Tipu sultan: 1.5 ಕೋಟಿಗೆ ವಿಜಯ್ ಮಲ್ಯ ಖರೀದಿಸಿದ್ದ ಟಿಪ್ಪು ಸುಲ್ತಾನ್ ಖಡ್ಗವೀಗ 140 ಕೋಟಿಗೆ ಮಾರಾಟ!! ಏನಿದರ ವಿಶೇಷತೆ?
Tipu Sultan sword sold for 140 crore rs
Tipu sultan sword: 18ನೇ ಶತಮಾನದ ದೊರೆಯಾದರೂ ಕೂಡ ಇಂದಿಗೂ ರಾಜ್ಯ ರಾಜಕೀಯದಲ್ಲಿ ಆಗಾಗ್ಗೆ ಸದ್ದು ಮಾಡುವ ಹೆಸರೆಂದರೆ ಅದು ಟಿಪ್ಪು ಸುಲ್ತಾನ್(Tippu sulthan). ಆದರೆ ಸದ್ಯ ಇದೀಗ ಟಿಪ್ಪು ಹೆಸರು ಬೇರೆ ವಿಚಾರವಾಗಿ ಕೇಳಿಬರುತ್ತಿದೆ. ಅದೇನಂದ್ರೆ ಮಧ್ಯದ ದೊರೆ ವಿಜಯ್ ಮಲ್ಯನ(Vijay mallya) ಬಳಿಯಿದ್ದ, 18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನ ಖಡ್ಗವನ್ನು ಈಗ ಲಂಡನ್‌ನಲ್ಲಿ ಹರಾಜಿಗೆ ಹಾಕಲಾಗಿದೆ. ಹರಾಜಿನ ಬೆಲೆ ಕೇಳಿದ್ರಂತೂ ನೀವೇ ಶಾಕ್ ಆಗ್ತೀರಾ.
ಹೌದು, ವಿಜಯ್ ಮಲ್ಯ ದಿವಾಳಿಯಾಗಲು ಕಾರಣವಾಯಿತು ಎಂದು ಹೇಳಲಾಗುವ ಚಾರಿತ್ರಿಕ ಹಿನ್ನೆಲೆಯ ಟಿಪ್ಪು ಖಡ್ಗವನ್ನು ಮಂಗಳವಾರ ಲಂಡನ್(London) ನಲ್ಲಿಹರಾಜು ಮಾಡಲಾಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ಹ್ಯಾಮ್(Bonham) ಹರಾಜು ಸಂಸ್ಥೆ 145 ಕೋಟಿ ರೂ.ಗೆ ಖರೀದಿಸಿದೆ. ಅಚ್ಚರಿ ವಿಷಯವೇನೆಂದರೆ ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004 ರಲ್ಲಿ ವಿಜಯ್ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿ ಮಾಡಿದ್ದರು. ಅದೇ ಖಡ್ಗ (Tipu sultan sword) ಇಂದು ಬರೋಬ್ಬರಿ 145 ಕೋಟಿ ರೂ.ಗೆ ಮಾರಾಟವಾಗಿದೆ!!
ಅಂದಹಾಗೆ ಮಂಗಳವಾರ ಲಂಡನ್‌ನಲ್ಲಿ ಬೊನ್ಹಾಮ್ಸ್ನಿಂದ (Bonhams)ಹರಾಜು ಮಾಡಿದ ಟಿಪ್ಪು ಸುಲ್ತಾನ್‌ನ ಖಡ್ಗವು (Tipu Sultan’s sword) ಈ ಹಿಂದೆ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಅವರ ಒಡೆತನದಲ್ಲಿತ್ತು. 2018 ರಲ್ಲಿ ಲಂಡನ್ ಹೈಕೋರ್ಟ್‌ನ(High court) ಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಲ್ಯ ಅವರ ವಕೀಲರು ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದರು. 2004 ರಲ್ಲಿ ವಿಜಯ್ ಮಲ್ಯ ಖರೀದಿಸಿದ್ದ ಅದೇ ಖಡ್ಗ ಇದು. ಮಲ್ಯ ಖರೀದಿಸಿದ ಖಡ್ಗದ ಬೆಲೆ 1.5 ಕೋಟಿ, ನಿನ್ನೆ ಅದೇ ಖಡ್ಗ 145 ಕೋಟಿ ರೂ.ಗೆ ಹರಾಜಾಗಿದೆ ಎಂದು ಸಂಶೋಧಕ ಮತ್ತು ಇತಿಹಾಸಕಾರ ನಿಧಿನ್ ಒಲಿಕಾರ(Nidhin Olikar) ಹೇಳಿರುವುದಾಗಿ ನ್ಯೂಸ್ 9 ಪ್ಲಸ್ ವರದಿ ಮಾಡಿದೆ.
