಿದೆ

Leave A Reply

Your email address will not be published.