Udupi: ಮನೆ ಕೆಲಸದವಳ ಆರೈಕೆಗೆ ಮನಸೋತ ಶ್ವಾನ! ಮಾಲಿಕರನ್ನು ಬಿಟ್ಟು ಆಕೆಯ ಹಿಂದೆಯೇ ಬಂದು ಬಸ್ ಏರಿತು!!

The dog that boarded the bus with the maid

Udupi: ಸಾಕು ಪ್ರಾಣಿಗಳಲ್ಲಿ(Pet animals) ನಾಯಿ(Dogs) ಗಳೆಂದರೆ ಹೆಚ್ಚಿನವರಿಗೆ ಅಚ್ಚು ಮೆಚ್ಚು. ಅದಕ್ಕೇನು ಕೊಡುವುದು ಬೇಡ, ತಲೆ ಸವರಿ, ಕೊಂಚ ಮುದ್ದಿಸಿದರೆ ಸಾಕು ಸದಾ ನಿಮ್ಮ ಹಿಂದೆ ಬಾಲ ಅಲ್ಲಾಡಿಸುತ್ತಾ, ಎಲ್ಲೂ ಹೋಗದೆ ಸುತ್ತುತ್ತಿರುತ್ತದೆ. ಇನ್ನು ಅದನ್ನು ತುಂಬಾ ಪ್ರೀತಿಯಿಂದ ಆರೈಕೆ ಮಾಡಿದರೆ ಕೇಳಬೇಕೆ. ಎಂದಿಗೂ ನಿಮ್ಮನ್ನು ಬಿಟ್ಟಿರಲಾರದು. ಆದರೀಗ ಅಂತಹುದೇ ವಿಚಿತ್ರ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

 

ಹೌದು, ಉಡುಪಿ(Udupi) ನಗರದ ಮನೆಯೊಂದರ, ಮನೆ ಕೆಲಸದ ಮಹಿಳೆಯ ಪ್ರೀತಿಗೆ ಮನಸೋತು, ಆಕೆಯ ಆರೈಕೆಯ ರುಚಿಕಂಡ ಮನೆ ಮಾಲಿಕರ ನಾಯಿಯೊಂದು ಆಕೆಯ ಹಿಂದೆಯೇ ಬಸ್ ನಲ್ಲಿ ಪ್ರಯಾಣ ಬೆಳೆಸಲು ಮುಂದಾದ ಅಪರೂಪದ ಘಟನೆಯೊಂದು ಅಮ್ಮುಂಜೆಯ(Ammunje) ಸರಸ್ವತಿ ನಗರದಲ್ಲಿ‌(Saraswati) ನಡೆದಿದೆ.

ಕೆಲಸದಾಕೆಯನ್ನು ಹಿಂಬಾಲಿಸಿದ ಶ್ವಾನವು ಆಕೆಯೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದೆ. ಬಳಿಕ ಆಕೆಯ ಹಿಂದೆಯೇ ಬಸ್ ಏರಿದೆ. ಬಸ್ ನಿರ್ವಾಹಕ(Conductor) ಶ್ವಾನವನ್ನು ಇಳಿಸಲು ಎಷ್ಟೇ‌ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್ ನಿಂದ ಕೆಳಗಿಯಲು ಒಪ್ಪಲಿಲ್ಲ. ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್ ನಿಂದ ಇಳಿದಾಗ ಶ್ವಾನ ಕೂಡ ಇಳಿಯಿತು.

ಶ್ವಾನ ತನ್ನನ್ನು ಸಾಕಿದ ಮನೆಯ ಯಜಮಾನರನ್ನು ಬಿಟ್ಟು, ತನ್ನನ್ನು ಆರೈಕೆ ಮಾಡಿದ ಮಹಿಳೆಗೆ ತನ್ನ ಗೌರವ ನಿಯತ್ತನ್ನು ತೋರಿಸಿದೆ. ಈ ಘಟನೆ ಶ್ವಾನದ ನಿಷ್ಠೆಗೆ ಸಾಕ್ಷಿಯಾಯಿತು. ಅಲ್ಲದೆ ಈ ಅಪರೂಪದ ಘಟನೆಗೆ ಬಸ್ ಪ್ರಯಾಣಿಕರೆವ್ಲರೂ ಮೆಚ್ಚುಗೆ ವ್ಯಕ್ತಪಡಿಸಿ, ನಾಯಿಯ ಸ್ವಾಮಿನಿಷ್ಠೆಯನ್ನು ಕೊಂಡಾಡಿದರು.

 

ಇದನ್ನು ಓದಿ: D K Shivkumar vs Prathap Simha: ಜೂನ್ 1 ಯಾಕೆ? ನಾಳೆಯಿಂದಲೇ ನಮ್ಮ ಮನೆ ಮುಂದೆ ಮಲಗಲಿ- ಪ್ರತಾಪ್ ಸಿಂಹ ಹೇಳಿಕೆಗೆ ಡಿಕೆಶಿ ವ್ಯಂಗ್ಯ! ಉಪ ಮುಖ್ಯಮಂತ್ರಿಗಳೇ ನಿಮಗಾಗಲಿ, ನಿಮ್ಮ ಸರ್ಕಾರಕ್ಕಾಗಲಿ ಹೀಗೆ ಹೇಳೋ ನೈತಿಕಥೆ ಇದೆಯೇ? 

Leave A Reply

Your email address will not be published.