ಇನ್ನು ಖಡ್ಗದ ಹಿಂದಿನ ಮಾಲೀಕರ ಬಗ್ಗೆ ತಿಳಿದುಕೊಳ್ಳಲು ನ್ಯೂಸ್ 9 ಯುಕೆ ಮೂಲದ ಹರಾಜು ಸಂಸ್ಥೆ ಬೊನ್ಹಾಮ್ಸ್ ಅನ್ನು ಸಂಪರ್ಕಿಸಿದೆ.ಆದರೆ ಹಿಂದಿನ ಅಥವಾ ಪ್ರಸ್ತುತ ಮಾಲೀಕರ ಬಗ್ಗೆ ಕಾಮೆಂಟ್ ಮಾಡಲು ಗುಂಪು ನಿರಾಕರಿಸಿತು. ನಮ್ಮ ಮಾರಾಟಗಾರರು ಮತ್ತು ಖರೀದಿದಾರರ ಗುರುತನ್ನು ಬಹಿರಂಗಪಡಿಸಲು ನಮಗೆ ಅಧಿಕಾರವಿಲ್ಲ, ಅದು ನಮ್ಮ ಗೌಪ್ಯತೆ ನೀತಿಗೆ ವಿರುದ್ಧವಾಗಿದೆ ಎಂದು ಬೊನ್ಹಾಮ್ಸ್ ನ ಮಾರಾಟ ಸಂಯೋಜಕ ಎನ್ರಿಕಾ ಮೆಡುಗ್ನೊ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ 18 ನೇ ಶತಮಾನದ ಉತ್ತರಾರ್ಧದಲ್ಲಿ ಯುದ್ಧಗಳಲ್ಲಿ ಖ್ಯಾತಿ ಗಳಿಸಿದರು. ಅವರು 1175 ಮತ್ತು 1779 ರ ನಡುವೆ ಹಲವಾರು ಸಂದರ್ಭಗಳಲ್ಲಿ ಮರಾಠರ ವಿರುದ್ಧ ಹೋರಾಡಿದ್ದಾರೆ. ಆದರೆ, ಅನೇಕ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಹಾಗೂ ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ ಎಂಬ ಅಪಖ್ಯಾತಿಯೂ ಅವರ ಮೇಲಿದೆ.
ಇನ್ನೂ ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಈ ಅದ್ಭುತವಾದ ಖಡ್ಗವು ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಎಲ್ಲಾ ಆಯುಧಗಳಲ್ಲಿ ಶ್ರೇಷ್ಠವಾಗಿದೆ. ಟಿಪ್ಪು ಸುಲ್ತಾನನೊಂದಿಗಿನ ಅದರ ನಿಕಟ ವೈಯಕ್ತಿಕ ಒಡನಾಟ, ಅದನ್ನು ವಶಪಡಿಸಿಕೊಂಡ ದಿನದಿಂದ ಅದರ ನಿಷ್ಪಾಪ ಮೂಲವನ್ನು ಕಂಡುಹಿಡಿಯಬಹುದು ಮತ್ತು ಅದರ ತಯಾರಿಕೆಯಲ್ಲಿ ತೊಡಗಿರುವ ಅತ್ಯುತ್ತಮ ಕರಕುಶಲತೆ. ಇದು ಅನನ್ಯ ಮತ್ತು ಹೆಚ್ಚು ಅಪೇಕ್ಷಣೀಯವಾಗಿದೆ” ಎಂದು ಇಸ್ಲಾಮಿಕ್ ಮತ್ತು ಭಾರತೀಯ ಕಲೆ ಹಾಗೂ ಹರಾಜುದಾರರ ಬೋನ್‌ಹಾಮ್ಸ್ ಮುಖ್ಯಸ್ಥ ಆಲಿವರ್ ವೈಟ್ ಹೇಳಿದರು.