Bajrang Dal: ದಕ್ಷಿಣ ಕನ್ನಡದ ಮಾಣಿಯಲ್ಲಿ ಬಜರಂಗದಳ ಬಿಜೆಪಿ ಕಾರ್ಯಕರ್ತರ ಮೇಲೆ ತಳವಾರ್ ದಾಳಿ

Dakshina kannada Talwar attack on bhajarang dal and BJP workers

Bajrang Dal: ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಅಟ್ಯಾಕ್ ನಡೆದಿದೆ. ಬಜರಂಗದಳ (Bajrang Dal)  ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ತಲ್ವಾರ್ ದಾಳಿ ನಡೆದಿದೆ ಎನ್ನಲಾಗಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಈ ತಲ್ವಾರ್ ದಾಳಿ ನಡೆದಿದೆ. (ಇದೀಗ ಬಂದ ಲೇಟೆಸ್ಟ್ ಸುದ್ದಿ: ಅದು ತಲ್ವಾರ್ ಅಲ್ಲ, ಕಟ್ಟಿಗೆ ತುಂಡು ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ)

 

ಬಜರಂಗದಳ ಪೆರಾಜೆ ಸಂಚಾಲಕ ಮಹೇಂದ್ರ ಮೇಲೆ ಮತ್ತು ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಎಂಬವರ ಹಲ್ಲೆ ನಡೆದಿದೆ. ಈ ಹುಡುಗರು ಕೆಲಸ ಮುಗಿಸಿ ಮನೆಗೆ ಹೋಗುತ್ತಾ ಇರುವಾಗ ಅಟ್ಯಾಕ್ ನಡೆದಿದೆ.

ಮೊದಲು, ಇವರು ಸಾಗುತ್ತಿದ್ದ ವಾಹನಕ್ಕೆ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಡಿಕ್ಕಿ ಹೊಡೆದಿದ್ದಾರೆ. ನಂತರ ತಲ್ವಾರ್ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಯುವಕರು ಪ್ರಾಣಾಯಪಾಯದಿಂದ ಪಾರಾಗಿದ್ದಾರೆ.

ಈ ಹಿಂದೆ ಕೂಡ ಆರೋಪಿಗಳ ಗುಂಪೊಂದು ತಳವಾರ್ ತೋರಿಸಿ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ವಾರ್ನಿಂಗ್ ಕೊಟ್ಟು ಕಳಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಈಗ ಹಿಂದೂ ಪರ ಸಂಘಟನೆಗಳ ಹುಡುಗರ ಮೇಲೆ ತಳವಾರು ದಾಳಿ ನಡೆದಿದೆ. ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. (ಇದೀಗ ಬಂದ ಲೇಟೆಸ್ಟ್ ಸುದ್ದಿ: ಅದು ತಲ್ವಾರ್ ಅಲ್ಲ, ಕಟ್ಟಿಗೆ ತುಂಡು ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ)

Leave A Reply

Your email address will not be published.