New Parliament Building Inauguration Row: 19 ಪಕ್ಷಗಳಿಂದ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಭಹಿಷ್ಕಾರ: ನಾವು ಭಾಗವಹಿಸುತ್ತೇವೆ ಎಂದ್ವು ಆ 2 ಪಕ್ಷಗಳು
New Parliament Building Inauguration Row
New Parliament Building Inauguration: ನೂತನ ಸಂಸತ್ ಭವನ ಲೋಕಾರ್ಪಣೆ(new Parliament building integration) ಕಾರ್ಯಕ್ರಮ ಉದ್ಘಾಟನೆ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಸಂಸತ್ ಉದ್ಘಾಟನೆ ಮಾಡುವುದನ್ನು ವಿರೋಧಿಸಿರುವ ವಿಪಕ್ಷಗಳು, ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಟಿಎಂಸಿ(TMC), ಕಾಂಗ್ರೆಸ್(Congress), ಡಿಎಂಕೆ(DMK) ಮುಂತಾದ 19 ಪಕ್ಷಗಳು ಸೇರಿಕೊಂಡಿದ್ದು, ಜಂಟಿ ಹೇಳಿಕೆ ಹೊರಡಿಸಿವೆ. ಆದರೆ ಈ ನಡುವೆ 2 ಪ್ರಮುಖ ಪ್ರಾದೇಶಿಕ ಪಕ್ಷಗಳು ಮಾತ್ರ ನಾವು ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿವೆ.
ಹೌದು, ಇದೇ ತಿಂಗಳು ಪ್ರಧಾನಿ ಮೋದಿ (PM Narendra Modi)ಯವರು ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದು, ರಾಷ್ಟ್ರಪತಿಗಳು(President) ಸಂಸತ್ ಭವನವನ್ನು ಉದ್ಘಾಟನೆ ಮಾಡದೇ ಇರುವುದನ್ನು ವಿಪಕ್ಷಗಳು ರಾಷ್ಟ್ರಪತಿಗಳ ಹುದ್ದೆಗೆ ಮಾಡಿದ ಅವಮಾನ ಎಂದು ಆರೋಪಿಸಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ಮೇ 28 ರಂದು ನಡೆಯಲಿರುವ ನೂತನ ಸಂಸತ್ ಭವನ (New Parliament Inauguration) ಉದ್ಘಾಟನೆಯ ಕಾರ್ಯಕ್ರಮವನ್ನು ಬಹಿಷ್ಕರಿಸಿದರೆ 2 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿವೆ.
ಪಶ್ಚಿಮ ಬಂಗಾಳ(West Bengal) ಸಿಎಂ ಮಮತಾ ಬ್ಯಾನರ್ಜಿ(Mamata Banargy) ಅವರ ತೃಣಮೂಲ ಕಾಂಗ್ರೆಸ್ ಮೊದಲು ತೆಗೆದುಕೊಂಡ ನಡೆಯನ್ನು ಅನೇಕ ಪ್ರಮುಖ ಪಕ್ಷಗಳು ಅನುಸರಿಸಿವೆ. ಇದಕ್ಕೆ ಕಾಂಗ್ರೆಸ್ ಕೂಡ ಕೈಜೋಡಿಸಿದೆ. ಸಂಸತ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ 19 ಪಕ್ಷಗಳು ಜಂಟಿ ಹೇಳಿಕೆ ನೀಡಿವೆ.
ಈ ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿರೋ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಹೊಸ ಸಂಸತ್ ಕಟ್ಟಡ ಉದ್ಘಾಟನೆಗೆ ಮುಂದಾಗುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣ ಮೂಲೆಗುಂಪು ಮಾಡಿರುವುದು ಘೋರ ಅವಮಾನಕರ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ಹಲ್ಲೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ಅಗತ್ಯವಾಗಿರುತ್ತದೆ ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೆಯ ಪ್ರತಿಯನ್ನು ಹಂಚಿಕೊಳ್ಳಲಾಗಿದೆ.
ಅಲ್ಲದೆ “ಪ್ರಜಾಪ್ರಭುತ್ವದ ಆತ್ಮವನ್ನೇ ಸಂಸತ್‌ನಿಂದ ಹೊಸಕಿ ಹಾಕಿರುವಾಗ, ಹೊಸ ಕಟ್ಟಡದಲ್ಲಿ ನಮಗೆ ಯಾವ ಮೌಲ್ಯವೂ ಕಾಣಿಸುವುದಿಲ್ಲ” ಎಂದು ಈ ಹಿಂದಿನ ಅಧಿವೇಶನಗಳಲ್ಲಿ ಸರಿಯಾದ ಚರ್ಚೆ ನಡೆಸದೆ ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ಆರೋಪಿಸಿವೆ.
ಇನ್ನು ಈ ಕಡೆ ಎನ್‌ಡಿಎ (NDA) ಮಿತ್ರ ಪಕ್ಷವಲ್ಲದ ಒಡಿಶಾದ ಬಿಜೆಡಿ (BJD) ಮತ್ತು ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ(YSRCP) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ಅಧಿಕೃತವಾಗಿ ತಿಳಿಸಿವೆ. ನೂತನ ಸಂಸತ್ ಉದ್ಘಾಟನೆ ದೇಶದ ಪ್ರಜಾಪ್ರಭುತ್ವ ಪಾಲಿಗೆ ಮಹತ್ವದ ದಿನವಾಗಿದೆ. ಭಿನ್ನಾಭಿಪ್ರಾಯಗಳಿದ್ದರೆ ನಂತರ ಕುಳಿತು ಚರ್ಚಿಸೋಣ ಎಂದು ಬಿಜೆಡಿ ಮುಖ್ಯಸ್ಥ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.
ಇದನ್ನೂ ಓದಿ: Priyank kharge: ಹಿಜಾಬ್, ಗೋಹತ್ಯೆ ನಿಷೇಧ ಸೇರಿ ಬಿಜೆಪಿಯ ಹಲವು ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ: ಪ್ರಿಯಾಂಕ್ ಖರ್ಗೆ