Free Education: ರೈತರು, ಕೃಷಿ ಕೂಲಿಕಾರರ ಮಕ್ಕಳಿಗೆ ಗುಡ್‌ ನ್ಯೂಸ್‌! ಘೋಷಣೆಯಾಗಿದೆ ಉಚಿತ ಶಿಕ್ಷಣ!

Declaration of free education for the children of farmers and farm laborers

Free Education: ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರೈತ ಹಾಗೂ ಕೂಲಿಕಾರ ಮಕ್ಕಳಿಗೆ ಕೊಪ್ಪಳದ ಸೆಂಟ್ ಪಾಲ್ಸ್ ಪದವಿ ಮಹಾವಿದ್ಯಾಲಯ ವತಿಯಿಂದ ಉಚಿತ ಶಿಕ್ಷಣ (Free Education) ನೀಡುವ ಉದ್ದೇಶ ಹೊಂದಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ಹೌದು, ರೈತರು ಹಾಗೂ ಕೃಷಿ ಕೂಲಿಕಾರರ ಮಕ್ಕಳಿಗೆ ಉಚಿತವಾಗಿ ಪದವಿ ಶಿಕ್ಷಣ ದೊರೆಯಲಿದೆ. ಈ ವಿಶೇಷ ಅವಕಾಶವನ್ನು ರೈತ ಮತ್ತು ಕೃಷಿ ಕೂಲಿಕಾರರ ಮಕ್ಕಳು ಸೂಕ್ತವಾಗಿ ಬಳಸಿಕೊಳ್ಳಬಹುದಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಕೊಪ್ಪಳದ ಸೆಂಟ್ ಪಾಲ್ಸ್ ಪದವಿ ಮಹಾವಿದ್ಯಾಲಯವು ರೈತರು ಮತ್ತು ಕೃಷಿ ಕೂಲಿಕಾರರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದೆ. ಈ ಕುರಿತು ಸಂಸ್ಥೆಯ ಅಧ್ಯಕ್ಷ ಬಸವರಾಜ ಸಂಕನಗೌಡರು ತಿಳಿಸಿದ್ದಾರೆ.

ಬಸವರಾಜ ಸಂಕನಗೌಡ ಕೊಪ್ಪಳದ ಮೀಡಿಯಾ ಕ್ಲಬ್​ನಲ್ಲಿ ಮಾತನಾಡಿ, ಕಳೆದ ವರ್ಷದಿಂದ ಈ ಮಹಾವಿದ್ಯಾಲಯವು ಕೊಪ್ಪಳದಲ್ಲಿ ಆರಂಭವಾಗಿದೆ. ವಾಣಿಜ್ಯ ವಿಷಯಗಳ ಕಾಲೇಜು ನಡೆಯುತ್ತಿದೆ. ಕಳೆದ ಬಾರಿ 22 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆದು ಓದುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜೊತೆಗೆ ಕಳೆದ 8 ಜನ ವಿದ್ಯಾರ್ಥಿಗಳು ಉಚಿತ ಪ್ರವೇಶ ಪಡೆದಿದ್ದಾರೆ. ಈ ವರ್ಷವೂ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರೈತ ಹಾಗೂ ಕೂಲಿಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ ಎಂದು ಬಸವರಾಜ ಸಂಕನಗೌಡರ ತಿಳಿಸಿದ್ದಾರೆ.

ಮುಖ್ಯವಾಗಿ ಕೊಪ್ಪಳದ ಸೆಂಟ್ ಪಾಲ್ಸ್ ಪದವಿ ಮಹಾವಿದ್ಯಾಲಯ ಕಾಲೇಜನಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಪಡೆದವರಿಗೆ ಹಾಗೂ ಮಂಗಳಮುಖಿಯರಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಕಾಲೇಜಿನಲ್ಲಿ ಕಾಂಪಿಟೇಟಿವ್ ಪರೀಕ್ಷೆ ಎದುರಿಸುವ ಹಾಗು ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶಿಕ್ಷಣ ನೀಡಲಾಗುತ್ತಿದ್ದು, ವೀಕೆಂಡ್ ವಿಥ್ ಕಾಂಪಿಟೇಟಿವ್ ಎಕ್ಸಾಂ 25 ವಾರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನಡೆಸಲಾಗುವುದು ಎಂದು ಮಹಾವಿದ್ಯಾಲಯದ ಅಧ್ಯಕ್ಷ ಬಸವರಾಜ ಸಂಕನಗೌಡ ಅವರು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Crime News: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆಗೆ ಯತ್ನ ; ಉದ್ಯಮಿ ಶ್ರೀನಿವಾಸ್ ನಾಯ್ಡು ವಿರುದ್ಧ FIR ! 

Leave A Reply

Your email address will not be published.