North Korea: ಬೈಬಲ್ ಇಟ್ಟುಕೊಂಡಿದ್ದಕ್ಕಾಗಿ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ ನೀಡಿದ ಉತ್ತರ ಕೊರಿಯಾ!! ಕಾರಣವೇನು?

North Korea jailed 2 year baby for life after catching parents with bible

North Korea: ಕ್ರೈಸ್ತರ ಪವಿತ್ರಗ್ರಂಥವಾದ ಬೈಬಲ್‌ (Bible) ಹೊಂದಿದ್ದಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ (North Korea) ನಡೆದಿದೆ.

ಹೌದು, ಚಿತ್ರ ವಿಚಿತ್ರ ಹಾಗೂ ಅಮಾನುಷ ನೀತಿಗಳಿಗೆ ಹೆಸರಾದ ಉತ್ತರ ಕೊರಿಯಾ(North Corea)ದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಸ್ತಿತ್ವದಲ್ಲಿಯೇ ಇಲ್ಲ. ಅಂತೆಯೇ ಇದೀಗ ಬೈಬಲ್ ಇರಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಕುಟುಂಬವೊಂದನ್ನು ಬಂಧಿಸಿರುವ ಅಲ್ಲಿನ ಸರ್ಕಾರ, ಆ ಪೋಷಕರ ಕೇವಲ 2 ವರ್ಷದ ಮಗುವಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಅಂದಹಾಗೆ ಕಳೆದ ಕೆಲವು ದಿನಗಳಿಂದ ಉತ್ತರ ಕೊರಿಯಾದಲ್ಲಿ ಕ್ರಿಶ್ಚಿಯನ್(Christian) ಸಮುದಾಯದವರನ್ನು ಗುರಿಯಾಗಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​(US State department) ವರದಿಯಲ್ಲಿ ಬಯಲಾಗಿದೆ. 2022ರಲ್ಲಿ ಉತ್ತರ ಕೊರಿಯಾದಲ್ಲಿ ಸುಮಾರು 70,000 ಸಾವಿರಕ್ಕಿಂತ ಹೆಚ್ಚು ಕ್ರಿಶ್ಚಿಯನ್ನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರ ಪೈಕಿ ಎರಡು ವರ್ಷದ ಮಗು ಕೂಡ ಇದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರವು ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವವರಿಗೆ ಕಿರುಕುಳವನ್ನು ನೀಡಲಾಗುವುದು ಎಂದು ತಿಳಿಸಿದೆ. ಕಿರುಕುಳಕ್ಕೊಳಗಾದ ವ್ಯಕ್ತಿಗಳನ್ನು ಬಂಧಿಸಿ ಕೆಲಸ ಮಾಡಲು ಹೇಳಬಹುದು, ಚಿತ್ರಹಿಂಸೆ, ಹಡಿಙಆರು ಅಥವಾ ಅಂತಹವರನ್ನು ಲೈಂಗಿಕ ದೌರ್ಜನ್ಯ ಎಸಗಬಹುದು ಎಂದು ಅಲ್ಲಿನ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಡಿಸೆಂಬರ್ 2021 ರಲ್ಲಿ, ಕೊರಿಯಾ ಫ್ಯೂಚರ್(Corea Future) ಸಂಸ್ಥೆಯು ಉತ್ತರ ಕೊರಿಯಾದಲ್ಲಿ ಧಾರ್ಮಿಕ ಆಚರಣೆ ಕಾರಣಕ್ಕಾಗಿ ಮಹಿಳೆಯರ ವಿರುದ್ಧ ನಡೆದಿರುವ ಚಿತ್ರಹಿಂಸೆ ಕುರಿತು ವರದಿಯನ್ನು ಬಿಡುಗಡೆ ಮಾಡಿತು. ದೌರ್ಜನ್ಯವನ್ನು ಅನುಭವಿಸಿದ 151 ಕ್ರಿಶ್ಚಿಯನ್ ಮಹಿಳೆಯರನ್ನು ಸಂದರ್ಶನಕ್ಕೆ ಒಳಪಡಿಸಿ ವರದಿ ಮಾಡಲಾಗಿತ್ತು. ಅನಿಯಂತ್ರಿತ ಬಂಧನ, ಚಿತ್ರಹಿಂಸೆ, ಗಡಿಪಾರು, ಬಲವಂತದ ದುಡಿಮೆ ಮತ್ತು ಲೈಂಗಿಕ ಹಿಂಸೆ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: Assam : ಶಿಸ್ತು ಕಲಿಸಲು ಶಾಲಾ ಮಕ್ಕಳ ಕೂದಲಿಗೇ ಕತ್ತರಿ ಹಾಕಿದ ಶಿಕ್ಷಕ! ಶಾಲೆಗೆ ಬರಲು ಮಕ್ಕಳ ಹಿಂದೇಟು!!

Leave A Reply

Your email address will not be published.