BBMP: ಬೆಂಗಳೂರು ಮಹಾಮಳೆಗೆ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ : BBMP ಮುಖ್ಯ ಆಯುಕ್ತರ ಘೋಷಣೆ

BBMP Chief Commissioner announces compensation for family of those who died in rain

Share the Article

ಬೆಂಗಳೂರು : ನಿನ್ನೆ (ಮೇ.22) ಸುರಿದ ಭಾರೀ ಮಳೆಗೆ ಇಬ್ಬರು ಮೃತಪಟ್ಟಿದ್ದು, ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ ಎಂದು BBMP ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಘೋಷಣೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ BBMP ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಮಾತನಾಡಿ, ಭಾನುವಾರ ನಗರದಲ್ಲಿ ಭಾರೀ ಮಳೆ ಸುರಿದಿದ್ದು, ಮಧ್ಯಾಹ್ನ ಹೊತ್ತಿಗೆ ಸುಮಾರು 3.15 ರಿಂದ 4 ಗಂಟೆಯವರೆಗೆ ಬೆಂಗಳೂರಿನಲ್ಲಿ 50 ಮಿ.ಮೀ ಮಳೆ ಸುರಿದಿದೆ. ಅಲ್ಲದೇ 45 ನಿಮಿಷದಲ್ಲಿ ಭಾರೀ ಮಳೆಯಾದ ಪರಿಣಾಮ 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.

ಬೆಂಗಳೂರಿನಲ್ಲಿ 18 ಅಂಡರ್ ಪಾಸ್ ಗಳಿವೆ. ನಗರದ ಎಲ್ಲಾ ಅಂಡರ್ ಪಾಸ್ ಗಳ ಸರ್ವೆ ನಡೆಯುತ್ತಿದೆ ಡ್ರೈನೇಜ್ ಇಲ್ಲ, ಅಂಡರ್ ಪಾಸ್ ಗಳನ್ನು ಬಂದ್ ಮಾಡಲಾಗುವುದು. ಅಂಡರ್‌ ಪಾಸ್‌ ಸಮಸ್ಯೆಯಿಂದಲೇ ನಿನ್ನೆ ಇಬ್ಬರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು ಮಹಾಮಳೆ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು BBMP ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಆರ್.ಎಸ್.ಎಸ್.ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಇನ್ನಿಲ್ಲ

Leave A Reply