Uttar pradesh: ಚುನಾವಣೆಯಲ್ಲಿ ಸೋತ ಸೊಸೆ; ಥಳಿಸಿ, ಮನೆಯಿಂದ ಹೊರ ಹಾಕಿದ ಪಾಪಿಗಳು!
Uttar Pradesh women beaten up frer civic poll defeat
Uttar pradesh election: ಚುನಾವಣೆಗಳಲ್ಲಿ (Election) ಸೋಲು ಗೆಲುವುಗಳೆಂಬುದು ಸರ್ವೇ ಸಾಮಾನ್ಯ. ಗೆದ್ದರೆ ಸಂಭ್ರಮಿಸಿತ್ತಾ, ಸೋತರೆ ಕುಗ್ಗದೆ ಸಮಾಧಾನ ಮಾಡಿಕೊಳ್ಳುತ್ತಾ ಮುಂದಿನ ಚುನಾವಣೆಗೆ ತಯಾರಾಗಬೇಕು. ಈ ವೇಳೆ ಕುಟುಂಬದವರೂ ಅವರೊಂದಿಗೆ ಭಾಗಿಯಾಗಬೇಕು. ಆದರೆ ಇಲ್ಲೊಂದೆಡೆ ಚುನಾವಣೆಯಲ್ಲಿ ತಮ್ಮ ಮನೆಯ ಸೊಸೆ ಸೋತಳೆಂದು ಅವಳನ್ನು ಮನೆಯಿಂದ ಹೊರ ಹಾಕಿದ ಅವಮಾನಕರವಾದ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ(Uttar pradesh election) ನಡೆದ ನಗರ ಪಂಚಾಯಿತಿ(Nagar panchayat) ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮಹಿಳೆಯೊಬ್ಬರು ಪರಾಭವಗೊಂಡರೆಂಬ ಕಾರಣಕ್ಕೆ ಆಕೆಯ ಮಾವ ಹಾಗೂ ಕುಟುಂಬ ಸದಸ್ಯರು, ಮನೆಯ ಸೊಸೆಯೆಂದೂ ನೋಡದೆ ದೊಣ್ಣೆಯಿಂದ ಥಳಿಸಿ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ.
31 ವರ್ಷದ ಹೀನಾ ಫರೀದಿ(Heena Pharidi) ಎಂಬ ಮಹಿಳೆ ಸಂತ್ರಸ್ಥೆ ಎಂದು ತಿಳಿದುಬಂದಿದೆ. ಅಂದಹಾಗೆ ಬರೇಲಿ ಜಿಲ್ಲೆಯ(Bareli district) ಶೇರ್ಗರ್(Shergar) ಎಂಬಲ್ಲಿ ಈಕೆಯ ಪತಿ ನವಾಬ್ ಹಸನ್(Navab hasan) ಖಾನ್ ಈ ಭಾಗದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಈ ಹಿಂದೆ ನಗರ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಬಳಿಕ ಮೂರು ವರ್ಷಗಳ ಹಿಂದೆ ಆತ ಮೃತಪಟ್ಟಿದ್ದು, ಹೀನಾ ಅವರನ್ನು ಮನೆಯಿಂದ ಹೊರ ಹಾಕಲಾಗಿತ್ತು.
ಆದರೆ ಇತ್ತೀಚೆಗೆ ಚುನಾವಣೆ ಘೋಷಣೆಯಾದ ಬಳಿಕ ಈ ಕ್ಷೇತ್ರದ ಮೀಸಲನ್ನು(Reservation) ಮಹಿಳೆಗೆ ನಿಗದಿಗೊಳಿಸಿದ್ದು, ಹೀಗಾಗಿ ಹೀನಾ ಅವರನ್ನು ಗಂಡನ ಮನೆಯವರು ಮತ್ತೆ ಕರೆದುಕೊಂಡು ಬಂದಿದ್ದರು. ಆದರೆ ಚುನಾವಣೆಯಲ್ಲಿ ಹೀನಾ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಗಂಡನ ಮನೆಯವರು ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೂ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಥಳಿಸಿ ಮನೆಯಿಂದ ಮತ್ತೆ ಹೊರಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಸದ್ಯ ಸೋಮವಾರದಂದು ಈ ಕುರಿತು ಸಂತ್ರಸ್ತ ಮಹಿಳೆ ಹೀನಾ ಫರೀದಿ, ಬರೇಲಿ ಜಿಲ್ಲೆಯ ಶೇರ್ಗರ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Opposition leader : ಸಿಎಂ ಆಯ್ಕೆಗಿಂತಲೂ ಕಗ್ಗಂಟಾಯ್ತು ವಿಪಕ್ಷ ನಾಯಕನ ಆಯ್ಕೆ! ಬಿಜೆಪಿ ಪಾಳಯದಲ್ಲಿ ಬಗೆಹರಿಯದ ಗೊಂದಲ!!