Opposition leader: ಸಿಎಂ ಆಯ್ಕೆಗಿಂತಲೂ ಕಗ್ಗಂಟಾಯ್ತು ವಿಪಕ್ಷ ನಾಯಕನ ಆಯ್ಕೆ! ಬಿಜೆಪಿ ಪಾಳಯದಲ್ಲಿ ಬಗೆಹರಿಯದ ಗೊಂದಲ!!
Opposition leader selection in bjp
Opposition leader: ಕರ್ನಾಟಕದಲ್ಲಿ(Karnataka) ಮುಖ್ಯಮಂತ್ರಿ(CM) ಆಯ್ಕೆ ತಲೆಬಿಸಿ ಮುಗಿದು, ಪ್ರಮಾಣವಚನವನ್ನೂ ಪಡೆದು, ಇದೀಗ ಅಧಿವೇಶನವೂ ಆರಂಭವಾಗಿದೆ. ಆದರೆ ಇದೀಗ ಬಿಜೆಪಿ(BJP) ಪಾಳಯದಲ್ಲಿ ಭಾರಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ವಿಧಾನಸಭೆಯ ವಿಪಕ್ಷ ನಾಯಕನ(Assembly opposition leader) ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಅದೂ ಕೂಡ ಸರ್ಕಾರದ ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾಗಿ ಪರಿಣಮಿಸಿದೆ.
ಹೌದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 4 ದಿನಗಳಾದರೂ, ವಿರೋಧ ಪಕ್ಷದ ನಾಯಕರು ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಬಿಜೆಪಿಯಲ್ಲಿ ಉತ್ತರ ಸಿಕ್ಕಿಲ್ಲ. ಚುನಾವಣಾ ಫಲಿತಾಂಶ ಬಂದು 10 ದಿನಗಳು ಕಳೆದಿವೆ. ಆದರೂ ಕೂಡ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಈಗಾಗಲೇ ವಿಳಂಬವಾಗಿದೆ. ಚುನಾವಣೆಯಲ್ಲಿ ಹಲವು ಘಟಾನುಘಟಿ ನಾಯಕರ ಸೋಲಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಇದೇ ಆಘಾತದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿ ಇನ್ನೂ ಯಾರ ಹೆಸರನ್ನು ಸೂಚಿಸಿಲ್ಲ. ಅದರಲ್ಲೂ ಸದನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಕುವ ಯಾವ ನಾಯಕರು ಇಲ್ಲದಂತಾಗಿದೆ.
ಈ ನಡುವೆ ವಿಪಕ್ಷ ನಾಯಕ, ಉಪನಾಯಕ ಮತ್ತು ಸಚೇತಕನ ಆಯ್ಕೆಯಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತಿದೆಯೇ? ಹೈಕಮಾಂಡ್ ನಿರ್ಣಯವೇ ಅಂತಿಮವೇ? ಅಲ್ಲದೆ ನಾಯಕರ ಸ್ಥಾನವನ್ನು ತುಂಬಲು ಯಾವೆಲ್ಲ ಲೆಕ್ಕಾಚಾರಗಳು ಮುಖ್ಯವಾಗುತ್ತವೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ.
ಅಂದಹಾಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಪಕ್ಷದ ಮುಖಂಡ ಸುನೀಲ್ ಕುಮಾರ್ (Sunil Kumar) ಹಾಗೂ ಯತ್ನಾಳ್ (Basanagouda Patil Yatnal) ಅವರ ಹೆಸರು ವಿಪಕ್ಷ ನಾಯಕನ ಸ್ಥಾನದ ರೇಸ್‍ನಲ್ಲಿವೆ. ಉಪನಾಯಕನ ಸ್ಥಾನಕ್ಕೆ ಮಾಜಿ ಸಚಿವ ಆರ್.ಅಶೋಕ್ (R Ashok), ಅಶ್ವತ್ಥ್ ನಾರಾಯಣ್ ಮತ್ತು ಅರವಿಂದ ಬೆಲ್ಲದ್ ಹೆಸರು ಕೇಳಿ ಬಂದಿವೆ. ಆದರೆ ವಿಪಕ್ಷ ನಾಯಕನ ಪಟ್ಟ ಯಾರಿಗೆ? ಎಂಬ ಪ್ರಶ್ನೆಗೆ ಸದ್ಯದಲ್ಲಿ ಉತ್ತರ ಸಿಗುವ ಹಾಗೆ ಕಾಣುತ್ತಿಲ್ಲ.
