FasTag Scam : ಶುರುವಾಗಿದೆ ಹೊಸ ವಂಚನೆ, ಅದುವೇ ಫಾಸ್ಟ್ ಟ್ಯಾಗ್ ಮೋಸ, ಮನೆಯಲ್ಲೇ ಗಾಡಿ ಪಾರ್ಕ್ ಆಗಿದ್ದರೂ ಟೋಲ್ ದುಡ್ಡು ಕಟ್ !

Fastag scam if the car is parked at home the toll will be cut

FasTag Scam: ದುಡ್ಡು ಖರ್ಚು ಆಗಲು ಎಷ್ಟು ಕಾರಣಗಳಿವೆ ಹಾಗೆಯೇ ವಂಚನೆಗೆ ಕೂಡ ಅನಂತ ದಾರಿಗಳು. ಹೌದು ಹೊಸ ತರಹದ ವಂಚನೆ ಎಂದು ಇದೀಗ ಶುರುವಾಗಿದೆ. ಅದುವೇ ಫಾಸ್ಟ್ ಟ್ಯಾಗ್ ವಂಚನೆ(FasTag Scam) !

 

ಟೋಲ್ ಗಳಲ್ಲಿ ವಾಹನ ಸಂದಣಿಯನ್ನು ಕಮ್ಮಿ ಮಾಡಲು ಫಾಸ್ಟ್ ಎಂಬ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಸರಿಯೇ. ಆದರೆ ಅದೀಗ ವಂಚನೆ ಮಾಡಲು ಒಂದು ಕಾರಣವಾಗುತ್ತಿದೆ. ಹೌದು, ಮನೆಯಲ್ಲೇ ನಿಂತಿರುವ ಕಾರಿಗೆ ಕೂಡಾ ಟೋಲ್ ಕಡಿತವಾಗುತ್ತಿರುವ ಘಟನೆಗಳು ಇದೀಗ ವರದಿಯಾಗುತ್ತಿದೆ.

ಮೊನ್ನೆ ಮಂಗಳವಾರ ‘ ಉದಯವಾಣಿ ‘ಯಲ್ಲಿ ಮನೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಟೋಲ್ ಕಡಿತಗೊಳಿಸಿದ ವರದಿ ಪ್ರಕಟವಾಗಿತ್ತು. ಹಾಗೆ ಪ್ರಕಟವಾದ ಸುದ್ದಿ ಓದುತ್ತಿದ್ದ ಮಹಮ್ಮದ್ ರಫೀಕ್ ಎಂಬವರ ಫಾಸ್ಟ್‌ಟ್ಯಾಗ್ ಅಕೌಂಟಿನಿಂದಲೂ ಹಣ ಕಟ್ ಆತ ಕಾಕತಾಳೀಯ ಎನ್ನಿಸುವ ಘಟನೆ ನಡೆದಿದೆ.

ಅಂದು ಸದರಿ ಪತ್ರಿಕೆಯಲ್ಲಿ ವರದಿ ಪ್ರಕಟವಾದಂತೆ, ಮತ್ಯಾಡಿ ಗ್ರಾಮದ ವ್ಯಾಪಾರಿ ರಾಘವೇಂದ್ರ ಪ್ರಭು ಅವರ ಕಾರು ಮೇ 16 ರಂದು ಬಿ.ಸಿ.ರೋಡ್‌ನ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾದ ಮೂಲಕ ಪಾಸ್ ಆಗಿದೆ ಎಂದು ಸೂಚಿಸಿ ಫಾಸ್ಟಾಗ್ ವ್ಯಾಲೆಟ್‌ನಿಂದ ಕಳೆಯಲಾಗಿತ್ತು. ಹಾಗೆ ದುಡ್ಡು ಕಟ್ ಆದ ಸಂದೇಶ ಮೊಬೈಲ್ ಗೆ ಬಂದಿತ್ತು. ಆ ಸಂಬಂಧಿ ವರದಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ ಎಚ್ಚೆತ್ತುಕೊಂಡ ಟೋಲ್ ಮ್ಯಾನೇಜ್ಮೆಂಟ್ ‘ ತಾಂತ್ರಿಕ ದೋಷದಿಂದ ಹೀಗಾಗಿದೆ’ ಎಂದು ಹೇಳಿ ಹಣವನ್ನು ಮರಳಿ ನೀಡಿದ್ದರು.

