Assam: ಶಿಸ್ತು ಕಲಿಸಲು ಶಾಲಾ ಮಕ್ಕಳ ಕೂದಲಿಗೇ ಕತ್ತರಿ ಹಾಕಿದ ಶಿಕ್ಷಕ! ಶಾಲೆಗೆ ಬರಲು ಮಕ್ಕಳ ಹಿಂದೇಟು!!

Teacher chops hair of 30 students during morning assembly probe ordered

Teacher chops students hair : ಶಾಲೆ(School) ಗೆ ಹೋಗಿ ಅಕ್ಷರ ಕಲಿಯೋ ಮಕ್ಕಳಿಗೆ ವಿದ್ಯೆ ಕಲಿಸೋ ಗುರು(Teacher) ಶಿಕ್ಷಿಸುವ, ದಂಡಿಸುವ ಕೊಂಚ ಅಧಿಕಾರವಿರಬಹುದು. ಆದರೆ ಈ ಗುರುವಿನಿಂದಲೇ ಅವಮಾನವಾದರೆ ಏನಾದೀತು? ಯಾಕೆ ಇಂತಹ ಪ್ರಶ್ನೆ ಎಂದರೆ ಅಸ್ಸಾಂ(Assam) ನಲ್ಲಿ ಇಂತಹ ಅವಮಾನಕರ ಘಟನೆಯೊಂದು ನಡೆದಿದ್ದು, ಘಟನೆಯಿಂದ ನೊಂದ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

 

ಹೌದು, ಅಸ್ಸಾಂನ ಮಜುಲಿ ಜಿಲ್ಲೆಯ(Majuli District) ಶಾಲೆಯೊಂದರಲ್ಲಿ, ಗುರುವಾರ (ಮೇ 25) ಬೆಳಗ್ಗೆ ಪ್ರಾರ್ಥನೆ ಸಮಯದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳು ಕಟಿಂಗ್(Cutting) ಮಾಡಿಸದೆ ಉದ್ದ ಕೂದಲು ಬಿಟ್ಟಿದ್ದಾರೆಂದು, 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿರುವ (teacher chops students hair) ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಈ ಘಟನೆಯಿಂದ ನೊಂದ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ಶಿಕ್ಷಕನನ್ನು ನಿಕ್ಕಿ(Nikki) ಎಂದು ಗುರುತಿಸಲಾಗಿದ್ದು, ಶಾಲೆಯ ಅಧಿಕಾರಿಗಳ ಆದೇಶವನ್ನು ಅನುಸರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಶಾಲಾ ಅಧಿಕಾರಿಗಳಿಗೆ ಶಿಸ್ತು ವಿಧಿಸುವ ಸ್ವಾತಂತ್ರ್ಯವಿದೆ, ಅದಕ್ಕೂ ಕೆಲವು ಮಿತಿಗಳಿವೆ. ಆದರೆ ಪ್ರಾರ್ಥನೆ (ಅಸೆಂಬ್ಲಿ) ಸಮಯದಲ್ಲಿ ಇಡೀ ಶಾಲೆಯ ಮಕ್ಕಳ ಮುಂದೆ ಕೆಲವು ಮಕ್ಕಳ ಕೂದಲು ಕತ್ತರಿಸುವುದು ಅವಮಾನಕರ,” ಎಂದು ಪೋಷಕರು(Parents) ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಬಗ್ಗೆ ಉನ್ನತ ಅಧಿಕಾರಿಗಳ ಮುಂದೆ ಪ್ರತಿಕ್ರಿಯೆ ನೀಡಿರುವ ಶಾಲೆಯ ಅಧಿಕಾರಿಗಳು, “ಶಾಲೆಯ ಮಾರ್ಗಸೂಚಿಗಳ ಪ್ರಕಾರ ಮಕ್ಕಳು ಉದ್ದನೆಯ ಕೂದಲನ್ನು ಬಿಡುವಂತಿಲ್ಲ. ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು ಮತ್ತು ಪೋಷಕರಿಗೂ ತಿಳಿಸಲಾಗಿತ್ತು, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದು ಕೇವಲ ಶಿಸ್ತು ಕಲಿಸುವ ವಿಧಾನವಾಗಿತ್ತು” ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ತನಿಖೆ ನಡೆಸಿ, ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕಾವೇರಿ ಬಿ ಶರ್ಮಾ(DC Kaveri B Sharma) “ಪ್ರಾಥಮಿಕ ತನಿಖೆಯ ಪ್ರಕಾರ ಶಿಕ್ಷಕರು ಕೂದಲಿನ ಉದ್ದವನ್ನು ಮಾತ್ರ ಕಡಿಮೆ ಮಾಡಿದ್ದಾರೆ, ಪೂರ್ತಿ ಕೂದಲನ್ನು ಕತ್ತಿರಿಸಿಲ್ಲ” ಎಂದು ತಿಳಿಸಿದ್ದಾರೆ. ಅಲ್ಲದೆ “ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಶಿಕ್ಷಕರು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಲು ಯಾವುದೇ ಅವಕಾಶವಿಲ್ಲ. ಅಪ್ರಾಪ್ತ ಮಕ್ಕಳೊಂದಿಗೆ ವ್ಯವಹರಿಸಲು ಇತರ ಮಾರ್ಗಗಳಿವೆ. ಆ ದಿನ ನಿಜವಾಗಿ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಷಯವನ್ನು ತನಿಖೆ ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka Congress: ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ, ನಕಲಿ ಪಟ್ಟಿ ನಂಬಬೇಡಿ- ಕಾಂಗ್ರೆಸ್ ಸ್ಪಷ್ಟನೆ

Leave A Reply

Your email address will not be published.