ಇನ್ನು ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ(CM) ಹೀನಾಯವಾಗಿ ಸೋಲಲು ಸಮರ್ಥ ನಾಯಕತ್ವದ ಕೊರತೆ ಬಹುಮಖ್ಯವಾದ ಕಾರಣ ಎನ್ನಬಹುದು. ಯಡಿಯೂರಪ್ಪರನ್ನು(Yadiyurappa) ಬಿಟ್ಟರೆ ಬಿಜೆಪಿಯಲ್ಲಿ ಅಂತಹ ದೊಡ್ಡ ಪ್ರಭಾವಿ ನಾಯಕರು ಯಾರೂ ಇಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆದರೂ ಕೂಡ ನಾಯಕತ್ವದ ಯಾವುದೇ ಗುಣಗಳು ಅವರಲ್ಲಿರಲಿಲ್ಲ.
ವಿಪಕ್ಷ ಸ್ಥಾನ ಗಟ್ಟಿಯಾಗಿದ್ದರೆ ಸರ್ಕಾರವೂ ಸರಿದಾರಿಯಲ್ಲಿರುತ್ತದೆ ಎಂಬುದು ಅಕ್ಷರಶಃ ಸತ್ಯ. ಸರ್ಕಾರದ ನಡೆಗಳನ್ನು ಧೈರ್ಯವಾಗಿ ಪ್ರಶ್ನಿಸಿ, ಸರಿಯಾದ ರೀತಿಯಲ್ಲಿ ಸಮರ್ಥಿಸಬೇಕು. ಆದರೆ ಬಸವರಾಜ ಬೊಮ್ಮಾಯಿ ಅವರಿಗೆ ಏನಾದರೂ ಈ ಸ್ಥಾನ ನೀಡಿದರೆ ಬಿಜೆಪಿ ಮತ್ತೂ ಕುಗ್ಗುತ್ತದೆ. ಯಾಕೆಂದರೆ ಬೊಮ್ಮಾಯಿ ಅವರಿಗೆ ಆ ತರದ ಗಡಸು ಇಲ್ಲವೆನ್ನಬಹುದು. ಅದು ಅವರ ಸ್ವಭಾವ ಇದ್ದರೂ ಇರಬಹುದು. ಅವರು ಸಿಎಂ ಆದಾಗಲೂ ಅವರ ಮಾತುಗಳನ್ನು ನಾವು ಕೇಳಿದ್ದೇವೆ. ಅದೂ ಅಲ್ಲದೆ ಬಜೆಟ್ ಓದಿದ ಪರಿಯನ್ನು ನೋಡಿದರಂತೂ ಯಾವುದಕ್ಕೂ ಪ್ರಯೋಜನ ಇಲ್ಲ ಎನಿಸುತ್ತದೆ. ಹೀಗಾಗಿ ಬಿಜೆಪಿ ತನ್ನ ಒಳ ರಾಜಕಾರಣ ಬಿಟ್ಟು ಸಮರ್ಥರನ್ನು ವಿಪಕ್ಷ ನಾಯಕನನ್ನಾಗಿ ಮಾಡಿದರೆ ಒಳಿತು.
ಇದನ್ನೂ ಓದಿ: Aravind Kejriwal : ಎಎಪಿ ಪ್ರಣಾಳಿಕೆ ಬಳಸಿ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್: ಅರವಿಂದ್ ಕೇಜ್ರಿವಾಲ್ ವ್ಯಂಗ್ಯ!