ಇದೀಗ ಮತ್ತೆ ಅಂತಹುದೇ ಘಟನೆ ನಡೆದಿದೆ. ಆಶ್ಚರ್ಯವೆಂದರೆ, ಆ ವರದಿಯನ್ನು ಓದುತ್ತಿದ್ದಾಗಲೇ ಕುಂದಾಪುರದ ಶಾಸ್ತ್ರಿಸರ್ಕಲ್‌ನ ಫ್ಯಾನ್ಸಿಯ ಮಾಲಕ ಮಹಮ್ಮದ್ ರಫೀಕ್ ಅಕೌಂಟ್ ಮಿಂದ ಫಾಸ್ಟ್ ಟ್ಯಾಗ್ ದುಡ್ಡು ಕಡಿತ ಆದದ್ದು ಆಶ್ಚರ್ಯ ಮೂಡಿದೆ. ರಫೀಕ್ ಅವರ ಮೊಬೈಲ್‌ ಗೆ ಸಂದೇಶವೊಂದು ಬಂದಿದ್ದು ಅದೇ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾದ ಮೂಲಕ ಅವರ ವಾಹನ ಹಾದು ಹೋಗಿದೆ ಎಂದು 30 ರೂಪಾಯಿ ಟ್ಯಾಕ್ಸ್ ಹಾಕಲಾಗಿತ್ತು; ಆದರೆ ಅವರ ಝೆನ್ ಎಸ್ಪಿಲೊ ವಾಹನ ಮಾತ್ರ ಅಲ್ಲೇ ಅಂಗಡಿ ಬಳಿಯಲ್ಲೇ ಪಾರ್ಕ್ ಮಾಡಲಾಗಿತ್ತು!!!

ತದನಂತರ ಅವರು ಟೋಲ್ ಪ್ಲಾಜಾದ ನಿರ್ವಾಹಕ ನವೀನ್ ಶೆಟ್ಟಿ ಅವರನ್ನು ಸಂಪರ್ಕಿಸಿ ದೂರು ನೀಡಿ ಪತ್ರಿಕಾ ವರದಿಯ ಕುರಿತೂ ಉಲ್ಲೇಖಮಾಡಿ ದುಡ್ಡು ವಾಪಸ್ ಪಡೆದಿದ್ದಾರೆ. ಈಗ ಅದೆಷ್ಟೋ ಇಂತಹಾ ‘ ಟೆಕ್ನಿಕಲ್ ಎರರ್ ‘ ಎನ್ನುವ ವಂಚನೆಗಳು ನಡೆಯುತ್ತಿದೆಯೋ ದೇವರೇ ಬಲ್ಲ. ಈಗ ಇರುವ ಹಲವು ವಂಚನಾ ವಿಧಾನಗಳ ಜತೆಗೆ ಇದೊಂದು ಫಾಸ್ಟ್ ಟ್ಯಾಗ್ ವಂಚನೆ ಶುರುವಾಗಿದ್ದು ಆತಂಕ ಮೂಡಿಸಿದೆ. ಫಾಸ್ಟ್ ಟ್ಯಾಗ್ ಹೊಂದಿರುವ ವಾಹನ ಮಾಲೀಕರು ನಿಯಮಿತವಾಗಿ ತಮ್ಮ ಅಕೌಂಟಿನಲ್ಲಿ ಇರುವ ಬ್ಯಾಲೆನ್ಸ್ ಮೊತ್ತವನ್ನು ಗಮನದಲ್ಲಿ ಇಟ್ಟುಕೊಂಡು, ಮೊಬೈಲ್ ಗೆ ಬರುವ ಎಲ್ಲಾ ಸಂದೇಶಗಳ ಬಗ್ಗೆ ಹದ್ದಿನ ಕಣ್ಣಿರಿಸುವುದು ಬಹು ಮುಖ್ಯ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ‌ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣಿಗೆ ಕಾಲೇಜಿಗೆ ಅರ್ಧ ದಿನ ರಜೆ.!

Leave A Reply

Your email address will not be published.