Uttar pradesh: ನೋಟ್ ಬ್ಯಾನ್ ಎಫೆಕ್ಟ್: ಪೆಟ್ರೋಲ್ ಹಾಕಿಸಿ 2000 ರೂ.ನೋಟು ನೀಡಿದ್ದಕ್ಕೆ ಸ್ಕೂಟಿಯಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್​ ಸಿಬ್ಬಂದಿ!! ವಿಡಿಯೋ ವೈರಲ್

Uttar Pradesh Petrol Pump Worker Drains Out Fuel From Scooter

Uttar pradesh: ದೇಶದಲ್ಲಿ 2000 ರೂ ಮುಖಬೆಲೆಯ ನೋಟುಗಳಿಗೆ(2000rps notes) ಕೇಂದ್ರ ಸರ್ಕಾರ ತಿಲಾಂಜಲಿ ಹಾಡಲು ಮುಂದಾಗಿದೆ. ಈ ಗಾಗಲೇ ಕೆಲವೆಡೆ ನೋಟ್ ಬ್ಯಾನ್ ಎಫೆಕ್ಟ್(Note ban effect) ಶುರುವಾಗಿದೆ. ಈ ನಡುವೆ 2000ರೂ ನೋಟನ್ನು ನೀಡಿ ಪೆಟ್ರೋಲ್​(Petrol) ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್​ನ್ನು ಹೊರೆತೆಗೆದಿರುವ ವಿಚಿತ್ರ ಘಟನೆಯೊಂದು ನಡೆದಿದೆ.

 

ಹೌದು, ಉತ್ತರಪ್ರದೇಶದ(Uttar pradesh) ಜಲೌನ್​ನ(Jaloun) ಕೊತ್ವಾಲಿ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್ ಗೆ(Petrole bunk) ಸ್ಕೂಟಿ ಸವಾರರೊಬ್ಬ ಬಂದು ಪೆಟ್ರೋಲ್ ಹಾಕಿಸಿದ್ದಾರೆ. ಪೆಟ್ರೋಲ್​ ಹಾಕಿಸಿದ ಬಳಿಕ, ಪೆಟ್ರೋಲ್​ ಬಂಕ್​ ಸಿಬ್ಬಂದಿಗೆ 2000 ರೂ. ಮುಖಬೆಲೆಯ ನೋಟನ್ನು ನೀಡಿದ್ದಾನೆ. ಆಗ ಪೆಟ್ರೋಲ್​ ಬಂಕ್​​ ಸಿಬ್ಬಂದಿ ನೋಟನ್ನು ಪಡೆಯಲು ನಿರಾಕರಿಸಿ, ಸ್ಕೂಟಿಯಿಂದ ಮತ್ತೆ ಪೆಟ್ರೋಲ್​ನ್ನು ಹೊರ ತೆಗೆದು ಗ್ರಾಹಕನನ್ನು ಕಳುಹಿಸಿದ್ದಾರೆ.

ಅಂದಹಾಗೆ ಸ್ಟೇಷನ್ ರಸ್ತೆ(Station road)ಯಲ್ಲಿರುವ ಪೆಟ್ರೋಲ್ ಪಂಪ್ ಆಪರೇಟರ್(Petrol operator punmp)ಪಂಪ್‌ಗೆ ನೋಟಿಸ್ ಅಂಟಿಸಿದ್ದಾರೆ. ಎರಡು ಸಾವಿರಕ್ಕೆ ಚಿಲ್ಲರೆ ಇಲ್ಲ ಎಂದು ಬರೆಯಲಾಗಿದೆ. ಇದರ ಮೇಲೆ ಜನರು 2000 ರೂಪಾಯಿ ನೋಟುಗಳನ್ನು ಹಿಡಿದುಕೊಂಡು ಅಲೆದಾಡುವ ದೃಶ್ಯ ಕಂಡುಬರುತ್ತಿದೆ.

ಸಾಮಾನ್ಯ ನಾಗರಿಕರು ನಿತ್ಯ ಬ್ಯಾಂಕ್​ಗಳಿಗೆ ಹೋಗಲು ಸಾಧ್ಯವಾಗದು, ಆದರೆ ಪೆಟ್ರೋಲ್ ಬಂಕ್​, ಬಸ್, ಹೋಟೆಲ್​​ ಇನ್ನಿತರೆ ಸೇವೆಗಳಲ್ಲಿ ಸಿಬ್ಬಂದಿ ನಿತ್ಯ ಹಣವನ್ನು ಬ್ಯಾಂಕ್​ಗೆ ಜಮಾವಣೆ ಮಾಡುತ್ತಾರೆ, ಅವರು ಸೆಪ್ಟೆಂಬರ್​ವರೆಗೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಿದರೆ ಜನರಿಗೆ ಸ್ವಲ್ಪ ಅನುಕೂಲವಾಗಬಹುದು.

ಇದಲ್ಲದೆ 2000 ರೂ. ಮುಖಬೆಲೆಯ ನೋಟುಗಳ ಚಲಾವಣೆ, ವಿತರಣೆಯನ್ನ ಆರ್‌ಬಿಐ(RBI) ಬಂದ್‌ ಮಾಡಿದೆ. ಇಂದಿನಿಂದ ಅಂದರೆ ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಹೇಗೆ ವಾಪಾಸ್ ಮಾಡಬೇಕು ಎನ್ನುವುದಕ್ಕೆ ಈಗಾಗಲೇ ಆರ್‌ಬಿಐ ಕ್ಲಾರಿಟಿ ನೀಡಿದೆ. ನೋಟು ವಾಪಾಸ್ ಕೊಡಲು ಅರ್ಜಿಯನ್ನೂ ಕೂಡಾ ಬಿಡುಗಡೆ ಮಾಡಿದೆ.

 

 

ಇದನ್ನು ಓದಿ: Bad luck: ಶಾಸ್ತ್ರ ಪ್ರಕಾರ ಈ ವಸ್ತುಗಳು ಕೆಳಗೆ ಬಿದ್ದರೆ ನಿಮಗೆ ದುರಾದೃಷ್ಟ ಕಾಡಲಿದೆ! ಎಚ್ಚರ

Leave A Reply

Your email address will not be published.